ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ನಂದೀಶ್ ವಿದ್ಯಾರ್ಥಿಗಳ ಜೊತೆಗೂಡಿ ದೀಪ ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಟಿ.ವಿ., ಮೊಬೈಲ್ ವ್ಯಾಮೋಹ ಹೆಚ್ಚಾಗಿದ್ದು, ಅವರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪುಟ್ಟ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರ ತರಲು ಇಂತಹ ಪ್ರತಿಭಾ ಕಾರ್ಯಕ್ರಮಗಳು ಅಗತ್ಯ. ಸೋತವರು ಬೇಸರ ಪಡದೆ ಮುಂದಿನ ದಿನಗಳಲ್ಲಿ ಗೆಲುವಿಗೆ ಶ್ರಮವಹಿಸಬೇಕು. ಪೋಷಕರು ಮಕ್ಕಳನ್ನು ಕೇವಲ ವಿದ್ಯಾಭ್ಯಾಸಕ್ಕೆ ಸೀಮಿತಗೊಳಿಸದೆ ಅವರು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು ಎಂದರು.ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಅಧಿಕಾರಿ ಡಾ.ಪ್ರಭಾ ಬಹುಮಾನ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುತ್ತಿರುವುದು ಉತ್ತಮ ಬೆಳವಣಿಗೆ. ಎಲ್ಲ ಶಾಲೆಗಳ ಶಿಕ್ಷಕರ ಪ್ರೋತ್ಸಾಹ ಹಾಗೂ ತರಬೇತಿಯಿಂದ ಮಕ್ಕಳಲ್ಲಿ ಪ್ರತಿಭೆ ಅನಾವರಣವಾಗಲು ಸಾಧ್ಯ ಎಂದರು.
ಈ ವೇಳೆ ಇಆರ್‌ಸಿ ನಂಜುಂಡಾಚಾರಿ, ಬೆಳಗೊಳ ವಾಗ್ದೇವಿ ಶಾಲೆ ಮುಖ್ಯಸ್ಥೆ ವೀಣಾ, ತಾಲೂಕು ಪ್ರಾಥಮಿಕ ಶಾಲೆಗಳ ಶಿಕ್ಷಕರ ಸಂಘದ ಕಾರ್ಯದರ್ಶಿ ರಾಘವೇಂದ್ರ, ಗ್ರಾಮದ ಯಜಮಾನ ಶ್ರೀನಿವಾಸೇಗೌಡ, ಪಾಲಹಳ್ಳಿ ಕ್ಲಸ್ಟರ್ ಸಿಆರ್‌ಪಿ ಮೋಹನ್, ಗುರುಕುಲ ವಿದ್ಯಾಸಂಸ್ಥೆ ಮುಖ್ಯೋಪಾಧ್ಯಾಯ ಹರ್ಷ ಜೋಶಿ, ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.ಸಾಮಾಜಿಕ ಬದಲಾವಣೆಗೆ ಮುಂದಾಗಿದ್ದ ಕನಕದಾಸರು: ಭರತೇಶ್
ಕನ್ನಡಪ್ರಭ ವಾರ್ತೆ ಮದ್ದೂರುಕನಕದಾಸರು ಕೀರ್ತನೆಗಳ ಮೂಲಕ ಸಾಮಾಜಿಕ ಬದಲಾವಣೆ ತರಲು ಮುಂದಾಗಿದ್ದರು ಎಂದು ತಾಪಂ ಮಾಜಿ ಸದಸ್ಯ ಭರತೇಶ್ ತಿಳಿಸಿದರು,
ಪಟ್ಟಣ ಪ್ರವಾಸಿ ಮಂದಿರದಲ್ಲಿ ಅಹಿಂದ ಸಂರಕ್ಷಣಾ ವೇದಿಕೆಯಿಂದ ನಡೆದ ಕನಕದಾಸರ ಜಯಂತಿಯಲ್ಲಿ ಮಾತನಾಡಿ, ಕನಕದಾಸರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.ಶಿಕ್ಷಕ ಕೆ.ಟಿ.ಶಿವಕುಮಾರ್ ಮಾತನಾಡಿ, ಭಕ್ತಿಗೆ ಹೆಸರಾದ ಕನಕದಾಸರು ಕುಲ ಕುಲ ಎನ್ನದಿರಿ ಕುಲದ ನೆಲೆಯನ್ನದರು ಬಲ್ಲಿರಾ ಎಂಬಂತೆ ಸಮಾಜದಲ್ಲಿ ನಾವುಗಳು ಜಾತಿ-ಮತ, ಪಂಥವನ್ನು ಮೀರಿದ ಭಕ್ತಿಯಸಾರ ಹಾಗೂ ಸಮಾನತೆ ಸಾರುತ್ತದೆ ಎಂದರು.
ಬಟ್ಟೆಯನ್ನು ನೀರಿನಲ್ಲಿ ಹದ್ದಿ ಹಾಕಿಕೊಂಡರೆ ಮಡಿ ಮೈಲಿಗೆ ಹೋಗುವುದಿಲ್ಲ. ಹೊಟ್ಟೆಯೊಳಗಿನ ಕಾಮ, ಕ್ರೋದಗಳನ್ನು ಹೋದಾಗ ಮಾತ್ರ ಮಡಿಯಾಗುವುದು ಎಂದರು.ಕಾರ್ಯಕ್ರಮದಲ್ಲಿ ಅಹಿಂದ ಸಂರಕ್ಷಣಾ ವೇದಿಕೆ ಅಧ್ಯಕ್ಷ ಮಲವರಾಜ್, ಗೌರವಾಧ್ಯಕ್ಷ ಮರಿ ಹೆಗ್ಗಡೆ, ಉಪಾಧ್ಯಕ್ಷ ಇಂತಿಯಾಜ್ ಉಲ್ಲಾ ಖಾನ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಶಶಿಕುಮಾರ್, ಪಿ.ಖಂಜಾಚಿ ರಮೇಶ್, ಸಂಚಾಲಕರಾದ ಅಸೀಫ್ ಪಾಷಾ, ನಿರ್ದೇಶಕರಾದ ಜಯರಾಂ ಪ್ರಮೀಳಾ, ಮಮತಾ, ಮುಖಂಡರಾದ ಗ್ರಾಪಂಸದಸ್ಯ ಬೀರೇಶ್ ರಾಚಯ್ಯ, ನಿವೃತ್ತ ಶಿಕ್ಷಕ ದಾಸಪ್ಪ, ನಾಗರಾಜ್ ತೈಲೂರು ಆನಂದಚಾರಿ, ಬಸವಚಾರಿ ಪುಟ್ಟ ಲಿಂಗಯ್ಯ ಆಲೂರು ಶಿವಪ್ಪ, ಸೋಮಶೇಖರ್ ಹಾಗೂ ಇತರರು ಇದ್ದರು.