ಕನ್ನಡಪ್ರಭವಾರ್ತೆ ಚನ್ನಗಿರಿ
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಈ ಸಂಸ್ಥೆಯಲ್ಲಿ 15 ಜನ ಆಡಳಿತ ಮಂಡಳಿಯ ಸದಸ್ಯರುಗಳಿದ್ದು, 2020ರಲ್ಲಿ ನಡೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಆರ್.ಎಂ.ರವಿ ಟೀಂ ಮತ್ತು ಎಚ್.ಎಸ್. ಶಿವಕುಮಾರ್ ಟೀಂ ಎಂದು ಎರಡು ಗುಂಪುಗಳಲ್ಲಿ ಆರ್.ಎಂ. ರವಿ ಟೀಂನವರು 12 ಜನ ನಿರ್ದೇಶಕರು ಜಯಗಳಿಸಿ, ಎಚ್.ಎಸ್. ಶಿವಕುಮಾರ್ ಟೀಂನವರು 3 ಜನ ಜಯಗಳಿಸಿದ್ದರು. ನನ್ನ ಟೀಂ ನವರೇ ಸಂಸ್ಥೆಯ ಆಡಳಿತವನ್ನು ನಡೆಸುತ್ತಿದ್ದು, ಕಳೆದ 5ವರ್ಷದ ನನ್ನ ಆಡಳಿತದಲ್ಲಿ ಯಾವುದೇ ರೀತಿಯ ಲೋಪಗಳಿಲ್ಲದೆ ಪ್ರಮಾಣಿಕವಾಗಿ ಅಧಿಕಾರವನ್ನು ನಡೆಸುತ್ತಾ ಬಂದಿದ್ದೇವೆ ಎಂದು ತಿಳಿಸಿದರು.
ಮುಂದೆ ಬರಲಿರುವ ತುಮ್ ಕೋಸ್ ನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಎಚ್.ಎಸ್. ಶಿವಕುಮಾರ್ ಟೀಂ ನವರನ್ನು ಗೆಲ್ಲಿಸಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದಿರುವ ಈ ಟೀಂ ನವರು ನನ್ನ ಟೀಂನ ನಿರ್ದೇಶಕ ಚಂದ್ರಶೇಖರ್ ಅವರಿಗೆ ಸೇರದೆ ಇರುವ ಅಡಿಕೆಯನ್ನು ಇವರೇ ಮಾರಾಟಕ್ಕೆ ತಂದ ಅಡಿಕೆ ಎಂದು ಬಿಂಬಿಸುತ್ತಿದ್ದಾರೆ ಎಂದು ದೂರಿದರು.ಅಡಿಕೆ ಕಳಪೆಗುಣ ಮಟ್ಟದಲ್ಲಿದ್ದರೂ ಸಹಾ ಮಾರಾಟಕ್ಕೆ ತೆಗೆದುಕೊಂಡಿದ್ದೀರಿ ಎಂದು ಆರೋಪಿಸಿ ಆಡಳಿತ ಮಂಡಳಿಯ ಮೇಲೆ ಕೆಟ್ಟ ಹೆಸರನ್ನು ತರುವ ಪ್ರಯತ್ನ ಮಾಡಿರುವುದು ಇವರ ಯೋಗ್ಯತೆ ಏನೆಂದು ತೋರುತ್ತದೆ ಎಂದು ಹೇಳಿದರು.
ತುಮ್ ಕೋಸ್ ಸಂಸ್ಥೆಯ ಸದಸ್ಯ ರೈತರುಗಳು ಅಡಿಕೆಯನ್ನು ಮಾರಾಟಕ್ಕೆ ತಂದಾಗ ಅಡಿಕೆಯ ಗುಣಮಟ್ಟವನ್ನು ಸಂಸ್ಥೆಯ ಸಿಬ್ಬಂದ್ದಿಗಳು ಪರೀಕ್ಷಿಸಿ ಟೆಂಡರ್ ಪ್ರಕ್ರಿಯೆ ನಡೆಯುವ ಮಾರಾಟದ ಹಾಲ್ ಗೆ ಕಳಿಸುತ್ತಾರೆ. ಕಳೆದ ಎರಡು ದಿನಗಳ ಹಿಂದೆ ಸಂಸ್ಥೆಯ ನಿರ್ದೇಶಕ ಸೋಮಶೇಖರ್ ಇವರ ಟ್ರಾಕ್ಟರ್ ನಲ್ಲಿ ಮಂಜಪ್ಪ, ಚಂದ್ರಪ್ಪ, ಗಂಗಾಧರಪ್ಪ ಎಂಬ ರೈತರು ಕಳೆದ 17ನೇ ತಾರೀಖು ಅಡಿಕೆಯನ್ನು ಮಾರಾಟ ಮಾಡಲು ತುಮ್ ಕೋಸ್ ಗೆ ತಂದಿದ್ದಾರೆ.
ತುಮ್ ಕೋಸ್ ನ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ನಾನು ನನ್ನ ಮನೆಯಲ್ಲಿದ್ದ ಅಡಿಕೆಯನ್ನು ರೈತರಿಗೆ ಮಾರಾಟ ಮಾಡಿದ್ದೇನೆ. ಅವರು ಆ ಅಡಿಕೆಯನ್ನು ತಂದು ಮಾರಾಟ ಮಾಡಿದ್ದಾರೆ. ಅಡಿಕೆ ತೆಗೆದುಕೊಂಡು ಹೋಗಲು ನನ್ನ ಟ್ರಾಕ್ಟರ್ ಅನ್ನು ಕೊಟ್ಟಿರುವುದು ತಪ್ಪೇ ಎಂದು ಪ್ರಶ್ನಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ಗಂಗಣ್ಣ, ಸಂತೋಷ್, ದೇವೆಂದ್ರಪ್ಪ ಉಪಸ್ಥಿತರಿದ್ದರು.