ನವೆಂಬರ್‌ನಲ್ಲಿ ಎರಡು ದಿನ ಧಾರ್ಮಿಕ ಸಭೆ: ರುದ್ರಮುನಿ ಸ್ವಾಮೀಜಿ

KannadaprabhaNewsNetwork |  
Published : Oct 09, 2024, 01:43 AM IST
8ಕೆಎಂಎನ್‌ಡಿ-15ಕಿಕ್ಕೇರಿ ಸಮೀಪದ ಶ್ರೀ ಪಂಚಭೂತೇಶ್ವರ ದೇಗುಲದಲ್ಲಿ ಶರನ್ನವರಾತ್ರಿ ಪ್ರಯುಕ್ತ ಮಠದ ಪೀಠಾಧ್ಯಕ್ಷ ಶ್ರೀ ರುದ್ರಮುನಿ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಶ್ರೀಪಂಚಭೂತೇಶ್ವರ ಮಠ ಹಾಗೂ ಇಲ್ಲಿರುವ ದೇಗುಲ ನಿರ್ಮಾಣವಾಗಿ ಹತ್ತು ವರ್ಷವಾಗಿದ್ದು, ನವೆಂಬರ್ ಮಾಹೆಯಲ್ಲಿ ಎರಡು ದಿನಗಳ ಬೃಹತ್‌ ಧಾರ್ಮಿಕ ಸಭೆ ನಡೆಯಲಿದೆ. ಸನಾತನ ಧರ್ಮರತ್ನಾಕರ ಮಾದೇಶ್‌ ಗುರೂಜಿ ನೇತೃತ್ವದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಸಂಸ್ಕಾರದ ಸಮಾಜದ ಸೃಷ್ಟಿಸಲು ಭಗವಂತನ ಆರಾಧನೆ ಜೊತೆಗೆ ಧಾರ್ಮಿಕ ಸಭೆ ಮೂಲಕ ಜಾಗೃತಿ ಮೂಡಿಸಬೇಕು ಎಂದು ಪಂಚಭೂತೇಶ್ವರ ಪೀಠಾಧ್ಯಕ್ಷ ರುದ್ರಮುನಿ ಸ್ವಾಮೀಜಿ ಹೇಳಿದರು.

ಸಮೀಪದ ಬೆಡದಹಳ್ಳಿ ಶ್ರೀಪಂಚಭೂತೇಶ್ವರ ಕ್ಷೇತ್ರದಲ್ಲಿ ಜರುಗಿದ ಶರನ್ನವರಾತ್ರಿ ಪೂಜೆ ಹಾಗೂ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ದೇವತಾರಾಧನೆ ಮಾನಸಿಕ ನೆಮ್ಮದಿ ಲಭಿಸಲಿದೆ. ದೇಗುಲದಲ್ಲಿನ ಪಾರ್ವತಿ, ಮಾರುತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ವಿಶೇಷ ದಿನಗಳಲ್ಲಿ ನಡೆಯುತ್ತಿರುವ ಪೂಜಾರಾಧನೆಯಿಂದ ಧನಾತ್ಮಕ ಶಕ್ತಿ ಲಭಿಸಲಿದೆ ಎಂದು ನುಡಿದರು.

ಶ್ರೀಪಂಚಭೂತೇಶ್ವರ ಮಠ ಹಾಗೂ ಇಲ್ಲಿರುವ ದೇಗುಲ ನಿರ್ಮಾಣವಾಗಿ ಹತ್ತು ವರ್ಷವಾಗಿದ್ದು, ನವೆಂಬರ್ ಮಾಹೆಯಲ್ಲಿ ಎರಡು ದಿನಗಳ ಬೃಹತ್‌ ಧಾರ್ಮಿಕ ಸಭೆ ನಡೆಯಲಿದೆ. ಸನಾತನ ಧರ್ಮರತ್ನಾಕರ ಮಾದೇಶ್‌ ಗುರೂಜಿ ನೇತೃತ್ವದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ.

ಆದಿಚುಂಚನಗಿರಿ ಮಹಾಸಂಸ್ಥಾನ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಮೈಸೂರಿನ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಚಿತ್ರದುರ್ಗದ ಮಾದಾರಚೆನ್ನಯ್ಯಗುರುಪೀಠದ ಮಾದರ ಚೆನ್ನಯ್ಯ ಸ್ವಾಮೀಜಿ, ಶ್ರವಣಬೆಳಗೊಳದ ದಿಗಂಬರಜೈನ ಮಠದ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ, ಚಂದ್ರವನ ಆಶ್ರಮದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಧಾರ್ಮಿಕ ಮಹಾಸಭೆ, ಹೋಮಹವನ ನಡೆಯಲಿದೆ. ವಿವಿಧ ಕ್ಷೇತ್ರಗಳ ಸಾಧಕಗಣ್ಯರಿಗೆ ಪಂಚಶ್ರೀ ಪ್ರಶಸ್ತಿ, ಕೆ.ಆರ್.ಪೇಟೆ ಪುರಸಭೆಯ 51 ಜನ ಪೌರಕಾರ್ಮಿಕರಿಗೆ ಪಾದ ಪೂಜೆ, ಸನ್ಮಾನ ನಡೆಯಲಿದೆ.

ಕೇಂದ್ರ ಸಚಿವ, ಮಂಡ್ಯ ಲೋಕಸಭಾ ಸದಸ್ಯ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಶಾಸಕ ಎಚ್.ಟಿ.ಮಂಜು, ಮಾಜಿ ಸಚಿವಕೆ.ಸಿ.ನಾರಾಯಣಗೌಡ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಕೆಪಿಸಿಸಿ ಸದಸ್ಯ ಸುರೇಶ್, ಆರ್‌ಟಿಒ ಮಲ್ಲಿಕಾರ್ಜುನ, ವಿಜಯರಾಮೇಗೌಡ, ಮನ್ಮುಲ್ ನಿರ್ದೇಶಕ ಡಾಲುರವಿ ಭಾಗವಹಿಸಲಿದ್ದಾರೆ.

ಸಭೆಯಲ್ಲಿ ಭಾರತೀಪುರ ಕ್ರಾಸ್‌ ಗ್ರಾಪಂ ಅಧ್ಯಕ್ಷ ಕುಬೇರ, ಮಾಜಿ ಉಪಾಧ್ಯಕ್ಷ ಸುನೀಲ್, ಮುಖಂಡರಾದ ಕಾಂತರಾಜು, ಕಿಟ್ಟಣ್ಣ, ಮಹೇಶ್, ಚಿಂತಕ ಜಗದೀಶ್, ಕಾಂತರಾಜು, ಉದ್ಯಮಿ ಬಿ.ರಾಜಶೇಖರ್, ಮೊಟ್ಟೆಮಂಜು, ಕೆ.ಎಸ್.ಚಂದ್ರು, ಮತ್ತಿತರರಿದ್ದರು.

ಶರನ್ನವರಾತ್ರಿ ಪೂಜೆ:

ಮಠದಲ್ಲಿನ ಪಾರ್ವತಿದೇವಿ, ಪಂಚಭೂತೇಶ್ವರ, ಕ್ಷೇತ್ರಪಾಲಕ ಮಾರುತಿದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ