‘ತುಡರ್’ ತುಳು ಸಿನಿಮಾದ ಹಾಡು ಬಿಡುಗಡೆ

KannadaprabhaNewsNetwork |  
Published : Mar 14, 2024, 02:03 AM IST
11 | Kannada Prabha

ಸಾರಾಂಶ

ತುಡರ್ ಸಿನಿಮಾಕ್ಕೆ ಮಂಗಳೂರು ಮತ್ತು ಉಡುಪಿಯ ಆಸುಪಾಸಿನಲ್ಲಿ ಸುಮಾರು 36 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಈ ಸಿನಿಮಾ ಕರಾವಳಿಯಾದ್ಯಂತ ಜೂನ್‌ನಲ್ಲಿ ತೆರೆ ಕಾಣಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕತ್ತಲೆ ಆವರಿಸಿದ ತುಳು ಸಿನಿಮಾರಂಗಕ್ಕೆ ಬೆಳಕು ನೀಡುವ ಸಿನಿಮಾ ಬರಬೇಕಾಗಿದೆ. ಏಕಾತನೆಯಿಂದ ಕೂಡಿದ ಸಿನಿಮಾದಿಂದ ಬೇಸತ್ತ ಪ್ರೇಕ್ಷಕರು ಹೊಸ ಬಗೆಯ ಸಿನಿಮಾಗಳ ಕುರಿತು ನಿರೀಕ್ಷೆ ಮಾಡುತ್ತಾರೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಹೇಳಿದರು. ಸುಮುಖ ಪ್ರೊಡಕ್ಷನ್ ನಿರ್ಮಿಸಿರುವ ‘ತುಡರ್’ ತುಳು ಸಿನಿಮಾದ ಹಾಡು ಭಾರತ್ ಮಾಲ್‌ನ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ಬಿಡುಗಡೆಯ ಸಂದರ್ಭದಲ್ಲಿ ದೀಪ ಬೆಳಗಿಸಿ ಅವರು ಮಾತನಾಡಿದರು.

ಹಾಸ್ಯ ಚಿತ್ರಗಳ ಜೊತೆಗೆ ಸದಭಿರುಚಿಯ ಕಥಾವಸ್ತುವನ್ನು ಒಳಗೊಂಡ ಸಿನಿಮಾಗಳು ಬರಬೇಕು. ತುಡರ್ ಸಿನಿಮಾ ಹೊಸಬರ ಪ್ರಯತ್ನಕ್ಕೆ ಎಲ್ಲರ ಬೆಂಬಲ ಪ್ರೋತ್ಸಾಹ ಬೇಕಾಗಿದೆ ಎಂದು ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ತಿಳಿಸಿದರು. ಸಮಾರಂಭದಲ್ಲಿ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಕಾರ್ಪೋರೇಟರ್ ಕಿರಣ್ ಕುಮಾರ್, ಪ್ರೇಮ್ ಶೆಟ್ಟಿ ಸುರತ್ಕಲ್, ಭಾಸ್ಕರ ರೈ ಕುಕ್ಕುವಳ್ಳಿ, ಉಳಿದೊಟ್ಟು ರವೀಂದ್ರ ಶೆಟ್ಟಿ, ನಟ ಸಿದ್ಧಾರ್ಥ್ ಎಚ್. ಶೆಟ್ಟಿ, ಹರೀಶ್ ಶೆಟ್ಟಿ, ಆರತಿ ಶೆಟ್ಟಿ, ನಿರ್ದೇಶಕರಾದ ಎಲ್ವನ್ ಮಸ್ಕರೇನಸ್, ದಿನೇಶ್ ಶೆಟ್ಟಿ, ನಟರಾದ ವಿನೀತ್ , ಸಮತಾ ಅಮೀನ್, ಸಾಹಿಲ್ ರೈ ನಿರ್ಮಾಪಕ ವಿಲ್ಸನ್ ರೆಬೆಲ್ಲೊ, ಮೋಹನ್ ರಾಜ್ ಮತ್ತಿತರರಿದ್ದರು. ತುಡರ್ ಸಿನಿಮಾಕ್ಕೆ ಮಂಗಳೂರು ಮತ್ತು ಉಡುಪಿಯ ಆಸುಪಾಸಿನಲ್ಲಿ ಸುಮಾರು 36 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಈ ಸಿನಿಮಾ ಕರಾವಳಿಯಾದ್ಯಂತ ಜೂನ್‌ನಲ್ಲಿ ತೆರೆ ಕಾಣಲಿದೆ.

ತಾರಾಗಣದಲ್ಲಿ ಸಿದ್ಧಾರ್ಥ್ ಎಚ್. ಶೆಟ್ಟಿ, ದೀಕ್ಷಾ ಅಭಿಷೇಕ್‌, ಅರವಿಂದ ಬೋಳಾರ್ , ರೂಪ ವರ್ಕಾಡಿ, ಸದಾಶಿವ ಅಮೀನ್, ನಮಿತಾ ಕೂಳೂರು, ಎಲ್ಟನ್ ಮಸ್ಕರೇನಸ್‌, ವಿಕಾಸ್ ಪುತ್ರನ್, ಪ್ರಜ್ವಲ್ ಶೆಟ್ಟಿ, ಹರ್ಷಿತಾ ಶೆಟ್ಟಿ, ರಾಧೇಶ್ ಶೆಣೈ, ಅನ್ವಿತಾ ಸಾಗರ್, ಜಯಶೀಲ, ಉಮೇಶ್ ಮಿಜಾರ್ , ಅಶೋಕ್ ಕುಮಾರ್, ಉದಯ ಪೂಜಾರಿ, ಮೋಹನ್ ರಾಜ್ ಮೊದಲಾದವರು ಅಭಿನಯಿಸಿದ್ದಾರೆ.

ಸುಮುಖ ಪ್ರೊಡಕ್ಷನ್ಸ್, ಸ್ನೇಹ ಗ್ರೂಪ್ಸ್ ಹಾಗೂ ಟಿಇ ಫಿಲ್ಮ್ಸ್ ಜೊತೆಗೂಡಿ ಅರ್ಪಿಸಿರುವ ತುಡರ್ ಚಿತ್ರದ ನಿರ್ಮಾಪಕರು ವಿಲ್ಸನ್ ರೆಬೆಲ್ಲೊ, ಸಹ ನಿರ್ಮಾಪಕರು ಹರೀಶ್ ಶೆಟ್ಟಿ, ವಿದ್ಯಾ ಸಂಪತ್ ಕರ್ಕೇರಾ, ನಿರ್ದೇಶಕರು ತೇಜೇಶ್ ಪೂಜಾರಿ, ಎಲ್ಟನ್ ಮಸ್ಕರೇನಸ್. ಕಥೆ, ಚಿತ್ರ ಕಥೆ, ಸಂಭಾಷಣೆ ಸಾಹಿತ್ಯ ಮೋಹನ್ ರಾಜ್, ಸಂಗೀತ ಪ್ಯಾಟ್ಟ್ಸನ್ ಪಿರೇರಾ , ಸತೀಶ್ ಭಾರದ್ವಾಜ್ , ಛಾಯಾಗ್ರಹಣ: ಚಂತೂ ಮೆಪ್ಪಯುರು ಪ್ರೊಡಕ್ಷನ್ ಮ್ಯಾನೇಜರ್: ಕಾರ್ತಿಕ್ ರೈ, ನೃತ್ಯ ಸಂಯೋಜಕ ವಿಜೇತ್ ಆರ್ ನಾಯಕ್, ಸಂಕಲನ : ಗಣೇಶ್ ನೀರ್ಚಾಲ್, ಪ್ರಚಾರ ವಿನ್ಯಾಸ ದೇವಿ.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ