ಶ್ರೀ ಚೌಡೇಶ್ವರಿ ಸನ್ನಿಧಿಯಲ್ಲಿ ೨೮ನೇ ವರ್ಷದ ಮೈಸೂರು ದಸರಾ

KannadaprabhaNewsNetwork |  
Published : Oct 22, 2026, 01:30 AM IST
ಶ್ರೀ ಚೌಡೇಶ್ವರಿ ಸನ್ನಿಧಿಯಲ್ಲಿ ೨೮ನೇ ವ?ದ ಮೈಸೂರು ದಸರಾ | Kannada Prabha

ಸಾರಾಂಶ

ದಕ್ಷಿಣದ ಎರಡನೇ ಕಾಶಿ ಎಂದು ಪ್ರಸಿದ್ಧವಾಗಿರುವ ಕೊರಟಗೆರೆ ಪಟ್ಟಣದ ಇತಿಹಾಸ ಪ್ರಸಿದ್ಧ ತೇರಿನ ಬೀದಿ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಭಕ್ತಿ, ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ದಕ್ಷಿಣದ ಎರಡನೇ ಕಾಶಿ ಎಂದು ಪ್ರಸಿದ್ಧವಾಗಿರುವ ಕೊರಟಗೆರೆ ಪಟ್ಟಣದ ಇತಿಹಾಸ ಪ್ರಸಿದ್ಧ ತೇರಿನ ಬೀದಿ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಭಕ್ತಿ, ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಸಂಪನ್ನಗೊಂಡಿತು.

ಕಳೆದ ೨೮ ವರ್ಷಗಳಿಂದ ಮೈಸೂರು ದಸರಾ ಮಾದರಿಯಲ್ಲಿ ದಸರಾ ಆಚರಣೆ ಮಾಡಿಕೊಂಡು ಬರುತ್ತಿರುವ ಟ್ರಸ್ಟ್‌ನ ಆಡಳಿತ ಮಂಡಳಿ, ಈ ಬಾರಿ ೧೧ ದಿನಗಳ ಕಾಲ ದೇವಿಗೆ ವಿವಿಧ ಬಗೆಯ ವಿಶೇಷ ಅಲಂಕಾರ ಮಾಡಿತ್ತು. ವಿಜಯದಶಮಿಯಂದು ಬೆಳಗ್ಗೆ ದೇವಿಗೆ ವಿಶೇಷ ಅಭಿಷೇಕ, ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಸುಗಂಧಭರಿತ ಹೂಗಳಿಂದ ಅಲಂಕರಿಸಿ, ಬನ್ನಿಮರದ ಸಂಪ್ರದಾಯದೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯ, ಭಕ್ತರ ಜಯಘೋಷದೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ನೂರಾರು ಭಕ್ತರು ಪಾಲ್ಗೊಂಡು ದೇವಿ ದರ್ಶನ ಪಡೆದರು. ದೇವಿ ಸನ್ನಿಧಿಯಲ್ಲಿ ಪ್ರತಿನಿತ್ಯ ಮಹಿಳಾ ಮಂಡಳಿ ಸದಸ್ಯೆಯರಿಂದ ಅಷ್ಟೋತ್ತರ ಮತ್ತು ಸಹಸ್ರನಾಮ ಪೂಜೆ ನೆರವೇರಿಸಲಾಯಿತು.

ಶ್ರೀ ಚೌಡೇಶ್ವರಿ ಟ್ರಸ್ಟ್ ಅಧ್ಯಕ್ಷ ಸೋಮಶೇಖರ್ ಮಾತನಾಡಿ, ಕಳೆದ ೨೮ ವರ್ಷಗಳಿಂದ ಮೈಸೂರು ದಸರಾ ಮಾದರಿಯಲ್ಲಿ ನಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಆಚರಿಸಿಕೊಂಡು ಬರುತ್ತಿದ್ದೇವೆ. ೧೧ ದಿನಗಳ ಕಾಲ ವಿವಿಧ ಅಲಂಕಾರಗಳಲ್ಲಿ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ವಿಜಯದಶಮಿಯಂದು ವಿಶೇಷ ಪೂಜೆ ಹಾಗೂ ಮೆರವಣಿಗೆ ನಡೆಸಲಾಗಿದೆ ಎಂದು ತಿಳಿಸಿದರು.

ಉಪಾಧ್ಯಕ್ಷ ನಾರಾಯಣ್ ಮಾತನಾಡಿ, ನವರಾತ್ರಿ ಉತ್ಸವ ಕೇವಲ ಧಾರ್ಮಿಕ ಆಚರಣೆಯಲ್ಲ. ನಮ್ಮ ನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಭಕ್ತಿ ಸಂಕೇತ. ನಾಡಿನಲ್ಲಿ ಉತ್ತಮ ಮಳೆಯಾಗಿ ರೈತಾಪಿ ವರ್ಗಕ್ಕೆ ಅನುಕೂಲವಾಗಲಿ, ಎಲ್ಲರ ಮನೆಗಳಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂಬುದು ದೇವಿಯಲ್ಲಿ ನಮ್ಮ ಪ್ರಾರ್ಥನೆ ಎಂದರು.

ಮಹಿಳಾ ಮಂಡಳಿ ಸದಸ್ಯೆ ಉಷಾ ಮಾತನಾಡಿ, ಮಹಿಳೆಯರು ಒಗ್ಗಟ್ಟಿನಿಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಭಕ್ತಿ ಮತ್ತು ಸಂಸ್ಕೃತಿಯ ಪರಂಪರೆ ಉಳಿಯುತ್ತದೆ. ನಾಡಿನ ಜನತೆಗೆ ಆರೋಗ್ಯ, ನೆಮ್ಮದಿ ಹಾಗೂ ಸಮೃದ್ಧಿ ದೊರೆಯಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದ್ದೇವೆ ಎಂದು ತಿಳಿಸಿದರು.

ಕೆ.ಎಸ್. ಶಿವರಾಜ್, ಪರಶುರಾಮ್, ನರಸಿಂಹಮೂರ್ತಿ, ಯೋಗೇಶ್, ಜಗದೀಶ್, ಪವನ್‌ಕುಮಾರ್, ಪುರುಷೋತ್ತಮ್, ಅಶ್ವಥ್, ದೇವರಾಜ್, ಮಹಾದೇವ, ಹೇಮಂತ್, ಲಕ್ಷ್ಮಿ ಶಿವರಾಜ್, ಧನಲಕ್ಷ್ಮಿ ಮಂಜುನಾಥ್, ನಂಜಮ್ಮ, ಉಷಾ, ವೇದಾವತಿ, ನಂದಿನಿ, ರಾಧಾ, ಕಾಂಚನ, ಲತಾ, ಸಿದ್ದಗಂಗಮ್ಮ, ಮಂಗಳ, ಕಾವ್ಯ, ಪಲ್ಲವಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಟುಂಬ ಸುಸೂತ್ರವಿರಲು ಸದಸ್ಯರಲ್ಲಿ ಬಾಂಧವ್ಯ ಮುಖ್ಯ
ಬಾಲಕೃಷ್ಣ ಸಚಿವರಾದ ಬಳಿಕ ಕ್ಷೇತ್ರಕ್ಕೆ ಹೆಚ್ಚು ಅನುದಾನ