ಕುದೂರು: ಶಾಲೆಗೆ ಒಂದು ದಿನವೂ ತಪ್ಪದೆ ಹಾಜರಾಗುವ ವಿದ್ಯಾರ್ಥಿಗಳನ್ನು ಪ್ರವಾಸ ಕರ್ಕೊಂಡು ಹೋಗ್ತೀನಿ ಎಂದು ಮಕ್ಕಳಿಗೆ ಘೋಷಣೆ ಮಾಡಿದಂತೆ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಮಕ್ಕಳೊಂದಿಗೆ ಖುಷಿ ಅನುಭವಿಸಿದ ಶಿಕ್ಷಕರನ್ನು ಗ್ರಾಮಸ್ಥರು ಅಭಿನಂದಿಸಿದೆ.
ಮುಖ್ಯ ಶಿಕ್ಷಕ ಎಂ.ಗಂಗಾಧರ್ ಮಾತನಾಡಿ, ಯವುದೇ ಪ್ರಚಾರಕ್ಕಾಗಿ ನಾನು ಈ ಕೆಲಸ ಮಾಡಿಲ್ಲ. ಸಕಾರ ನಮಗೆ ಅನ್ನ ನೀಡಿದೆ. ಮಕ್ಕಳಿಂದ ನಾವು ಗುರು ಎಂಬ ಸ್ಥಾನ ಪಡೆದಿದ್ದೇವೆ. ಮಕ್ಕಳು ತಪ್ಪಿಸಿಕೊಳ್ಳದೆ ಶಾಲೆಗೆ ಬರಲು ಈ ಯೋಜನೆ ಹಾಕಿದೆ. ಅರ್ಧದಷ್ಟು ಯಶಸ್ವಿಯಾಗಿದ್ದೇನೆ. ಇರುವಷ್ಟು ದಿನ ಇಂತಹ ಪ್ರಯೋಗಗಳನ್ನು ಮಾಡುತ್ತಿರುತ್ತೇನೆ. ಇದು ನನಗೆ ಹೆಚ್ಚು ಆತ್ಮತೃಪ್ತಿ ಕೊಟ್ಟ ವೃತ್ತಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಿಕ್ಷಕ ಹೊನ್ನರಾಜು, ರಾಮಕೃಷ್ಣಪ್ಪ, ಹುನಮಂತರಾಜು ಹಾಜರಿದ್ದರು.
ಕೋಟ್ ............ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕ ಸಮೂಹವೇ ಇದೆ. ತಾಯಿ ಹೃದಯ ಇದ್ದವರು ಮಾತ್ರ ಶಿಕ್ಷಕರಾಗಲು ಸಾಧ್ಯ. ಅಂತಹ ಮನಸ್ಥಿತಿಯನ್ನು ಗಂಗಾಧರ್ ಹೊಂದಿರುವುದು ನನಗೆ ಖುಷಿ ಕೊಟ್ಟಿದೆ. ಅವರನ್ನು ಭೇಟಿ ಮಾಡಿ ಅಭಿನಂದಿಸುತ್ತೇನೆ.
-ಎಚ್.ಸಿ.ಬಾಲಕೃಷ್ಣ, ಶಾಸಕರು, ಮಾಗಡಿ ಕ್ಷೇತ್ರ22ಕೆಆರ್ ಎಂಎನ್1.ಜೆಪಿಜಿ
ಮಾಗಡಿ ತಾಲೂಕು ಶ್ರೀಗಿರಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಗೆ ಗೈರಾಗದ ವಿದ್ಯಾರ್ಥಿಗಳನ್ನು ನಂದಿ, ಕೈವಾರಕ್ಕೆ ಪ್ರವಾಸ ಮಾಡಿಸಿದ ಮುಖ್ಯ ಶಿಕ್ಷಕ ಗಂಗಾಧರ್.