ಬುಡಕಟ್ಟು ಸಮುದಾಯ ವಿದ್ಯಾರ್ಥಿಗೆ ಚಿನ್ನದ ಪದಕ ಶ್ಲಾಘನೆ

KannadaprabhaNewsNetwork | Published : Apr 7, 2025 12:36 AM

ಸಾರಾಂಶ

ಚಿಕ್ಕಮ್ಮನಹಟ್ಟಿ ಗ್ರಾಮದ ಬುಡಕಟ್ಟುನ ಕಾಡುಗೊಲ್ಲ ಸಮುದಾಯದ ಸಣ್ಣ ಕರಿಯಪ್ಪ ಪ್ರಥಮ ಶ್ರೇಣಿ ಗಳಿಸಿ 2023-24 ನೇ ಸಾಲೀನ ಘಟಿಕೋತ್ಸವದಲ್ಲಿ ಕುಲಾಧಿಪತಿ, ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋತ್‌ ಅವರಿಂದ ಸ್ನಾತಕೋತ್ತರ ಪದವಿ ಪ್ರಶಸ್ತಿ ಹಾಗೂ ಚಿನ್ನದ ಪಧಕ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಸನ್ಮಾನ । ಶಾಸಕ ಬಿ.ದೇವೇಂದ್ರಪ್ಪ ಹರ್ಷ । ಪುರಾತತ್ವದಲ್ಲಿ ಚಿಕ್ಕಮ್ಮನಹಟ್ಟಿ ಕಾಡುಗೊಲ್ಲರ ಕರಿಯಪ್ಪಗೆ ಪ್ರಥಮ ಶ್ರೇಣಿ

ಕನ್ನಡಪ್ರಭ ವಾರ್ತೆ ಜಗಳೂರು

ದಾವಣಗೆರೆ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಸ್ನಾತಕೋತ್ತರ ಅಧ್ಯಯನ ವಿಭಾಗದಲ್ಲಿ ತಾಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದ ಬುಡಕಟ್ಟುನ ಕಾಡುಗೊಲ್ಲ ಸಮುದಾಯದ ಸಣ್ಣ ಕರಿಯಪ್ಪ ಪ್ರಥಮ ಶ್ರೇಣಿ ಗಳಿಸಿ 2023-24 ನೇ ಸಾಲೀನ ಘಟಿಕೋತ್ಸವದಲ್ಲಿ ಕುಲಾಧಿಪತಿ, ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋತ್‌ ಅವರಿಂದ ಸ್ನಾತಕೋತ್ತರ ಪದವಿ ಪ್ರಶಸ್ತಿ ಹಾಗೂ ಚಿನ್ನದ ಪಧಕ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಚಿಕ್ಕಮ್ಮನಹಟ್ಟಿ ಗ್ರಾಮದ ಸಣ್ಣ ಕರಿಯಪ್ಪ ಅವರಿಗೆ ಸನ್ಮಾನಿಸಿ ಮಾತನಾಡಿ, ಕುರಿಕಾಯುತ್ತ ವಿದ್ಯಾಭ್ಯಾಸ ಮಾಡಿದ ಹುಡುಗನ ಪರಿಶ್ರಮಕ್ಕೆ ಚಿನ್ನದ ಪಧಕ ಲಭಿಸುವ ಮೂಲಕ ಗ್ರಾಮಕ್ಕೆ ಕೀರ್ತಿ ತಂದಿದ್ದು ಬುಡಕಟ್ಟು ಸಮುದಾಯದ ಹಿರಿಮೆಗೆ ಪಾತ್ರರಾಗಿದ್ದಾರೆ. ಚಿನ್ನದ ಪಧಕ ಪಡೆದ ಸಣ್ಣ ಕರಿಯಪ್ಪ ಹಳ್ಳಿಯಲ್ಲಿ ಇದ್ದುಕೊಂಡು ಕುಟುಂಬದ ಉಪಕಸುಬು ಕುರಿಕಾಯುವುದು ಹಾಗೂ ಹೊಲದಲ್ಲಿ ಕೃಷಿ ಮಾಡುತ್ತ ವಿದ್ಯಾಭ್ಯಾಸ ಮಾಡಿಕೊಂಡು ಬಂದವರು ಉನ್ನತ ಶಿಕ್ಷಣ ಕನಸು ಹೊತ್ತು ಸಾಧನೆಗೆ ಬಡತನ ಅಡಿಯಲ್ಲ ಎಂಬುದನ್ನು ಸಾಬೀತು ಪಡೆಸಿದ್ದಾರೆ ಎಂದರು.

ಇದೇ ವೇಳೆ ಮಾತನಾಡಿದ ಚಿನ್ನದ ಹುಡುಗ ಸಣ್ಣ ಕರಿಯಪ್ಪ ಮಾತನಾಡಿ, ನನ್ನ ಸಾಧನೆಗೆ ನಮ್ಮ ತಂದೆ, ತಾಯಿ, ಸಹೋದರರ ಸಹಕಾರ ಮತ್ತು ನಮ್ಮ ಇತಿಹಾಸ ಪುರಾತತ್ವ ಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರ ಸೂಕ್ತ ಸಲಹೆ ಮಾರ್ಗದರ್ಶನ ಕಾರಣವಾಗಿದೆ. ಇಂದು ಪ್ರಥಮ ಶ್ರೇಣಿ ಪಡೆದಿದ್ದು ಮುಂದಿನ ದಿನಗಳಲ್ಲಿ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸಂಶೋಧನಾ ಅಧ್ಯಯನ ಕೈಗೊಳ್ಳುವುದಾಗಿ ತನ್ನ ಕನಸು ಬಿಚ್ಚಿಟ್ಟರು

ಇವರ ಸಾಧನೆಗೆ ಕೆಪಿಸಿಸಿ ಎಸ್ಟಿ ಘಟಕ ಮಾಜಿ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ್ರು, ಚಿಕ್ಕಮ್ಮನಹಟ್ಟಿ ಮುಖಂಡರಾದ ಹನುಮಂತಪ್ಪ, ಎಂ.ಪಿ. ಕರಿಯಪ್ಪ, ಶಿವುಯಾದವ್ , ಗ್ರಾಪಂ ಮಾಜಿ ಸದಸ್ಯ ವೀರೇಶ್, ಕಾಟಪ್ಪ, ಬಸವರಾಜ್, ಚಿಕ್ಕಮ್ಮನಹಟ್ಟಿ ಶ್ರೀಕಾಂತ್, ಪಂಜಣ್ಣ, ಎಸ್.ಕೆ.ಕರಿಯಪ್ಪ, ಮಹಾಂತೇಶ್, ಆಟೋ ಮಂಜಣ್ಣ ಅಭಿನಂದನೆ ತಿಳಿಸಿದ್ದಾರೆ.

ಮಾಜಿ ಜಿ.ಪಂ.ಸದಸ್ಯ ಸಿ.ಲಕ್ಷ್ಮಣ್, ಕಮ್ಮವಾರಿ ಸಂಘದ ತಾಲೂಕು ಅಧ್ಯಕ್ಷ ರಂಗನಾಥ್ ಗೌಡ, ಗ್ರಾಪಂ ಮಾಜಿ ಉಪಾಧ್ಯಕ್ಷ ಮರೇನಹಳ್ಳಿ ಎಂ.ಎಸ್.ನಜೀರ್ ಅಹಮದ್, ಜೀ.ಈ.ರಮೇಶ್, ಲೋಕೇಶ್, ವಿಜಯ ಕೆಂಚೋಳ್, ಧನ್ಯಕುಮಾರ್ ಸಿದ್ದಮ್ಮನಹಳ್ಳಿ ಬಸವರಾಜ್ ಸೇರಿದಂತೆ ಹಲವರು ಇದ್ದರು.

Share this article