ಕನ್ನಡಪ್ರಭ ವಾರ್ತೆ ತುಮಕೂರು
ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾದರಿ ನೀತಿ ಸಂಹಿತೆಯು ಭಾರತ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಪ್ರಕಟಿಸಿದ ತಕ್ಷಣದಿಂದ ಜಾರಿಗೆ ಬರಲಿದ್ದು, ನೀತಿ ಸಂಹಿತೆಯ ಸಮರ್ಪಕ ಅನುಷ್ಠಾನಕ್ಕಾಗಿ ಜಿಲ್ಲೆಯಲ್ಲಿ 42 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಕಾನೂನು ಸುವ್ಯವಸ್ಥೆ, ಕ್ರಿಟಿಕಲ್ ಮತಗಟ್ಟೆಗಳನ್ನು ಗುರುತಿಸುವಿಕೆ, ಸೆಕ್ಟರ್ ಅಧಿಕಾರಿಗಳ ನೇಮಕ, ನಾಮಪತ್ರಗಳ ಸ್ವೀಕೃತಿ, ಮಸ್ಟರಿಂಗ್, ಡಿಮಸ್ಟರಿಂಗ್, ಎಸ್‌ಎಸ್‌ಟಿ, ಎಫ್‌ಎಸ್‌ಟಿ ತಂಡಗಳು, ಪೊಲೀಸ್ ಬಂದೋಬಸ್ತ್ ಇತರೆ ವ್ಯವಸ್ಥೆಗಳಿಗೆ ಕ್ರಮವಹಿಸುವಂತೆ ಸೂಚಿಸಿದರು.ಸ್ವೀಪ್ ಸಮಿತಿ ವತಿಯಿಂದ ಕ್ಯಾಂಪಸ್ ಅಂಬಾಸಡರ್‌ಗಳನ್ನು ನೇಮಿಸುವಂತೆ, ಶೈಕ್ಷಣಿಕ ಸಂಸ್ಥೆಗಳಲ್ಲಿ ಎಲೆಕ್ಟರೋಲ್ ಲಿಟರೇಸಿ ಕ್ಲಬ್ ಸ್ಥಾಪಿಸಿ ಯುವ ಮತದಾರರಲ್ಲಿ ಜಾಗೃತಿ ಮೂಡಿಸುವಂತೆ ಸೂಚಿಸಿದರು. ಮಾನವ ಸಂಪನ್ಮೂಲ ನಿರ್ವಹಣೆ, ಸಿಬ್ಬಂದಿ ತರಬೇತಿ, ಚುನಾವಣಾ ಸಾಮಗ್ರಿಗಳ ನಿರ್ವಹಣೆ, ಸಾರಿಗೆ ವ್ಯವಸ್ಥೆ, ಗಣಕೀಕರಣ ಮತ್ತು ಸೈಬರ್ ಸೆಕ್ಯುರಿಟಿ, ಇವಿಎಂ ನಿರ್ವಹಣೆ, ಚುನಾವಣಾ ವೆಚ್ಚ ಪರಿವೀಕ್ಷಣೆ, ಪೋಸ್ಟಲ್ ಬ್ಯಾಲೆಟ್ ಮತ್ತು ಇಟಿಪಿಬಿಎಸ್‌ಗೆ ನೋಡಲ್ ಅಧಿಕಾರಿಗಳ ನೇಮಕ, ಮಾಧ್ಯಮ ನಿರ್ವಹಣೆ, ಸಂಪರ್ಕ ಯೋಜನೆ, ಮತಪಟ್ಟಿ ತಯಾರಿಕೆ, ದೂರು ನಿರ್ವಹಣಾ ಕೋಶ ಮತ್ತು ಸಹಾಯವಾಣಿ, ಪಿಡಬ್ಲ್ಯುಡಿ ಮತದಾರರು, ಮೈಕ್ರೋ ಅಬ್ಸವರ್ಸ್, ಚುನಾವಣಾ ವೀಕ್ಷಕರು, ಮತಗಟ್ಟೆಗಳು, ಮತ ಎಣಿಕೆ, ಮತದಾನ ಮುಂತಾದ ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಿ ಯಾವುದೇ ಲೋಪದೋಷವಿಲ್ಲದ ಚುನಾವಣೆಗೆ ಎಲ್ಲರೂ ಸಹಕರಿಸುವಂತೆ ಅವರು ಈ ಸಂದರ್ಭ ಮನವಿ ಮಾಡಿದರು. ಎಂಸಿಎಂಸಿ ಸಮಿತಿ ಅಧ್ಯಕ್ಷರು, ಸದಸ್ಯರಿಗೆ ತರಬೇತಿ
ಜಿಲ್ಲಾಧಿಕಾರಿ ಕಚೇರಿ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಎಂ.ಸಿ.ಎಂ.ಸಿ ಸಮಿತಿ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಶುಭ ಕಲ್ಯಾಣ್ ಅವರು ಹಾಗೂ ಸಮಿತಿಯ ಸದಸ್ಯರು ಭಾಗವಹಿಸಿದ್ದರು.
ವಿದ್ಯುನ್ಮಾನ ಮಾಧ್ಯಮಗಳಲ್ಲಿ ರಾಜಕೀಯ ಜಾಹೀರಾತುಗಳಿಗೆ ಮುಂಚಿತವಾಗಿ ಜಿಲ್ಲಾ ಎಂಸಿಎಂಸಿ ಸಮಿತಿಯಿಂದ ದೃಢೀಕರಣ ಪ್ರಮಾಣಪತ್ರವನ್ನು ಪಡೆಯಬೇಕು. ಮಾಧ್ಯಮಗಳಲ್ಲಿ ಪ್ರಸಾರವಾಗುವಂತಹ ಪೇಯ್ಡ್ ನ್ಯೂಸ್(ಕಾಸಿಗಾಗಿ ಸುದ್ದಿ) ಪ್ರಕರಣಗಳನ್ನು ಎಂಸಿಎಂಸಿ ಸಮಿತಿಯು ಪರಿಶೀಲಿಸಬೇಕು ಮತ್ತು ಸಾಧ್ಯವಾದಷ್ಟು ಆಯಾ ದಿನವೇ ನಿರ್ಣಯ ಕೈಗೊಳ್ಳಬೇಕು. ಪತ್ರಿಕೆಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಿಗೆ ಡಿಐಪಿಆರ್ ದರಪಟ್ಟಿ ಅನ್ವಯಿಸಬೇಕು ಎಂದು ತಿಳಿಸಲಾಯಿತು.
ಮತದಾನ ನಡೆಯುವ 48 ಗಂಟೆಗಳ ಮುನ್ನ ಜಾಹೀರಾತು ಪ್ರಕಟಿಸಬೇಕೆಂದಿದ್ದಲ್ಲಿ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮ ಮುಂಚಿತವಾಗಿಯೇ ಜಿಲ್ಲಾ ಎಂಸಿಎಂಸಿ ಸಮಿತಿಯಿಂದ ಪ್ರಮಾಣ ಪತ್ರ ಪಡೆಯಬೇಕು ಎಂದು ತಿಳಿಸಲಾಯಿತು.