ಶರಣರಲ್ಲಿ ಸತ್ಯ, ಶುದ್ಧ, ಕಾಯಕ ಪ್ರವೃತ್ತಿ

KannadaprabhaNewsNetwork |  
Published : Aug 20, 2024, 12:54 AM IST
19ಕೆಪಿಎಸ್ಎನ್ಡಿ2:  | Kannada Prabha

ಸಾರಾಂಶ

ಸಿಂಧನೂರಿನ ನುಲಿಯ ಚಂದಯ್ಯ ವೃತ್ತದಲ್ಲಿರುವ ಅವರ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು

ಸಿಂಧನೂರು: ನಗರದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತದಿಂದ ಸೋಮವಾರ ನುಲಿಯ ಚಂದಯ್ಯ ಆಚರಿಸಲಾಯಿತು.

ಈ ವೇಳೆ ತಹಸೀಲ್ದಾರ್ ಅರುಣ ದೇಸಾಯಿ ಮಾತನಾಡಿ, ಶರಣರು ಸತ್ಯ, ಶುದ್ಧ ಕಾಯಕ, ಪ್ರಾಮಾಣಿಕತೆ ಮತ್ತು ದಾಸೋಹ ಪ್ರವೃತ್ತಿಯನ್ನು ಹೊಂದಿದ್ದರು. ಅವರ ಕಾಲದಲ್ಲಿ ಶೋಷಣೆಗೆ ಅವಕಾಶ ಇರಲಿಲ್ಲ. ಧಾರ್ಮಿಕ ಮತ್ತು ಸಾಮಾಜಿಕ ಶೋಷಣೆಯನ್ನು ವಚನಕಾರರು ಪ್ರಬಲವಾಗಿ ವಿರೋಧಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಶರಣರು ಶೋಷಣಾ ರಹಿತ ಸಮಾಜದ ಕನಸನ್ನು ಕಂಡಿದ್ದರು. ಈಗಲೂ ಅವರ ಕನಸು ಸಂಪೂರ್ಣವಾಗಿ ನನಸಾಗಿಲ್ಲ. ಇನ್ನು ಮುಂದಾದರೂ ಯುವ ಸಮುದಾಯ ಶರಣರ ಶರಣರ ಚಿಂತನೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಹೇಳಿದರು.

ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಬಿಜೆಪಿ ಮುಖಂಡರಾದ ರಾಜೇಶ್ ಹಿರೇಮಠ, ಶಿವಬಸನಗೌಡ ಗೊರೆಬಾಳ, ಎಚ್.ಎನ್. ಬಡಿಗೇರ, ಕುಳುವ ಮಹಾ ಸಂಘದ ತಾಲೂಕು ಘಟಕದ ಅಧ್ಯಕ್ಷ ರಾಮಕೃಷ್ಣ ಭಜಂತ್ರಿ, ಯಮನಪ್ಪ ವಂಕಲಕುಂಟಿ, ತಿಮ್ಮಪ್ಪ ಉದ್ಭಾಳ, ಬಾಲಪ್ಪ ಮನ್ನಾಪುರ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ