ಮಂಗಳೂರು: ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ತುಳು ಚಿತ್ರಗಳನ್ನು ಕಡೆಗಣಿಸುಲಾಗುತ್ತಿದೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಹೇಳಿದ್ದಾರೆ.
ನಾನು ತುಳುವಿನಲ್ಲಿ ನಿರ್ದೇಶಿಸಿದ ‘ಬಿರ್ದ್‌ದ ಕಂಬುಲ’ ಚಿತ್ರವನ್ನು ಸ್ವರ್ಧೆಗಾಗಿ ಕಳುಹಿಸಿದೆ. ತುಳುನಾಡಿನ ವಿಶಿಷ್ಟ ಜಾನಪದ ಕ್ರೀಡೆಯಾಗಿರುವ ಕಂಬಳದ ಹಿನ್ನೆಲೆ ಕಥೆಯಿದು. ಸುಮಾರು 700 ವರ್ಷಗಳ ಇತಿಹಾಸ ಇರುವ ಕಂಬಳ ತುಳುನಾಡಿನ ಸಾಂಸ್ಕೃತಿಕ ಕ್ರೀಡೆ. ಮುಖ್ಯಮಂತ್ರಿಗಳು ಈ ಬಾರಿಯ ಬಜೆಟ್‌ನಲ್ಲಿ ಕಂಬಳ ಕ್ರೀಡೆಗೆ ವಿಶೇಷ ಅನುದಾನ ಮತ್ತು ಪ್ರೊತ್ಸಾಹ ನೀಡುತ್ತೇನೆ ಎಂದು ಘೋಷಿಸಿದ್ದರು. ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಚಿತ್ರವನ್ನು ತಿರಸ್ಕರಿಸುವ ಮೂಲಕ ತುಳುನಾಡು ಮತ್ತು ತುಳುನಾಡು ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳಿಗೆ ಬೆಂಬಲಿಸದೆ ಪರಿಗಣಿಸದೆ ಇರುವುದರ ಮೂಲಕ ಸಂಬಂಧ ಪಟ್ಟವರು ತುಳು ಚಿತ್ರರಂಗದ ಮೇಲೆ ಕಡೆಗಣಿಸುವ ವ್ಯವಸ್ಥೆಯನ್ನು ಸೃಷ್ಟಿಸಿದ್ದಾರೆ.
17ನೇ ಚಿತ್ರೋತ್ಸವದಲ್ಲಿ ಮಲೆಯಾಳಂನ 6 ಚಿತ್ರಗಳು ಮತ್ತು ಮಾರಾಠಿಯ 4 ಚಿತ್ರಗಳಿಗೆ ಮನ್ನಣೆ ಹಾಕುವ ಮೂಲಕ ಕನ್ನಡ ನಾಡಿನಲ್ಲಿಯೇ ನಾವು ಅನಾಥರಾಗಿರುವುದು ದುರಂತವೇ ಸರಿ ಎಂದಿದ್ದಾರೆ.ತುಳು ಭಾಷೆಯನ್ನು ರಾಜ್ಯದ ಎರಡನೇ ಆಡಳಿತ ಭಾಷೆಯಾಗಿ ಪರಿಗಣಿಸಬೇಕಾಗಿದೆ. ಅದನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು ಎನ್ನುವ ಒತ್ತಾಯ, ಒತ್ತಡಗಳು ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ತುಳು ಚಿತ್ರಗಳನ್ನು 17ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದ ಸ್ವರ್ಧೆಗದೆ ಆಯ್ಕೆ ಮಾಡದೇ ಅನ್ಯಾಯ ಮಾಡಿದಂತಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಸೂಕ್ತ ಆದೇಶ ನೀಡಿ, ತುಳು ಚಿತ್ರರಂಗಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ನಿರ್ದೇಶಕ ಡಾ. ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.