ಹಿರಿಯ ಪತ್ರಕರ್ತರ ನಿಧನಕ್ಕೆ ಶ್ರದ್ಧಾಂಜಲಿ

KannadaprabhaNewsNetwork |  
Published : Oct 29, 2025, 11:30 PM IST
ಹಿರಿಯ ಪತ್ರಕರ್ತರಾದ ಅಥಣಿಯ ಚನ್ನಯ್ಯ ಇಟ್ನಾಳಮಠ ಮತ್ತು ಚಿಕ್ಕೋಡಿಯ ವಿರೂಪಾಕ್ಷ ಕವಟಗಿ ಅವರ ಶ್ರದ್ಧಾಂಜಲಿ ಸಭೆ | Kannada Prabha

ಸಾರಾಂಶ

ಮೃತ ಪತ್ರಕರ್ತರ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸುವಂತೆ ಕೋರಿ ಶೀಘ್ರವೇ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ವಿಲಾಸ ಜೋಶಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮೃತ ಪತ್ರಕರ್ತರ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸುವಂತೆ ಕೋರಿ ಶೀಘ್ರವೇ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ವಿಲಾಸ ಜೋಶಿ ಹೇಳಿದರು.

ವಾರ್ತಾ ಭವನದಲ್ಲಿ ಮಂಗಳವಾರ ಬೆಳಗಾವಿ ಪತ್ರಕರ್ತರ ಸಂಘ ಆಯೋಜಿಸಿದ್ದ ಈಚೆಗೆ ನಿಧನರಾದ ಅಥಣಿ ತಾಲೂಕಿನ ಕನ್ನಡಪ್ರಭ ಹಿರಿಯ ವರದಿಗಾರ ಚನ್ನಯ್ಯ ಇಟ್ನಾಳಮಠ ಮತ್ತು ಚಿಕ್ಕೋಡಿಯ ವಿಜಯ ಕರ್ನಾಟಕ ವರದಿಗಾರ ವಿರೂಪಾಕ್ಷ ಕವಟಗಿ ಅವರ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕು ಮಟ್ಟದಲ್ಲಿನ ಪತ್ರಕರ್ತರಿಗೆ ಆಯಾ ಸ್ಥಳೀಯ ಸಂಸ್ಥೆಗಳ ಮೂಲಕ ಆರೋಗ್ಯ ವಿಮೆ ಯೋಜನೆ ಜಾರಿಗೊಳಿಸುವ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿ ಇಬ್ಬರೂ ಪತ್ರಕರ್ತರ ಅಕಾಲಿಕ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು.ಹಿರಿಯ ಪತ್ರಕರ್ತರಾದ ನೌಶಾದ್ ಬಿಜಾಪುರ, ಶ್ರೀಶೈಲ ಮಠದ, ರಾಜು ಗವಳಿ, ರವೀಂದ್ರ ಉಪ್ಪಾರ, ಸಂಜಯ ಸೂರ್ಯವಂಶಿ, ಮುನ್ನಾ ಬಾಗವಾನ, ಮಲ್ಲಿಕಾರ್ಜುನ ಬಾಳನಗೌಡರ, ಸದಾಶಿವ ಸಂಕಪ್ಪಗೋಳ, ವಾರ್ತಾ ಇಲಾಖೆಯ ಅಧಿಕಾರಿ ವಿಜಯ ಬೆಟಗೇರಿ ಮೊದಲಾದವರು ಮಾತನಾಡಿ, ಇಬ್ಬರೂ ಪತ್ರಕರ್ತರೊಂದಿಗಿನ‌ ತಮ್ಮ ಒಡನಾಟವನ್ನು ಸ್ಮರಿಸಿದರು.ಪತ್ರಕರ್ತರಾದ ಕೇಶವ ಆದಿ, ಸುರೇಶ ನೇರ್ಲಿ, ಚಂದ್ರಕಾಂತ ಸುಗಂಧಿ, ತುಷಾರ ಮಜುಕರ, ಇಮಾಮಹುಸೇನ್‌ ಗೂಡುನವರ, ರಾಜು ಹಿರೇಮಠ, ಡಿ.ವಿ.ಕಮ್ಮಾರ, ಅರುಣ ಯಳ್ಳೂರಕರ, ಪರಶುರಾಮ ಮುಕನವರ, ಸಾಗರ ಚೌಗಲೆ, ಪುಂಡಲೀಕ‌ ಬಡಿಗೇರ ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ