ಕನ್ನಡಪ್ರಭ ವಾರ್ತೆ ಭಾರತೀನಗರ
ಭಾರತೀ ಕಾಲೇಜ್‌ಗೇಟ್‌ನಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನಕ್ಕೆ ಭಾರತೀ ಎಜುಕೇಷನ್ ಟ್ರಸ್ಟ್‌ನ ವಿವಿಧ ಅಂಗಸಂಸ್ಥೆಗಳು ಮತ್ತು ಕಾಂಗ್ರೆಸ್ ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿದರು.ಈ ವೇಳೆ ಬಿಇಟಿ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಮಾತನಾಡಿ, ರಾಜ್ಯದ ಹಿರಿಯ ಮುತ್ಸದ್ಧಿ ರಾಜಕಾರಣಿ ಎಸ್.ಎಂ.ಕೃಷ್ಣರನ್ನು ನಾವು ಕಳೆದುಕೊಂಡಿರುವುದು ಬಹಳ ನೋವು ತಂದಿದೆ. ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲವೇನೋ ಎನ್ನುವ ಭಾವನೆ ಕಾಡುತ್ತಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು.
ರೈತ ಮುಖಂಡರಾದ ಸುನಂದ ಜಯರಾಮು ಮಾತನಾಡಿ, ಎಸ್.ಎಂ.ಕೃಷ್ಣ ಅವರು ಮದ್ದೂರು ತಾಲೂಕಿನ ಶಾಸಕ ಸ್ಥಾನದಿಂದ ಅತ್ಯುನ್ನತ ಮಟ್ಟದ ವರೆವಿಗೂ ಕೂಡ ಬೆಳೆದಂತಹ ಹಿರಿಯ ಮುತ್ಸದ್ಧಿ ರಾಜಕಾರಣಿ. ಮಂಡ್ಯ, ರಾಜ್ಯ, ದೇಶ-ವಿದೇಶ ಮಟ್ಟದಲ್ಲೂ ರಾಜಕೀಯವಾಗಿ ಒಳ್ಳೆಯ ಕೆಲಸ ಮಾಡಿ ಹೆಸರು ಮಾಡಿದ್ದರು. ಅವರ ಸೇವೆಗಳನ್ನು ಸದಾ ನೆನಪು ಮಾಡಿಕೊಳ್ಳಬೇಕು ಎಂದರು.ಎಸ್.ಎಂ.ಕೃಷ್ಣ ಅವರು ಕಣ್ಣೋಳಗಿನ ನೋಟದ ಮೂಲಕ ರಾಜಕಾರಣ ಮಾಡಿದಂತಹ ಅತ್ಯಂತ ಪ್ರಭಾವಶಾಲಿ ರಾಜಕಾರಣಿ. ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ. ಸ್ತ್ರಿಶಕ್ತಿ ಸಂಘಟನೆ, ಯಶಸ್ವಿನಿಯಂತಹ ಆರೋಗ್ಯ ಸೇವೆ ನೀಡಿದ್ದರು ಎಂದರು.
ಇದೇ ವೇಳೆ ಮನ್ಮುಲ್ ಮಾಜಿ ನಿರ್ದೇಶಕ ಎ.ಸಿ.ಸತೀಶ್, ತಾಪಂ ಮಾಜಿ ಸದಸ್ಯರಾದ ಗಿರೀಶ್, ಭರತೇಶ್, ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕ ಆರ್.ಸಿದ್ದಪ್ಪ, ಕಾರ್ಕಹಳ್ಳಿ ಸ್ವರೂಪ್‌ಚಂದ್ರ, ಗ್ರಾಪಂ ಸದದಸ್ಯ ಕೆ.ಟಿ.ಶ್ರೀನಿವಾಸ್, ವಿನಯ್ ಹೊನ್ನೇಗೌಡ, ಮಿಥುನ್, ಕಬ್ಬಾಳಯ್ಯ, ವಿವಿಧ ಅಂಗಸಂಸ್ಥೆ ಮುಖ್ಯಸ್ಥರಾದ ಮಲ್ಲಿಕಾರ್ಜುನ್, ತಮಿಜ್‌ಮಣಿ, ಸುರೇಶ್, ಚಂದನ್, ಜಿ.ಕೆ.ಕೃಷ್ಣ, ಸುಬ್ರಮಣ್ಯ, ಪುಟ್ಟರಾಮ ಅರಸು, ಜವರೇಗೌಡ, ದೇವರಾಜು, ಮಂಜುನಾಥ್, ನಿಖಿಲ್ ಸೇರಿದಂತೆ ಹಲವರಿದ್ದರು.ಎಸ್.ಎಂ ಕೃಷ್ಣ ಅವರು ದೇಶ ಕಂಡ ಶ್ರೇಷ್ಠ ರಾಜಕಾರಣಿ, ದಕ್ಷ ಆಡಳಿತಗಾರ, ಅಭಿವೃದ್ದಿಯ ಹರಿಕಾರ. ಅವರ ನಿಧನ ಅತೀವ ದುಃಖ ತಂದಿದೆ. ಅನೇಕ ಸವಾಲುಗಳನ್ನು ದಿಟ್ಟವಾಗಿ ನಿಭಾಯಿಸಿ ಕರ್ನಾಟಕದ ಅಭಿವೃದ್ಧಿಗೆ ಹೊಸ ದಿಕ್ಕು ತೋರಿ, ಯಾವುದೇ ಟೀಕೆ-ಟಿಪ್ಪಣಿಗಳಿಗೆ ಸಮಜಾಯಿಷಿ ನೀಡದೆ ತಮ್ಮ ಕೆಲಸಗಳ ಮೂಲಕವೇ ಉತ್ತರ ನೀಡುತ್ತಿದ್ದ ದ ಧೀಮಂತ ನಾಯಕ. ಅವರ ಅಗಲಿಕೆಯಿಂದ ಒಬ್ಬ ಶ್ರೇಷ್ಠ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ.- ಡಾ.ಮೀರಾ ಶಿವಲಿಂಗಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಚಾಲಕರುಎಂ.ಎಂ.ಕೃಷ್ಣ ಅವರು ವಿದ್ಯಾರ್ಥಿಗಳೊಂದಿಗೆ ತುಂಬ ಒಡನಾಟವಿತ್ತು. ನಮ್ಮ ಯಾವುದೇ ವಿದ್ಯಾರ್ಥಿ ಸಮಸ್ಯೆಗಳನ್ನೂ ಅವರಿಗೆ ತಿಳಿಸಿದಾಗ ತಾಳ್ಮೆಯಿಂದ ಕೇಳಿ ತದನಂತರ ಸೂಕ್ತ ಪರಿಹಾರವನ್ನೂ ನೀಡುತ್ತಿದ್ದರು. ನನಗೆ ವೈಯಕ್ತಿಕವಾಗಿ ರಾಜಕೀಯ ಮಾರ್ಗದರ್ಶಿಗಳಾಗಿದ್ದರು. ಶ್ರೀಯುತರ ನಿಧನ ನನಗೆ ತುಂಬಾ ನೋವುಂಟು ಮಾಡಿದೆ. ಭಗವಂತ ಕುಟುಂಬ ವರ್ಗದವರು, ಅಭಿಮಾನಿಗಳಿಗೆ ಕೃಷ್ಣರ ಸಾವಿನ ನೋವನ್ನೂ ಭರಿಸುವ ಶಕ್ತಿ ನೀಡಲಿ.
- ಡಾ.ಈ.ಸಿ.ನಿಂಗರಾಜ್ ಗೌಡ, ಸಿಂಡಿಕೇಟ್ ಮಾಜಿ ಸದಸ್ಯರು, ಮೈಸೂರು ವಿವಿ