ರಾಣಿಬೆನ್ನೂರಿನಿಂದ ಜೋಗ್‌ ಫಾಲ್ಸ್‌ಗೆ ಸಾರಿಗೆ ಸೌಲಭ್ಯ

KannadaprabhaNewsNetwork |  
Published : Jul 23, 2025, 02:11 AM IST
ಬಸ್ | Kannada Prabha

ಸಾರಾಂಶ

ಈ ವಿಶೇಷ ಬಸ್‌ಗಳಿಗೆ ಮುಂಗಡ ಟಿಕೇಟ್ ಬುಕ್ಕಿಂಗ್‌ಗಾಗಿ www.ksrtc.inನಲ್ಲಿ ಆಸನಗಳನ್ನು ಕಾಯ್ದಿರಿಸಬಹುದು.

ಹಾವೇರಿ: ಪ್ರತಿ ಭಾನುವಾರ ಹಾಗೂ ರಜಾ ದಿನಗಳಂದು ವಿಶ್ವ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾದ ಜೋಗ್‌ಫಾಲ್ಸ್‌ಗೆ ಹೋಗುವ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜು. 27ರಿಂದ ರಾಣಿಬೆನ್ನೂರು ಬಸ್ ನಿಲ್ದಾಣದಿಂದ ಹೋಗ್ ಫಾಲ್ಸ್‌ಗೆ ವಿಶೇಷ ಸಾರಿಗೆ ಕಾರ್ಯಾಚರಣೆ ಪ್ರಾರಂಭಿಸಲು ಉದ್ದೇಶಿಸಲಾಗಿದೆ.ರಾಣಿಬೆನ್ನೂರಿನಿಂದ ಜೋಗ್ ಫಾಲ್ಸ್‌ಗೆ ಬೆಳಗ್ಗೆ 7.30 ಗಂಟೆಗೆ ಹಿರೆಕೇರೂರು, ಶಿರಾಳಕೊಪ್ಪ, ಸೊರಬ ಮಾರ್ಗವಾಗಿ ಹೊರಟು 10.30 ಗಂಟೆಗೆ ಬನವಾಸಿ ತಲುಪಿ, ಅಲ್ಲಿನ ಪ್ರೇಕ್ಷಣೀಯ ಸ್ಥಳ ವೀಕ್ಷಿಸಿ ಅಲ್ಲಿಂದ 11.30 ಗಂಟೆಗೆ ಬಿಟ್ಟು ಶಿರಸಿಗೆ 12 ಗಂಟೆಗೆ ತಲುಪಿ, ಮಾರಿಕಾಂಬಾ ದೇವಿಯ ದರ್ಶನ ಮಾಡಿಸಿಕೊಂಡು ಜೋಗ್‌ ಫಾಲ್ಸ್‌ಗೆ ತೆರಳಲಿದೆ. ಪುನಃ ಸಂಜೆ 4.15 ಗಂಟೆಗೆ ಜೋಗ್ ಫಾಲ್ಸ್‌ದಿಂದ ಹೊರಟು ರಾಣಿಬೆನ್ನೂರಿಗೆ ಸಂಜೆ 7.45 ಗಂಟೆಗೆ ತಲುಪಲಿದೆ. ಜೋಗ್ ಫಾಲ್ಸ್ ವೀಕ್ಷಣೆಗೆ ಮೂರು ಗಂಟೆಗಳ ಕಾಲಾವಕಾಶ ಇರುತ್ತದೆ.ಈ ವಿಶೇಷ ಬಸ್‌ಗಳಿಗೆ ಮುಂಗಡ ಟಿಕೇಟ್ ಬುಕ್ಕಿಂಗ್‌ಗಾಗಿ www.ksrtc.inನಲ್ಲಿ ಆಸನಗಳನ್ನು ಕಾಯ್ದಿರಿಸಬಹುದು. ರಾಣಿಬೆನ್ನೂರಿನಿಂದ ಜೋಗ್ ಫಾಲ್ಸ್‌ಗೆ ₹460(ಹೋಗಿ ಬರುವ ಸೇರಿ) ಪ್ರಯಾಣದರ ಇರುತ್ತದೆ ಎಂದು ವಾಕರಸಾ ಸಂಸ್ಥೆ ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೃತರ ಕುಟುಂಬಕ್ಕೆ ಸಚಿವರಿಂದ ವೈಯಕ್ತಿಕ ನೆರವು

ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಡ್ಡದಮಲ್ಲಾಪುರ ಗ್ರಾಮದಲ್ಲಿ ಗೋಡೆ ಕುಸಿದು ಮೃತಪಟ್ಟಿದ್ದ ರೈತ ಗದಿಗೆಪ್ಪ ಕೊಪ್ಪದ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ವೈಯಕ್ತಿಕವಾಗಿ ಒಂದು ಲಕ್ಷ ರು. ಆರ್ಥಿಕ ನೆರವು ನೀಡಿದರು.

ನಗರದ ಶಿವಾ ಕನ್ವೆನ್‌ಷನ್ ಹಾಲ್‌ನಲ್ಲಿ ಜರುಗಿದ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಮೃತ ಗದಿಗೆಪ್ಪ ಅವರ ಪುತ್ರ ಮೂಕೇಶ ಕೊಪ್ಪದ ಅವರಿಗೆ ಒಂದು ಲಕ್ಷ ರು. ನಗದು ಪರಿಹಾರವನ್ನು ಹಸ್ತಾಂತರಿಸಿದರು.ಈ ವೇಳೆ ಶಾಸಕರಾದ ಬಸವರಾಜ ಶಿವಣ್ಣವರ, ಪ್ರಕಾಶ ಕೋಳಿವಾಡ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ರುಚಿ ಬಿಂದಲ್, ಎಸ್ಪಿ ಯಶೋದಾ ವಂಟಗೋಡಿ, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಇದ್ದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!