ಮಳೆಗೆ ಎರಡು ಎಕರೆ ಈರುಳ್ಳಿ ಮಣ್ಣುಪಾಲು

KannadaprabhaNewsNetwork |  
Published : Nov 11, 2023, 01:16 AM ISTUpdated : Nov 11, 2023, 01:17 AM IST
ಪೋಟೊ10ಕೆಎಸಟಿ1: ಕುಷ್ಟಗಿ ತಾಲೂಕಿನ ಬನ್ನಟ್ಟಿ ಗ್ರಾಮದ ಚಂದ್ರಪ್ಪ ಗುರುಸಂಗಪ್ಪ ಹವಾಲ್ದಾರ ಎಂಬ ರೈತನ ಹೊಲದಲ್ಲಿ ಮಳೆಗೆ ಈರುಳ್ಳಿಯು ಹಾಳಾಗಿದೆ.ಪೋಟೊ10ಕೆಎಸಟಿ1ಎ: ಕುಷ್ಟಗಿ ತಾಲೂಕಿನ ಬನ್ನಟ್ಟಿ ಗ್ರಾಮದ ಚಂದ್ರಪ್ಪ ಗುರುಸಂಗಪ್ಪ ಹವಾಲ್ದಾರ ಎಂಬ ರೈತನ ಹೊಲದಲ್ಲಿ ಮಳೆಗೆ ಹಾಳಾಗಿರುವ ಈರುಳ್ಳಿಯ ಹೊಲಕ್ಕೆ ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು. | Kannada Prabha

ಸಾರಾಂಶ

ಬನ್ನಟ್ಟಿ ಗ್ರಾಮದ ಚಂದ್ರಪ್ಪ ಗುರುಸಂಗಪ್ಪ ಹವಾಲ್ದಾರ ಎಂಬ ರೈತನು ತನ್ನ ಹೊಲದಲ್ಲಿ ಸುಮಾರು ಎರಡು ಎಕರೆಯಷ್ಟು ಈರುಳ್ಳಿ ಬೆಳೆದಿದ್ದು ಫಸಲು ಚೆನ್ನಾಗಿ ಬಂದಿತ್ತು. ಕಳೆದ ನಾಲ್ಕೈದು ದಿನಗಳ ಹಿಂದೆ ಈರುಳ್ಳಿಯನ್ನು ಕಿತ್ತು ಒಣಗಲು ಹೊಲದಲ್ಲೇ ಹಾಕಿದ್ದರು. ಬುಧವಾರ ರಾತ್ರಿ ಏಕಾಏಕಿಯಾಗಿ ಸುರಿದ ಮಳೆಗೆ ಈರುಳ್ಳಿ ಮಣ್ಣುಪಾಲಾಗಿದೆ. ಲಕ್ಷಾಂತರ ರುಪಾಯಿ ಹಾನಿಯಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಪರಶಿವಮೂರ್ತಿ ದೋಟಿಹಾಳಕನ್ನಡಪ್ರಭ ವಾರ್ತೆ ಕುಷ್ಟಗಿಕಳೆದ ನಾಲ್ಕೈದು ದಿನಗಳ ಹಿಂದೆ ಕಿತ್ತು ಒಣ ಹಾಕಿದ ಈರುಳ್ಳಿ ಮಳೆಗೆ ನೀರುಪಾಲಾಗಿದೆ.ತಾಲೂಕಿನ ಬನ್ನಟ್ಟಿ ಗ್ರಾಮದ ಚಂದ್ರಪ್ಪ ಗುರುಸಂಗಪ್ಪ ಹವಾಲ್ದಾರ ಎಂಬ ರೈತನು ತನ್ನ ಹೊಲದಲ್ಲಿ ಸುಮಾರು ಎರಡು ಎಕರೆಯಷ್ಟು ಈರುಳ್ಳಿ ಬೆಳೆದಿದ್ದು ಫಸಲು ಚೆನ್ನಾಗಿ ಬಂದಿತ್ತು. ಕಳೆದ ನಾಲ್ಕೈದು ದಿನಗಳ ಹಿಂದೆ ಈರುಳ್ಳಿಯನ್ನು ಕಿತ್ತು ಒಣಗಲು ಹೊಲದಲ್ಲೇ ಹಾಕಿದ್ದರು. ಬುಧವಾರ ರಾತ್ರಿ ಏಕಾಏಕಿಯಾಗಿ ಸುರಿದ ಮಳೆಗೆ ಈರುಳ್ಳಿ ಮಣ್ಣುಪಾಲಾಗಿದೆ. ಲಕ್ಷಾಂತರ ರುಪಾಯಿ ಹಾನಿಯಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಪ್ರಸ್ತುತ ದಿನಗಳಲ್ಲಿ ಈರುಳ್ಳಿಗೆ ಪ್ರತಿ ಕ್ವಿಂಟಲ್‌ಗೆ ₹7000 ಇದೆ. ಸುಮಾರು 100 ಕ್ವಿಂಟಲ್‌ ಈರುಳ್ಳಿ ಹಾಳಾಗಿದೆ. ಇದರಿಂದ ಅಂದಾಜು ₹7 ಲಕ್ಷ ನಷ್ಟವಾಗಿದೆ. ಏಕಾಏಕಿಯಿಂದ ಸುರಿದ ಮಳೆ ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ.

ಅಧಿಕಾರಿಗಳ ಭೇಟಿ: ತೋಟಗಾರಿಕೆ ಇಲಾಖೆಯ ಅಧಿಕಾರಿ ಗುರುನಾಥ ಹೊಸಮನಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಾದ ಮೌನೇಶ ಬಡಿಗೇರ ಚಂದ್ರಪ್ಪ ಅವರ ಹೊಲಕ್ಕೆ ಭೇಟಿ ನೀಡಿ, ಪರಿಸ್ಥಿತಿ ಪರಿಶೀಲಿಸಿದ್ದಾರೆ.ಮಳೆಗೆ ಈರುಳ್ಳಿ ಬೆಳೆ ಹಾನಿಯಾದ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಈ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಕಳಿಸಿ, ಸೂಕ್ತ ಪರಿಹಾರ ನೀಡಲಾಗುವುದು ಎಂದು ತೋಟಗಾರಿಕೆ ಅಧಿಕಾರಿ ಗುರುನಾಥ ಹೊಸಮನಿ ತಿಳಿಸಿದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ