ಹಾಸ್ಟೆಲ್‌ ಮಕ್ಕಳಿಗೆ ಸೌಲಭ್ಯ ಪೂರೈಸದಿದ್ದರೆ ವರ್ಗಾವಣೆ

KannadaprabhaNewsNetwork | Published : Aug 19, 2024 12:45 AM

ಸಾರಾಂಶ

ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಅನುದಾನ ಕೊಟ್ಟಿದೆ. ಹಾಸ್ಟೆಲ್ ಮೇಲುಸ್ತುವಾರಿ ವಹಿಸಿಕೊಂಡ ಅಧಿಕಾರಿಗಳು ಗುತ್ತಿಗೆದಾರರ ಹಣದಾಹಕ್ಕೆ ವಿದ್ಯಾರ್ಥಿಗಳು ಸೊರಗುತ್ತಿದ್ದು, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡದಿದ್ದರೆ ಕ್ರಮ ಕೈಗೊಳ್ಳಲಾಗುವುದು

ಕನ್ನಡಪ್ರಭ ವಾರ್ತೆ ಕೋಲಾರಹಾಸ್ಟೆಲ್‌ನಲ್ಲಿ ಓದುವ ಮಕ್ಕಳು, ಆರ್ಥಿಕವಾಗಿ ಹಿಂದುಳಿದ, ಬಡವರು ಮಕ್ಕಳಾಗಿದ್ದು, ಅವರ ಶಿಕ್ಷಣಕ್ಕಾಗಿ ಸರ್ಕಾರವು ಕೋಟ್ಯತರ ರುಪಾಯಿ ಖರ್ಚು ಮಾಡುತ್ತಿದೆ. ಅವರಿಗೆ ಸೌಲಭ್ಯ ಪೂರೈಸದ ಸಿಬ್ಬಂದಿಯನ್ನು ಬೇರೆ ಕಡೆಗೆ ವರ್ಗಾವಣೆ ಮಾಡುವಂತೆ ಶಾಸಕ ಕೊತ್ತೂರು ಮಂಜುನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ತಾಪಂ ಸಭಾಂಗಣದಲ್ಲಿ ಸಮಾಜಕಲ್ಯಾಣ, ಹಿಂದುಳಿದ, ಹಾಗೂ ಅಲ್ಪಸಂಖ್ಯಾತರ ಇಲಾಖೆಗಳ ಹಾಸ್ಟೆಲ್ ವಾರ್ಡನ್ ಗಳ ಸಭೆಯಲ್ಲಿ ಮಾತನಾಡಿದ ಅವರು, ಹಾಸ್ಟೆಲ್ ಗಳಿಗೆ ಆಹಾರ ಪೂರೈಕೆ ಮಾಡಲು ದೊಡ್ಡ ಮಾಫಿಯಾ ಸೃಷ್ಟಿಯಾಗಿದೆ ಎಂದರು.

ಅಧಿಕಾರಿಗಳಿಗೆ ಎಚ್ಚರಿಕೆ

ಗುಣಮಟ್ಟದ ಆಹಾರ ಕೊಡಬೇಕಾದ ಗುತ್ತಿಗೆದಾರರು ಏನು ಮಾಡತ್ತಾರೆಂದು ಗೊತ್ತಿದೆ. ಇದು ಇಲ್ಲಿಗೆ ನಿಲ್ಲಬೇಕು ಮುಂದೆ ನಡೆಯಬಾರದು ಇದನ್ನು ವಾರ್ನಿಂಗ್‌ ಅಂತ ಆದರೂ ತಿಳಿದುಕೊಳ್ಳಲಿ ಅಥವಾ ಮನವಿ ಅಂತ ಆದರೂ ತಿಳಿದುಕೊಳ್ಳಲಿ. ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಅನುದಾನ ಕೊಟ್ಟಿದೆ. ಹಾಸ್ಟೆಲ್ ಮೇಲುಸ್ತುವಾರಿ ವಹಿಸಿಕೊಂಡ ಅಧಿಕಾರಿಗಳು ಗುತ್ತಿಗೆದಾರರ ಹಣದಾಹಕ್ಕೆ ವಿದ್ಯಾರ್ಥಿಗಳು ಸೊರಗುತ್ತಿದ್ದು, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡದಿದ್ದರೆ ಪರಿಣಾಮ ಸರಿ ಇರಲ್ಲ ಎಂದು ಎಚ್ಚರಿಕೆ ನೀಡಿದರು ಹಾಸ್ಟೆಲ್ ಮಕ್ಕಳಿಗೆ ಆಹಾರ ಸರಬರಾಜು ಮಾಡುವ ಸಂದರ್ಭದಲ್ಲಿ ಸ್ಥಳದಲ್ಲಿಯೇ ಪರೀಕ್ಷೆ ಮಾಡಿಕೊಳ್ಳಿ ಗುಣಮಟ್ಟ ಇದ್ದರೆ ನೋಡಿ ಇಲ್ಲದೇ ಹೋದರೆ ವಾಪಸ್‌ ಕಳಸಿ ಮಕ್ಕಳ ಶಿಕ್ಷಣದ ಬಗ್ಗೆ ವಾರ್ಡನ್‌ಗಳ ನಿರ್ಲಕ್ಷ್ಯದ ವಿರುದ್ಧ ತರಾಟೆಗೆ ತೆಗೆದುಕೊಂಡರು. ಮುಂದೆ ಶಾಸಕರು ಎಂಎಲ್ಸಿ ಸೇರಿದಂತೆ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಹಾಸ್ಟೆಲ್ ಗಳಲ್ಲಿಯೇ ವಾಸ್ತವ್ಯ ಮಾಡತ್ತೇವೆ. ವ್ಯವಸ್ಥೆ ಗಮನಿಸುತ್ತೇವೆ ಸಮಸ್ಯೆಗಳು ದೂರುಗಳು ಕಂಡುಬಂದರೆ ಸ್ಥಳದಲ್ಲಿಯೇ ಕ್ರಮ ಕೈಗೊಳ್ಳಲಾಗುತ್ತದೆ. ಕೂಡಲೇ ನಿರಂತರವಾಗಿ ಅಧಿಕಾರಿಗಳು ಹಾಸ್ಟೆಲ್ ಗಳಿಗೆ ಭೇಟಿ ನೀಡಬೇಕು ಗುಣಮಟ್ಟ ಮೂಲಭೂತ ಸೌಕರ್ಯ ನೀಡಬೇಕು ಎಂದು ಸೂಚನೆ ನೀಡಿದರು. ಇಲ್ಲಿ ಶ್ರೀಮಂತರ ಮಕ್ಕಳು ಇಲ್ಲ

ಹಾಸ್ಟೆಲ್‌ಗಳಿಗೆ ಶ್ರೀಮಂತ ಮಕ್ಕಳು ಯಾರು ಬರಲ್ಲ ಗ್ರಾಮಸ್ಥರು ಕೂಡ ಬರತ್ತಾರೆ ಆಹಾರ ಪದಾರ್ಥ ವಿತರಣೆ ಸಮರ್ಪಕವಾಗಿ ಆಗುತ್ತಿದೆಯೇ ಎಂದು ಪರಿಶೀಲಿಸುತ್ತಾರೆ ಕೆಲವು ಹಾಸ್ಟೆಲ್ ಗಳಲ್ಲಿ ರಾತ್ರಿ ವೇಳೆ ಮಕ್ಕಳು ಇರುವುದಿಲ್ಲ ಮಕ್ಕಳು ರಾತ್ರಿ ಊಟವಾದ ನಂತರ ಮನೆಗೆ ಕರೆದುಕೊಂಡು ಹೋಗುತ್ತಾರೆ ಎಲ್ಲ ಸೌಲಭ್ಯ ಇದ್ದೂ, ಯಾಕೆ ಮನೆಗೆ ಕರೆದುಕೊಂಡು ಹೋಗುತ್ತಾರೆ ಮನೆಗೆ ಹೋಗುವುದಾರೆ ಹಾಸ್ಟೆಲ್ ಯಾಕೆ ಬೇಕು ಹಾಸ್ಟೆಲ್ ನಲ್ಲಿ ಇಲ್ಲದಿದ್ದರೂ ಬಿಲ್ ಮಾತ್ರ ಆಗುತ್ತದೆ. ಸಮಸ್ಯೆಗಳು ಕೊರತೆಗಳು ಇದ್ದರೆ ಮಾಹಿತಿ ಕೊಡಿ ಸರಿಪಡಿಸುತ್ತೇವೆ ಎಂದರು.ಶಾಸಕರ ಮೊಬೈಲ್‌ ಸಂಖ್ಯೆ

ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಹಾಸ್ಟೆಲ್ ಗಳಿಗೆ ಆಹಾರ ಪೂರೈಕೆ ಮಾಡುವವರು ಯಾರು ಅಂತ ಅವರ ಮುಖ ಸಹ ನೋಡಿಲ್ಲ ನೀವುಗಳು ಮಾಡೋ ತಪ್ಪುಗಳನ್ನು ನೋಡಿ ಕಣ್ಣು ಮುಚ್ಚಿ ಕುಳಿತುಕೊಳ್ಳಲ್ಲ. ಮುಂದೆ ನೇರವಾಗಿ ಹಾಸ್ಟೆಲ್ ಗಳಿಗೆ ಬರತ್ತೇವೆ ನಾವು ಬಂದಾಗ ದೂರು ಬಂದರೆ ಪರಿಣಾಮ ಸರಿ ಇರಲ್ಲ. ಪ್ರತಿ ಹಾಸ್ಟೆಲ್‌ನ ನೋಟಿಸ್ ಬೋರ್ಡ್‌ನಲ್ಲಿ ಶಾಸಕರು, ಎಂಎಲ್ಸಿ, ಅಧಿಕಾರಿಗಳ ಮೊಬೈಲ್ ಸಂಖ್ಯೆ ಹಾಕಿ ಸಮಸ್ಯೆಗಳನ್ನು ವಿದ್ಯಾರ್ಥಿಗಳು ತಿಳಿಸಲು ಸಾಧ್ಯವಾಗುತ್ತದೆ ಎಂದರು.ಉಪವಿಭಾಗಾಧಿಕಾರಿ ಮೈತ್ರಿ, ತಹಸೀಲ್ದಾರ್ ನಯನಾ, ತಾಲೂಕು ಪಂಚಾಯತಿ ಇಒ ಮಂಜುನಾಥ್ ಜಿಲ್ಲಾ ಹಿಂದುಳಿದ ಇಲಾಖೆಗಳ ಜಿಲ್ಲಾಧಿಕಾರಿ ಮಂಜುನಾಥ್, ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ಶ್ರೀನಿವಾಸನ್, ತಾಲೂಕು ಸಹಾಯಕ ನಿರ್ದೇಶಕ ಚನ್ನಬಸಪ್ಪ, ಸೇರಿದಂತೆ ವಾರ್ಡನ್ ಗಳು ಸಭೆಯಲ್ಲಿ ಇದ್ದರು.

Share this article