ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ಕನಕ ರಂಗಮಂದಿರದಲ್ಲಿ ತಾಲೂಕು ಅಡಳಿತ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಾರು, ಜನರ ಚಪ್ಪಾಳೆ ಧ್ವನಿಗಿಂತ ಜನತೆಯ ಆತ್ಮಸಾಕ್ಷಿಯ ಧ್ವನಿಯನ್ನು ಕೇಳಿಸಿಕೊಳ್ಳುತ್ತಾರೆಯೋ ಅಂತಹವರು ಜನನಾಯಕರಾಗುತ್ತಾರೆ ಇದಕ್ಕೆ ಸಾಕ್ಷಿಯಾಗಿ ದೇಶಕ್ಕೆ ಸಂವಿಧಾನದ ಕೂಡುಗೆ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅಗಿದ್ದಾರೆ ಎಂದ ಅವರು ವಿಶೇಷವಾಗಿ ಪಿ.ಯು.ಸಿ ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ತಾನು ಸಂವಿದಾನದ ಪೀಠೆಕೆ ಪುಸ್ತಕಗಳನ್ನು ಮುಂದಿನ ವರ್ಷ ವಿತರಣೆ ಮಾಡಲಾಗವುದು ವಿದ್ಯಾರ್ಥಿಗಳು ಈ ಪುಸ್ತಕಗಳನ್ನು ಕಡ್ಡಾಯವಾಗಿ ಓದಿಕೊಂಡು ಮುಂದಿನ ವರ್ಷದ ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ಅಗಮಿಸಬೇಕು ಎಂದು ಹೇಳಿದರು.ಇಡೀ ಜಗತ್ತಿನಲ್ಲಿ ರಕ್ತರಹಿತವಾಗಿ ಅಹಿಂಸಾ ಮಾರ್ಗದಲ್ಲಿ ಮಹಾತ್ಮಗಾಂಧಿಯವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ನಂತರದಲ್ಲಿ ಇಡೀ ದೇಶವನ್ನು ಒಂದೇ ಅಡಳಿತದಡಿಯಲ್ಲಿ ತರುವ ನಿಟ್ಟಿನಲ್ಲಿ ಅಂಬೇಡ್ಕರ್ ನೇತೃತ್ವದ ಸಮಿತಿ ಇಡೀ ವಿಶ್ವವೇ ತಲೆಬಾಗುವಂತಹ ಅದ್ಬುತವಾದ ಸಂವಿಧಾನವನ್ನು ನೀಡಿದ್ದು 1949ರ ನವೆಂಬರ್ 26ರಂದು ಅದನ್ನು ನಮ್ಮ ದೇಶ ಸ್ವೀಕರಿಸಿದ ಪವಿತ್ರ ದಿನವಾಗಿದೆ ಎಂದರು.
ಸಂವಿಧಾನ ಕುರಿತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ.ಧನಂಜಯ ಉಪನ್ಯಾಸ ನೀಡಿದರು. ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ, ಟಿಎಪಿಸಿಎಂಎಸ್ ಸಂಘದ ಉಪಾಧ್ಯಕ್ಷ ಹಾಗೂ ಡಿಎಸ್‌ಎಸ್ ಸಂಘಟನೆಯ ಮುಖಂಡ ಜಿ.ಎಚ್.ತಮ್ಮಣ್ಣ ಮಾತನಾಡಿದರು.ಕಾರ್ಯಕ್ರಮದ ಅರಂಭದಲ್ಲಿ ದಾವಣಗೆರೆ ಜಿಲ್ಲೆ ಜಿಲ್ಲಾಧಿಕಾರಿಯಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದ ಮಹಾಂತೇಶ್ ಬೀಳಿಗಿಯವರ ಅಕಾಲಿಕ ನಿಧನಕ್ಕೆ ಮೌನಾಚರಣೆ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಪಟ್ಟಣದ ಟಿ.ಬಿ. ವೃತ್ತದಲ್ಲಿನ ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೀಠಿಕೆ ಹೊತ್ತ ರಥವನ್ನು ಮೆರವಣೆಗೆಯಲ್ಲಿ ಕನಕದಾಸ ರಂಗಮಂದಿರದವರೆಗೆ ಕರೆತರಲಾಯಿತು.ತಾಪಂ ಇಒ ಡಿ.ಜೆ.ಆಶೋಕ್, ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ. ಗ್ರೇಡ್ -2 ತಹಸೀಲ್ದಾರ್ ಸುರೇಶ್, ಕುರುವ ಮಂಜು, ಮಾರಿಕೊಪ್ಪದ ಮಂಜುನಾಥ, ಸಿಪಿಐ ಸುನಿಲ್, ಸಿಡಿಪಿಓ ಜ್ಯೋತಿ, ಅನೇಕ ಮುಖಂಡರು ಇದ್ದರು.
ಬಿ.ಇ,ಓ ನಿಂಗಪ್ಪ ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮಾ ವಂದಿಸಿದರು. ಶಿಕ್ಷಕ ಚನ್ನೇಶ್ ಅವರು ಕಾರ್ಯಕ್ರಮ ನಿರೂಪಿಸಿದರು.ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವೇಷಧಾರಿ ಹಳದಪ್ಪ ಅವರನ್ನು ಸನ್ಮಾನಿಸಲಾಯಿತು.