ಕೊಪ್ಪಳ: ಗದಗ-ವಾಡಿ ರೈಲ್ವೆ ಯೋಜನೆಯ ಕಾಮಗಾರಿ ಕುಷ್ಟಗಿ ಭಾಗದವರೆಗೆ ಪೂರ್ಣಗೊಂಡಿದ್ದು, ಪ್ರಯೋಗಾರ್ಥ ರೈಲು ಸಂಚಾರ ಯಶಸ್ವಿಯಾಗಿರುವುದು ಸಂತಸ ತಂದಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ವೈದ್ಯ ಬಸವರಾಜ ಕ್ಯಾವಟರ್ ಸಂತಸ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ನಂತರ ಕುಷ್ಟಗಿಗೆ ಬಂದ ಮೊದಲ ರೈಲು ಇದಾಗಿದ್ದು, ಈ ಭಾಗದ ಜನತೆಯ ಹಲವು ದಶಕಗಳ ಕನಸು ಕೊನೆಗೂ ಸಾಕಾರಗೊಂಡಿದೆ. ಆರಂಭಿಕವಾಗಿ ಕುಷ್ಟಗಿ-ಹುಬ್ಬಳ್ಳಿ,ಕುಷ್ಟಗಿ-ಯಶವಂತಪುರ ಮಾರ್ಗವಾಗಿ ರೈಲು ಸಂಚಾರ ಕಲ್ಪಿಸಬೇಕೆನ್ನುವುದು ಜನತೆ ಪ್ರಮುಖ ಬೇಡಿಕೆಯಾಗಿದೆ. ಈ ರೈಲು ಸಂಚಾರದಿಂದ ಸಾರ್ವಜನಿಕರಿಗೆ ಹಾಗೂ ಸರಕು ಸಾಗಾಣಿಕೆಗೆ ಅನಕೂಲವಾಗುವ ಜತೆಗೆ ಭವಿಷ್ಯದಲ್ಲಿ ಆದಾಯ ದ್ವಿಗುಣವಾಗುವ ಭರವಸೆ ಮೂಡಿಸಿದೆ.
ಈ ಭಾಗದ ಬಹುದಿನಗಳ ಕನಸು ಗದಗ-ವಾಡಿ ರೈಲ್ವೆ ಯೋಜನೆಯ ತಳಕಲ್ ನಿಂದ ಕುಷ್ಟಗಿವರೆಗೆ ಈ ರೈಲು ಮಾರ್ಗ ವಾಡಿವರೆಗೂ ಪೂರ್ಣಗೊಂಡರೆ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಸಂಪರ್ಕ ಸಾಧ್ಯವಾಗಲಿದೆ.ಈ ವೇಳೆ ಮುಖಂಡ ನೀಲಕಂಠಯ್ಯ ಹಿರೇಮಠ ಇದ್ದರು.