ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಶಾಲಿನಿ ಇಂಟರ್‌ನ್ಯಾಷನಲ್ ಶಾಲೆ ಹಾಗೂ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಸಾಹಿತಿ, ಚಿಂತಕ ದಿವಂಗತ ಎಚ್.ಎಸ್. ವೆಂಕಟೇಶಮೂರ್ತಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಲಾಯಿತು.
ಬಳಿಕ ಪರಿಸರ ಪ್ರೇಮಿ ಹಾಗೂ ಮಕ್ಕಳ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಚ.ನಾ.ಅಶೋಕ್ ಅವರು ಮಾತನಾಡಿ, ವೆಂಕಟೇಶಮೂರ್ತಿ ಅವರ ದೇಹ ನಮ್ಮೊಂದಿಗೆ ಇಲ್ಲವಾಗಿರಬಹುದು ಆದರೆ ಸಾಹಿತ್ಯ, ಭಾವಗೀತೆಗಳು ಸದಾ ನಮ್ಮೊಂದಿಗಿದೆ ಎಂದು ಹೇಳಿದರು. ಅವರ ರಚನೆಯ ಪುಸ್ತಕಗಳು, ಅವರ ಚಿಂತನೆ ಆದರ್ಶಗಳು, ಇಂದಿನ ಪೀಳಿಗೆಗೆ, ಮಕ್ಕಳಿಗೆ ಆದರ್ಶವಾಗಬೇಕು, ಕನ್ನಡ ಸಾಹಿತ್ಯಕ್ಕೆ ಮಕ್ಕಳ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅಪಾರವಾದದ್ದು, ಹಾಸನದಲ್ಲಿ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿ ಮಕ್ಕಳಿಗೆ ಮಾರ್ಗದರ್ಶನ ಮಾಡಿದ್ದನ್ನು ಸ್ಮರಿಸಿದರು.ಮಕ್ಕಳ ಸಾಹಿತ್ಯ ಪರಿಷತ್ತಿನ ಸಂಚಾಲಕ ಎ.ಎಂ.ಜಯರಾಮ್, ಗೌರವಾಧ್ಯಕ್ಷ ಮಹದೇವ್, ಶಿಕ್ಷಕಿ ಮಧುಮತಿ ಎಚ್.ಎಸ್.ವಿ. ಅವರ ಸ್ಮರಣೆ ಮಾಡಿದರು. ಕಲಾವಿದರಾದ ರೂಪ ಮನೋಹರ್, ಸೋಮಶೇಖರ್, ಮೇಘನಾವರುಣ್, ಅನುಪಮ ಹಾಗೂ ಶಾಲಾ ವಿದ್ಯಾರ್ಥಿಗಳು ವೆಂಕಟೇಶ್ ಮೂರ್ತಿ ಅವರ ಪ್ರಸಿದ್ಧ ಭಾವಗೀತೆಗಳನ್ನು ಹಾಡಿ ನುಡಿ ನಮನ ಅರ್ಪಿಸಿದರು.
ಪರಿಷತ್‌ನ ಪದಾಧಿಕಾರಿಗಳಾದ ಜಗದೀಶ್, ನಟೇಶ್, ಹರೀಶ್, ಲಕ್ಷ್ಮೀನಾರಾಯಣ್, ಮುಖ್ಯ ಶಿಕ್ಷಕಿ ದೀಪ್ತಿ ಸೋಫಿಯಾ, ಸಂಧ್ಯಾ ಮುಂತಾದವರಿದ್ದರು.