ಎಂ.ಎಸ್ಸಿ. ಗಣಿತ ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾರ್ಯಾಗಾರ

KannadaprabhaNewsNetwork |  
Published : Sep 22, 2026, 03:00 AM IST
ಕಾರ್ಯಾಗಾರ ಉದ್ಘಾಟಿಸುತ್ತಿರುವ ಗಣ್ಯರು. | Kannada Prabha

ಸಾರಾಂಶ

ಮಂಗಳೂರು ವಿಶ್ವವಿದ್ಯಾಲಯದ ಮಂಗಳಗಂಗೋತ್ರಿಯ ಗಣಿತಶಾಸ್ತ್ರ ವಿಭಾಗದ ವತಿಯಿಂದ ಎಂ.ಎಸ್ಸಿ ಗಣಿತ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಕಾರ್ಯಾಗಾರವು ಇತ್ತೀಚೆಗೆ ನಡೆಯಿತು.

ಉಳ್ಳಾಲ : ಮಂಗಳೂರು ವಿಶ್ವವಿದ್ಯಾಲಯದ ಮಂಗಳಗಂಗೋತ್ರಿಯ ಗಣಿತಶಾಸ್ತ್ರ ವಿಭಾಗದ ವತಿಯಿಂದ ಎಂ.ಎಸ್ಸಿ ಗಣಿತ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಕಾರ್ಯಾಗಾರವು ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮದ ಮೊದಲ ದಿನದ ಅಧಿವೇಶನದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕೈಗಾರಿಕಾ ರಸಾಯನಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಹಾಗೂ ಯೆನೆಪೋಯ ವಿವಿ ಹಾಗೂ ಸಂಶೋಧನಾ ಕೇಂದ್ರದ ಸಂಶೋಧಕರಾದ ಪ್ರೊ. ಸರೋಜಿನಿ ಬಿ. ಕೆ. ಅವರು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಮಹಿಳೆಯರ ಮಹತ್ವದ ಹಾಗೂ ಹೆಚ್ಚುತ್ತಿರುವ ಪಾತ್ರವನ್ನು ವಿವರಿಸಿದರು.

ಎರಡನೇ ಅಧಿವೇಶನದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕರಾದ ಪ್ರೊ. ಮೋಹನ್ ಎಸ್. ಸಿಂಘೆ ಅವರು ಸಮಾಜಕ್ಕೆ ಪ್ರೇರಣೆಯಾಗಿರುವ ಹಲವು ಗಣ್ಯ ವ್ಯಕ್ತಿಗಳ ಮೌಲ್ಯಗಳು ಹಾಗೂ ಕೊಡುಗೆಗಳ ಕುರಿತು ಮಾತನಾಡಿದರು. ಮೂರನೇ ಅಧಿವೇಶನದಲ್ಲಿ ಪ್ರಾಧ್ಯಾಪಕಿ ಡಾ. ವಜೀದಾ ಬಾನು ಅವರು ಗಣಿತವು ಕೇವಲ ಸಂಖ್ಯೆಗಳು ಮತ್ತು ಸಮೀಕರಣಗಳಿಗೆ ಸೀಮಿತವಾಗಿರದೆ, ವಿವಿಧ ಕ್ಷೇತ್ರಗಳಲ್ಲಿ ಹಾಗೂ ನೈಜ ಜೀವನದಲ್ಲಿ ವ್ಯಾಪಕವಾಗಿ ಅನ್ವಯವಾಗುವ ವಿಷಯವಾಗಿದೆ ಎಂಬುದನ್ನು ಅವರು ವಿವರಿಸಿದರು. ಬದಲಾಗುತ್ತಿರುವ ಜಗತ್ತಿನಲ್ಲಿ ಗಣಿತದ ಬಹುಶಿಸ್ತೀಯ ಮಹತ್ವ ಹಾಗೂ ವಿವಿಧ ವೃತ್ತಿಪರ ಕ್ಷೇತ್ರಗಳಲ್ಲಿನ ಅದರ ಅನ್ವಯಿಕೆಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.ನಾಲ್ಕನೇ ಅಧಿವೇಶನದಲ್ಲಿ ಪ್ರೊ.ಎಚ್. ಎಸ್. ರಾಮಾನಂದ ಗಣಿತದ ಕಲಿಕೆ ಮತ್ತು ಸಂಶೋಧನೆಯಲ್ಲಿ ಕೃತಕ ಬುದ್ಧಿಮತ್ತೆ ಹೆಚ್ಚುತ್ತಿರುವ ಪಾತ್ರವನ್ನು ಅವರು ವಿವರಿಸಿದರು. ಕಾರ್ಯಕ್ರಮದಲ್ಲಿ ವಿಭಾಗದ ಅಧ್ಯಕ್ಷ ಮೋಹನ್ ಕೆ. ಎಸ್. ಹಾಗೂ ವಿಭಾಗದ ಬೋಧಕ ಸಿಬ್ಬಂದಿಗಳಾದ ಡಾ. ಕಿಶೋರಿ ಪಿ. ನಾರಾಯಣಕರ್, ಡಾ. ಚಂದ್ರು ಹೆಗಡೆ ಮತ್ತು ಭಾರ್ಗವ ಕೆ.ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಸಿಸಿ ಬ್ಯಾಂಕ್‌ 134 ಹುದ್ದೆಗಳ ನೇಮಕಾತಿಗೆ ಶೀಘ್ರ
ತಾಳಿಕೋಟೆ ಬಂದ್; ರೈತರ ಬೃಹತ್‌ ಪ್ರತಿಭಟನೆ