ಬರದ ತವರು ಕಡೂರಲ್ಲಿ ನಾಲ್ಕೇ ಅಡಿಯಲ್ಲಿ ನೀರು

KannadaprabhaNewsNetwork |  
Published : Apr 09, 2024, 12:46 AM IST
8ಕೆಕಡಿಯು5. | Kannada Prabha

ಸಾರಾಂಶ

ನಿರಂತರ ಬರದ ಬೇಗೆಯಿಂದ ಕಡೂರು ಅಕ್ಷರಶಹ ನಲುಗಿ ಜನ ಜಾನುವಾರುಗಳಿಗೆ ನೀರಿಲ್ಲದೆ ಅಂತರ್ಜಲ ಕುಸಿದು ಕೆರೆಗಳೆಲ್ಲ ಬತ್ತಿ, ಕೊಳವೆ ಬಾವಿಗಳಲ್ಲೂ ನೀರಿಲ್ಲದ ಸಂದರ್ಭದಲ್ಲಿ ಸುಮಾರು ನಾಲ್ಕು ಅಡಿಯಲ್ಲೇ ನೀರು ಬರುತ್ತಿರುವ ಘಟನೆ ನಡೆದಿದೆ. ತಾಲೂಕಿನ ಬಿ.ಮಲ್ಲೇನಹಳ್ಳಿ ಗ್ರಾಮದ ಯೋಗೀಶ್ ಎಂಬುವರ ತೋಟದಲ್ಲಿ ಈ ಪವಾಡ ನಡೆದಿದೆ.

ಕನ್ನಡಪ್ರಭ ವಾರ್ತೆ, ಕಡೂರು

ನಿರಂತರ ಬರದ ಬೇಗೆಯಿಂದ ಕಡೂರು ಅಕ್ಷರಶಹ ನಲುಗಿ ಜನ ಜಾನುವಾರುಗಳಿಗೆ ನೀರಿಲ್ಲದೆ ಅಂತರ್ಜಲ ಕುಸಿದು ಕೆರೆಗಳೆಲ್ಲ ಬತ್ತಿ, ಕೊಳವೆ ಬಾವಿಗಳಲ್ಲೂ ನೀರಿಲ್ಲದ ಸಂದರ್ಭದಲ್ಲಿ ಸುಮಾರು ನಾಲ್ಕು ಅಡಿಯಲ್ಲೇ ನೀರು ಬರುತ್ತಿರುವ ಘಟನೆ ನಡೆದಿದೆ. ತಾಲೂಕಿನ ಬಿ.ಮಲ್ಲೇನಹಳ್ಳಿ ಗ್ರಾಮದ ಯೋಗೀಶ್ ಎಂಬುವರ ತೋಟದಲ್ಲಿ ಈ ಪವಾಡ ನಡೆದಿದೆ.

ಕೆ.ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಮಲ್ಲೇನಹಳ್ಳಿ. ಗ್ರಾಪಂ ಸದಸ್ಯ ಎಂ.ಎಸ್. ಯೋಗೀಶ್ ಅವರ ತೋಟ ಎತ್ತರದ ಸ್ಥಳದಲ್ಲಿರುವ ಜಮೀನಿನಲ್ಲಿ ತೆಂಗಿನ ಗಿಡ ಹಾಕುವಾಗ ಸುಮಾರು 8 ಅಡಿ ಅಗಲ ಮತ್ತು 4 ಅಡಿ ಆಳದ ಒಂದು ಗುಂಡಿ ತೆಗೆಯಲಾಗಿತ್ತು. ಆಗ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದರಿಂದ ಗುಂಡಿಯಲ್ಲಿ ನೀರು ತುಂಬಿ ಅದೇ ನೀರು ಗಿಡಗಳಿಗೆ ಆಸರೆಯಾಗಿತ್ತು.

ಆದರೆ ಈಗ ಬರಗಾಲದಲ್ಲೂ ಸಹಾ ಇಲ್ಲಿ ಸದಾ ನೀರು ತುಂಬಿದೆ. ಯೋಗೀಶ್ ಮತ್ತು ಅವರ ತಾಯಿ ಪ್ರತಿದಿನ ಕೊಡದಲ್ಲಿ‌ ನೀರು ತುಂಬಿ ಗಿಡಕ್ಕೆ ಹಾಕುತ್ತಾ. ತೆಗೆದಷ್ಟೂ ನೀರು ಈ ಗುಂಡಿಯಲ್ಲಿ ಮತ್ತೆ ತುಂಬಿಕೊಳ್ಳುತ್ತಿದೆ. ಮತ್ತೊಂದು ವಿಶೇವೆಂದರೆ ನೀರು ಗುಂಡಿಯಿಂದ ಹೊರ ಹರಿಯುವುದಿಲ್ಲ. ಇದನ್ನು ಕಂಡ ಕೆಲ ರೈತರು ತಮ್ಮ ತೋಟಗಳಲ್ಲಿ ಗುಂಡಿ ತೆಗೆಸಿದರೂ ನೀರು ಸಿಕ್ಕಿಲ್ಲ ಎನ್ನಲಾಗಿದೆ.

ಕಡೂರು ತಾಲೂಕು ನಿರಂತರ ಬರಪೀಡಿತ ಪ್ರದೇಶವೆಂಬ ಜೊತೆಗೆ ಅಂತರ್ಜಲ ಮಟ್ಟವೂ ಕುಸಿದಿದೆ. ಇಂತಹ ಸಮಯ ದಲ್ಲಿ ಎತ್ತರದ ಸ್ಥಳದಲ್ಲಿರುವ ಜಮೀನಿನಲ್ಲಿ ಕೇವಲ ನಾಲ್ಕು ಅಡಿಗೆ ನೀರು ಬರುವುದೆಲ್ಲಿಂದ ಎಂಬ ಅಚ್ಚರಿ ಜನರದ್ದಾಗಿದೆ.---ಹೇಳಿಕೆ ---

ಬರಗಾಲದಲ್ಲಿ ಗಿಡಗಳನ್ನು ಹೇಗೆ ಉಳಿಸುವುದು ಹೇಗೆ ಎಂಬ ಚಿಂತೆಯಾಗಿತ್ತು. ದೇವರ ದಯೆ. ಸಮೃದ್ಧ ನೀರು ದೊರೆಯುತ್ತಿದೆ.ಎಂ.ಎಸ್.ಯೋಗೀಶ್. ಬಿ.ಮಲ್ಲೇನಹಳ್ಳಿ.

8ಕೆಕೆಡಿಯು5. ತೋಟದ ಗುಂಡಿಯಲ್ಲಿರುವ ನೀರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ