ಕುಶಾಲನಗರ: ನಗರದ ಎಪಿಸಿಎಂಎಸ್ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದ ಎಂ.ಎನ್. ಕೊಮಾರಪ್ಪ ಅವರ ನಿಧನ ಸಂಬಂಧ ಕುಶಾಲನಗರ ಪಟ್ಟಣವೂ ಸೇರಿದಂತೆ ಸುತ್ತಲಿನ ನೂರಾರು ಮಂದಿ ಸ್ಥಳೀಯರು ಎಪಿಸಿಎಂಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಶ್ರದ್ದಾಂಜಲಿ ಸಭೆ ನಡೆಸಿ ಅವರ ಜೀವನ ಹಾಗೂ ಸಾಧನೆಗಳ ಕುರಿತು ನುಡಿನಮನಗಳೊಂದಿಗೆ ಶ್ರದ್ದಾಂಜಲಿ ಸಲ್ಲಿಸಿದರು. ಕೊಮಾರಪ್ಪ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಕುಶಾಲನಗರ ಪಟ್ಟಣದಲ್ಲಿ ರೈತ ಸಹಕಾರ ಭವನವನ್ನು ಅತ್ಯಂತ ಯೋಜನಾ ಬದ್ಧವಾಗಿ ರೂಪಿಸಿದ ಕೊಮಾರಪ್ಪ ಕುಶಾಲನಗರದ ಅಭಿವೃದ್ದಿಗೆ ತಮ್ಮದೇ ಆದ ರೀತಿಯಲ್ಲಿ ಕನಸು ಕಟ್ಟಿದ್ದರು ಎಂದು ಶ್ಲಾಘಿಸಿದರು.
ಕುಶಾಲನಗರದಲ್ಲಿ ಸಹಕಾರ ಕ್ಷೇತ್ರವನ್ನು ಪ್ರಾಮಾಣಿಕತೆಯಿಂದ ಕಟ್ಟಿ ಬೆಳೆಸಿದ ಹಿರಿಯ ಚೇತನಾ ಕೊಮಾರಪ್ಪಇತರೆಲ್ಲ ಕಿರಿಯ ಸಹಕಾರಿಗಳಿಗೆ ಆದರ್ಶಪ್ರಾಯ ಎಂದು ಹಿರಿಯ ಸಹಕಾರಿ ಟಿ.ಆರ್. ಶರವಣ ಕುಮಾರ್ ಬಣ್ಣಿಸಿದರು.ಎಪಿಸಿಎಂಎಸ್ ಸಂಸ್ಥೆಯನ್ನು ಮಾದರಿ ಸಂಸ್ಥೆಯಾಗಿ ರೂಪಿಸುವಲ್ಲಿ ಕೊಮಾರಪ್ಪ ಅವರ ಶ್ರಮ ಅಪಾರ. ಅವರಲ್ಲಿದ್ದ ಪ್ರಾಮಾಣಿಕತೆ ಹಾಗೂ ಬದ್ಧತೆ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳಲ್ಲಿ ಮೊಳಕೆಯೊಡೆಯಲಿ ಎಂದು ನಗರದ ಹಿರಿಯರಾದ ವಿ.ಎನ್. ವಸಂತ ಕುಮಾರ್ ಆಶಿಸಿದರು.
ಸಹಕಾರ ಕ್ಷೇತ್ರದಲ್ಲಿ ತೋರಿದ ಬದ್ಧತೆ ಹಾಗೂ ಕಾರ್ಯತ್ಪರತೆ ಬಿಜೆಪಿಯಲ್ಲೂ ಕೊಮಾರಪ್ಪ ಮೂಡಿಸಿದ್ದರು ಎಂದು ಹಿಂದೂ ಸಂಘಟನೆ ಪ್ರಮುಖ ಜಿ.ಎಲ್. ನಾಗರಾಜು ಹೇಳಿದರು.ಸಂಸ್ಥೆಯ ಅಧ್ಯಕ್ಷರಾದ ಕೊಮಾರಪ್ಪ ಅವರು ಹೇಳಿದ ಕೆಲಸಗಳು ಸಕಾಲದಲ್ಲಿ ಆಗಲೇ ಬೇಕಿತ್ತು. ಅವರ 40 ವರ್ಷಗಳ ಸುಧೀರ್ಘ ಆಡಳಿತಾವಧಿಯಲ್ಲಿ ಯಾವತ್ತೂ ಕೂಡ ಯಾವ ಭತ್ಯೆಯನ್ನೂ ಕೂಡ ಪಡೆಯದೆ ಸಂಸ್ಥೆ ಕಟ್ಟಿದ ಮಹಾಚೇತನ ಎಂದು ಎಪಿಸಿಎಂಎಸ್ ನಿವೃತ್ತ ಸಿಇಒ ಹಾಗೂ ನಿರ್ದೇಶಕಿ ಬಿ.ಎಂ. ಪಾರ್ವತಿ ಹೇಳಿದರು.ವಕೀಲ ಆರ್.ಕೆ. ನಾಗೇಂದ್ರ, ಸಹಕಾರಿಗಳಾದ ಕೆ.ಪಿ. ಚಂದ್ರಕಲಾ, ಎಂ.ವಿ. ನಾರಾಯಣ ಮಾತನಾಡಿದರು. ಕುಶಾಲನಗರ ವರ್ತಕರ ಸಂಘದ ಅಧ್ಯಕ್ಷ ಕೆ.ಎಸ್. ನಾಗೇಶ್, ವೀರಶೈವ ಮಹಾಸಭಾ ಅಧ್ಯಕ್ಷ ಎಚ್.ವಿ. ಶಿವಪ್ಪ, ಒಕ್ಕಲಿಗ ಸಮಾಜದ ಅಧ್ಯಕ್ಷ ಎಂ.ಕೆ. ದಿನೇಶ್, ಕೊಡವ ಸಮಾಜದ ಅಧ್ಯಕ್ಷ ವಾಂಚೀರ ಮನು ನಂಜುಂಡ, ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್, ಕಾವೇರಿ ನದಿ ಸಂರಕ್ಷಣಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್, ಕಸಾಪ ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್, ಕೇರಳ ಸಮಾಜದ ನಿರ್ದೇಶಕ ಕೆ. ವರದ, ಪುರಸಭಾ ಮಾಜಿ ಅಧ್ಯಕ್ಷ ಜೈವರ್ಧನ, ಬಿ. ಅಮೃತರಾಜು, ಮಾಜಿ ಸದಸ್ಯ ಜಗದೀಶ್, ಪ್ರಮುಖರಾದ ಕೆ.ಜಿ. ಮನು, ವಿ.ಸಿ. ಅಮೃತ್, ಕೆ.ಎಸ್. ಕೃಷ್ಣೇಗೌಡ, ಎಪಿಸಿಎಂಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್, ಉಪಾಧ್ಯಕ್ಷೆ ಚಂದ್ರಕಲಾ, ನಿರ್ದೇಶಕ ಶರತ್, ಮಾಜಿ ಸದಸ್ಯರಾದ ಕೆ.ಎಸ್. ರತೀಶ್, ಆರ್.ಕೆ. ಚಂದ್ರು, ಸುಂಟಿಕೊಪ್ಪ ಕೆ.ಎಸ್. ಮಂಜುನಾಥ್, ಕ್ಲೈವ ಪೊನ್ನಪ್ಪ, 7ನೇ ಹೊಸಕೋಟೆ ರಮೇಶ್, ಪುಂಡರೀಕಾಕ್ಷ, ಸಿ.ವಿ. ನಾಗೇಶ್ ಮೊದಲಾದವರಿದ್ದರು.(ಪೋಟೋ) ಶ್ರದ್ಧಾಂಜಲಿ ಕಾರ್ಯಕ್ರಮ ಸಂದರ್ಭ)