ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಕಳೆದ 25 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಇದೀಗ ನಿವೃತ್ತಿ ಹೊಂದಲಿರುವ ಪ್ರೇಮಾನಂದ ಅವರಿಗೆ ಉಡುಪಿ ಪತ್ರಿಕಾ ಭವನ ಸಮಿತಿಯ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಮೊಬೈಲ್, ಇಂಟರ್ ನೆಟ್ ಇಲ್ಲದ ಕಾಲದಲ್ಲಿ ರಾಜ್ಯ ಸರಕಾರ, ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಕಟಣೆಗಳನ್ನು ಪ್ರತಿ ದಿನ ಉಡುಪಿ ನಗರ, ಮಣಿಪಾಲ, ಕುಕ್ಕಿಕಟ್ಟೆ ಸಹಿತ ವಿವಿಧಡೆಗಳಲ್ಲಿದ್ದ ಪತ್ರಿಕಾ ಕಚೇರಿಗಳಿಗೆ ಸಮಯಕ್ಕೆ ಸರಿಯಾಗಿ ತಲುಪಿಸುತ್ತಿದ್ದ ಪ್ರೇಮಾನಂದ ಅವರ ಸೇವೆಯನ್ನು ಈ ಸಂದರ್ಭದಲ್ಲಿ ಪತ್ರಕರ್ತರು ಸ್ಮರಿಸಿದರು. ಈ ಸಂದರ್ಭದಲ್ಲಿ ಉಡುಪಿ ವಾರ್ತಾಧಿಕಾರಿ ಮಂಜುನಾಥ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಆರಾಡಿ, ಹಿರಿಯ ಪತ್ರಕರ್ತರಾದ ಬಿ.ಬಿ.ಶೆಟ್ಟಿಗಾರ್, ಸುಭಾಶ್‌ಚಂದ್ರ ವಾಗ್ಳೆ ಮೊದಲಾದವರು ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಶಶಿಧರ್ ಮಾಸ್ತಿಬೈಲು ಕಾರ್ಯಕ್ರಮ ನಿರೂಪಿಸಿದರು.ಶ್ರೀದೇವಿ ಪ್ರಭುಗೆ ಮಾಹೆ ವಿವಿ ಡಾಕ್ಟರೇಟ್ಮಾಹೆ ಸಮೂಹ ಸಂಸ್ಥೆಗಳಲ್ಲಿ ಒಂದಾದ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್‌ನ ಕಾರ್ಡಿಯೋ ವ್ಯಾಸ್ಕುಲರ್ ಟೆಕ್ನಾಲಜಿ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಶ್ರೀದೇವಿ ಪ್ರಭು ಅವರಿಗೆ ಮಾಹೆ ವಿವಿಯು ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಶ್ರೀದೇವಿ ಪ್ರಭು ಅವರು ಡಾ. ಟಾ. ದೇವಸ್ಯ, ಡಾ. ಅನ್ನಪೂರ್ಣ ಮತ್ತು ಡಾ. ಕೃಷ್ಣಾನಂದ ನಾಯಕ್ ಅವರ ಮಾರ್ಗದರ್ಶನದಲ್ಲಿ ಎಫೆಕ್ಟ್ ಆಫ್ ಯೋಗಾ ಥೆರಪಿ - ಪ್ರಾಣಾಯಾಮ, ಮೆಡಿಟೇಶನ್ ಆ್ಯಂಡ್ ರಿಲಾಕ್ಸಾಶೆನ್ ಆನ್ ಕ್ವಾಲಿಟಿ ಆಫ್ ಲೈಫ್ ಆ್ಯಂಡ್ ಫಂಕ್ಷನಲ್ ಔಟ್‌ಕಮ್ ಇನ್ ಹಾರ್ಟ್ ಫೈಲ್ಯೂರ್ ಪೆಶಂಟ್ಸ್ ಆನ್ ಆಪ್ಟಿಮಲ್ ಮೆಡಿಕಲ್ ಮ್ಯಾನೇಜ್‌ಮೆಂಟ್ ಎಂಬ ವಿಷಯ ಮೇಲೆ ಸಂಶೋಧನೆ ನಡೆಸಿ ಪ್ರಬಂಧವನ್ನು ಮಂಡಿಸಿದ್ದರು.