ಮಹಿಳೆಯರ ಆರ್ಥಿಕ ಅಭಿವೃದ್ಧಿಯಲ್ಲಿ ಟ್ರಸ್ಟ್‌ ಶ್ರಮ

KannadaprabhaNewsNetwork |  
Published : Aug 11, 2025, 12:34 AM IST
ಮುಂಡಗೋಡ: ಪಟ್ಟಣದ ಲೊಯೋಲ ವಿಕಾಸ ಕೇಂದ್ರದ ತರಬೇತಿ ಸಭಾಂಗಣದಲ್ಲಿ ಸಿಸಿಎಫ್ ಜನಸ್ಫೂರ್ತಿ ಮಹಿಳಾ ಸ್ವಸಸಹಾಯ ಸಂಘಗಳ ಟ್ರಸ್ಟ ನ ೨೦೨೪-೨೫ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು | Kannada Prabha

ಸಾರಾಂಶ

ಸಿಸಿಎಫ್ ಲೊಯೋಲ ಜನಸ್ಫೂರ್ತಿ ಎಸ್‌ಎಚ್‌ಜಿ ಟ್ರಸ್ಟ್ ಮಹಿಳೆಯರ ಆರ್ಥಿಕ ಚಟುವಟಿಕೆ ನಿರ್ವಹಣೆಗೆ ಸಾಕ್ಷಿಯಾಗಿದೆ

ಮುಂಡಗೋಡ: ಸಿಸಿಎಫ್ ಲೊಯೋಲ ಜನಸ್ಫೂರ್ತಿ ಎಸ್‌ಎಚ್‌ಜಿ ಟ್ರಸ್ಟ್ ಮಹಿಳೆಯರ ಆರ್ಥಿಕ ಚಟುವಟಿಕೆ ನಿರ್ವಹಣೆಗೆ ಸಾಕ್ಷಿಯಾಗಿದೆ ಎಂದು ಸಿಸಿಎಫ್ ಜನಸ್ಫೂರ್ತಿ ಮಹಿಳಾ ಸ್ವಸಸಹಾಯ ಸಂಘಗಳ ಟ್ರಸ್ಟ್‌ ಅಧ್ಯಕ್ಷೆ ಸರೋಜಾ ಚವ್ಹಾಣ ಸಂತಸ ವ್ಯಕ್ತಪಡಿಸಿದರು.

ಪಟ್ಟಣದ ಲೊಯೋಲ ವಿಕಾಸ ಕೇಂದ್ರದ ತರಬೇತಿ ಸಭಾಂಗಣದಲ್ಲಿ ೨೦೨೪-೨೫ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ತಾಲೂಕಿನ ಬಡ, ದುರ್ಬಲ ವರ್ಗದ ಮಹಿಳೆಯರ ಆರ್ಥಿಕ ಸಾಕ್ಷರತೆ, ಮಕ್ಕಳ ಶಿಕ್ಷಣ, ಸ್ವಯಂ ಉದ್ಯೋಗ, ಆರ್ಥಿಕ ಅಭಿವೃದ್ಧಿ ಸಾಧಿಸುವಲ್ಲಿ ಸತತ ೧೮ ವರ್ಷಗಳಿಂದ ಅವಿರತವಾಗಿ ಶ್ರಮಿಸುತ್ತಿರುವ ಎಂದರು.

ಸಾರ್ವಜನಿಕ ಸಮಾಜ ಸೇವೆ ಮಾಡುವುದು ಈಗಿನ ದಿನಮಾನಗಳಲ್ಲಿ ಕಷ್ಟಕರವಾಗಿದ್ದರೂ ಮಹಿಳೆಯರನ್ನು ಹುರಿದುಂಬಿಸಿ ಮಹಿಳೆಯರ ಪರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಕೇವಲ ಆರ್ಥಿಕ ನಿರ್ವಹಣೆ ಮಾತ್ರವಲ್ಲದೆ, ಮಹಿಳೆ ಮತ್ತು ಮಕ್ಕಳ ಪರ ಮಹಿಳಾ ದೌರ್ಜನ್ಯ, ಅಪೌಷ್ಠಿಕತೆ ನಿರ್ಮೂಲನೆ, ಸರ್ಕಾರಿ ವ್ಯವಸ್ಥೆಗಳ ಮೂಲಕ ಅಂಗನವಾಡಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಸರಿಪಡಿಸಲು ಶ್ರಮಿಸುತ್ತಿರುವುದು, ಗ್ರಾಮೀಣ ಭಾಗದಲ್ಲಿ ಸಾರಿಗೆ ವ್ಯವಸ್ಥೆ, ಕುಡಿಯುವ ನೀರು, ಅಂಗನವಾಡಿ ಕಟ್ಟಡ, ಭೂಮಿ ಮತ್ತು ವಸತಿ ಸೌಲಭ್ಯ ಪಡೆದುಕೊಳ್ಳಲು ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಜನಸಂಪರ್ಕ ಸಭೆ ನಡೆಸಲು ಆರೋಗ್ಯಕರವಾಗಿ ಕಾರ್ಯ ನಿರ್ವಹಿಸುತ್ತಿರುವುದು ಮತ್ತು ಮಹಿಳೆಯರನ್ನು ಪ್ರೋತ್ಸಾಹಿಸುತ್ತಿರುವುದು ಜನಸ್ಫೂರ್ತಿ ಟ್ರಸ್ಟನ ಕಾರ್ಯ ವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದರು.

ಟ್ರಸ್ಟ್‌ನ ಕಾರ್ಯ ನಿರ್ವಹಣಾಧಿಕಾರಿ ಫಾ.ಅನಿಲ್ ಡಿಸೋಜಾ ಮಾತನಾಡಿದರು. ಕಾರ್ಯದರ್ಶಿ ಸುನೀತಾ ಗೌಳಿ, ರಜಿಯಾ ಕರಡಿ, ಲಲಿತಾ ಲಮಾಣಿ, ಅಂಜಲಿನ್ ಸಿದ್ದಿ, ಶಾಂತಾ ಬಡಂಕರ, ಸುಧಾ ಲಮಾಣಿ, ಗೀತಾ ಗುಡಗೇರಿ, ಜನ್ನಾಬಾಯಿ ಗಾವಡೆ, ಸವಿತಾ ಅವನೆ, ಚೆನ್ನಮ್ಮ ಹೆಬ್ಬಳ್ಳಿ, ಲೊಕೇಶಗೌಡ ಇದ್ದರು. ಮಂಜುಳಾ ಲಮಾಣಿ ನಿರೂಪಿಸಿದರು. ಅಶ್ವಿನಿ ಬುಳ್ಳಣ್ಣನವರ ಸ್ವಾಗತಿಸಿದರು. ಗೀತಾ ಗುಡಗೆರಿ ಸಂವಿಧಾನ ಪ್ರಸ್ತಾವನೆ. ದಾಕುಬಾಯಿ ಯಮಕರ ವಂದಿಸಿದರು.

PREV

Recommended Stories

ದರ್ಶನ್ ಈಗ ವಿಚಾರಣಾಧೀನ ಕೈದಿ 7314
ಧರ್ಮಸ್ಥಳ ಗ್ರಾಮ: ಇಂದು ಮತ್ತೆ ಉತ್ಖನನ?