ಖೋಟಾ ನೋಟು ಮುದ್ರಿಸುತ್ತಿದ್ದ ಇಬ್ಬರ ಸೆರೆ: 338 ನೋಟು ಜಪ್ತಿ

KannadaprabhaNewsNetwork |  
Published : Jul 22, 2026, 04:00 AM IST
ಖೋಟಾ ನೋಟು | Kannada Prabha

ಸಾರಾಂಶ

ಐನೂರು ಮುಖಬೆಲೆಯ ಖೋಟಾ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಜಾಲ ಬೇಧಿಸಿರುವ ಕುಂಬಳಗೋಡು ಠಾಣೆ ಪೊಲೀಸರು ಚೆನ್ನೈ ಮೂಲದ ವ್ಯಕ್ತಿ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಐನೂರು ಮುಖಬೆಲೆಯ ಖೋಟಾ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಜಾಲ ಬೇಧಿಸಿರುವ ಕುಂಬಳಗೋಡು ಠಾಣೆ ಪೊಲೀಸರು ಚೆನ್ನೈ ಮೂಲದ ವ್ಯಕ್ತಿ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.

ಪಿರಿಯಾಪಟ್ಟಣ ನಿವಾಸಿ ಅರವಿಂದ್‌ (35) ಮತ್ತು ಚೆನ್ನೈ ಮೂಲದ ರವಿಸುಬ್ರಹ್ಮಣ್ಯ(34) ಬಂಧಿತರು. ಆರೋಪಿಗಳಿಂದ ₹3.29 ಲಕ್ಷ ಮೌಲ್ಯದ ₹500 ಮುಖ ಬೆಲೆಯ 338 ನಕಲಿ ನೋಟುಗಳು, ಜೆರಾಕ್ಸ್‌ ಯಂತ್ರ, ಲ್ಯಾಪ್‌ಟಾಪ್‌, ಕಾರು ಹಾಗೂ ಮೂರು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಸುಮಾರು ಆರೇಳು ತಿಂಗಳಿಂದ ಈ ದಂಧೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಅರವಿಂದ್‌ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿದ್ದು, ಮತ್ತೊಬ್ಬ ಪಿಯುಸಿ ವ್ಯಾಸಂಗ ಮಾಡಿದ್ದಾನೆ. ಒಂದು ವರ್ಷದ ಹಿಂದೆ ಇಬ್ಬರು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆಯೇ ಅಕ್ರಮ ಹಣ ದಂಧೆ ಬಗ್ಗೆ ಸಂಚು ರೂಪಿಸಿದ್ದರು. ಸುಮಾರು ಹತ್ತು ತಿಂಗಳ ಹಿಂದೆ ಅರವಿಂದ್‌ ಕುಂಬಳಗೋಡು ಬಳಿಯ ಬಿಡಿಎ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್‌ ಖರೀದಿಸಿ ವಾಸವಾಗಿದ್ದ. ಅಲ್ಲಿಯೇ ಜೆರಾಕ್ಸ್‌ ಯಂತ್ರ ಹಾಗೂ ಲ್ಯಾಪ್‌ಟಾಪ್‌ ಮೂಲಕ ನಕಲಿ ₹500 ಮುಖಬೆಲೆಯ ನೋಟುಗಳನ್ನು ತಯಾರಿಸುತ್ತಿದ್ದ. ನಂತರ ಅವುಗಳನ್ನು ಚೆನ್ನೈನಲ್ಲಿರುವ ಸ್ನೇಹಿತ ರವಿಸುಬ್ರಹ್ಮಣ್ಯಗೆ ಕಳುಹಿಸುತ್ತಿದ್ದ. ಈ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಅರವಿಂದ್‌ನನ್ನು ಕೆಂಚನಪುರ ಕ್ರಾಸ್‌ ಬಳಿ ಕೆಲ ದಿನಗಳ ಹಿಂದೆ ಬಂಧಿಸಿದ್ದರು. ನಂತರ ಈತ ನೀಡಿದ ಮಾಹಿತಿ ಮೇರೆಗೆ ಚೆನ್ನೈನ ಮಾರುತಿನಗರದಲ್ಲಿ ಆರೋಪಿ ರವಿಸುಬ್ರಹ್ಮಣ್ಯನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೇ.70-30 ಹಂಚಿಕೊಳ್ಳುತ್ತಿದ್ದರು:

ಆರೋಪಿಗಳ ಪೈಕಿ ಅರವಿಂದ್‌ ಖೋಟಾ ನೋಟುಗಳನ್ನು ತಯಾರಿಸಿ ಚೆನ್ನೈಗೆ ಕಳುಹಿಸುತ್ತಿದ್ದ. ಈತ ತನ್ನದೇ ಜಾಲದ ಮೂಲಕ ಖೋಟಾ ನೋಟುಗಳ ಮಾರಾಟ ಮಾಡುತ್ತಿದ್ದ. ಬಂದ ಲಾಭದಲ್ಲಿ ಶೇ.30ರಷ್ಟು ಅರವಿಂದ್‌, ಶೇ.70ರಷ್ಟು ರವಿಸುಬ್ರಹ್ಮಣ್ಯ ಹಣ ಹಂಚಿಕೊಳ್ಳುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

337 ಕೋಟಿ ರು.ಕ್ರಿಪ್ಟೋ ಅಕ್ರಮ: ಇ.ಡಿ. ತಲಾಶ್
7 ಸಾವಿರ ಕಿ.ಮೀ ಸುತ್ತಾಡಿ ಚಿನ್ನ ಕದ್ದ ಕಳ್ಳರನ್ನು ಹಿಡಿದ ಪೊಲೀಸರು