ಪುರುಷ, ಮಹಿಳೆಯರ ಸಾಧನೆಯಲ್ಲಿ ಇಬ್ಬರು ಪ್ರಮುಖ ಪಾತ್ರರು: ಮಲ್ಲಿಕಾರ್ಜುನ್

KannadaprabhaNewsNetwork |  
Published : Apr 09, 2026, 01:45 AM IST
8ಕೆಎಂಎನ್ ಡಿ12 | Kannada Prabha

ಸಾರಾಂಶ

ಯಾವುದೇ ಮಹಿಳೆಯರ ಸಾಧನೆ ಹಿಂದೆ ಪುರುಷನ ನೆರಳಿರುತ್ತದೆ. ಪುರುಷರ ಸಾಧನೆಗಳಿಗೆ ಮಹಿಳೆಯರ ಪಾತ್ರವೂ ಪ್ರಮುಖ ವಹಿಸಲಿದೆ. ಇಂದು ಮಹಿಳೆಯರು ನಾನಾ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದಾರೆ. ಸರ್ಕಾರ ವಿವಿಧ ಯೋಜನೆಗಳನ್ನು ನೀಡುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಬದುಕಿನತ್ತ ಮುನ್ನಡೆಯಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಹಿಳೆಯರ ಸಾಧನೆಗೆ ಪುರುಷರ ಸಹಕಾರವಿದ್ದಂತೆ ಪುರುಷರ ಸಾಧನೆಗೂ ಮಹಿಳೆಯರ ಪಾತ್ರ ಪ್ರಮುಖವಾದದ್ದು ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್ ತಿಳಿಸಿದರು.ತಾಲೂಕಿನ ಪುರ ಗ್ರಾಮ ಶ್ರೀಕ್ಷೆತ್ರ ಮಾದೇಶ್ವರಸ್ವಾಮಿ ಬೆಟ್ಟದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗ ಸಂಘ ಮಹಿಳಾ ಮತ್ತು ಪುರುಷ ಘಟಕ ಕೃಷಿಕ ಸಮಾಜ, ತಾಲೂಕು ನಾಗರಿಕ ರೈತ ಹಿತರಕ್ಷಣ ಸಮಿತಿ ಆಯೋಜಿಸಿದ್ದ 32ನೇ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಮಹಿಳೆಯರ ಸಾಧನೆ ಹಿಂದೆ ಪುರುಷನ ನೆರಳಿರುತ್ತದೆ. ಪುರುಷರ ಸಾಧನೆಗಳಿಗೆ ಮಹಿಳೆಯರ ಪಾತ್ರವೂ ಪ್ರಮುಖ ವಹಿಸಲಿದೆ. ಇಂದು ಮಹಿಳೆಯರು ನಾನಾ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದಾರೆ. ಸರ್ಕಾರ ವಿವಿಧ ಯೋಜನೆಗಳನ್ನು ನೀಡುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಬದುಕಿನತ್ತ ಮುನ್ನಡೆಯಬೇಕು ಎಂದರು.

ಅಖಿಲ ಕರ್ನಾಟಕ ಒಕ್ಕಲಿಗರ ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ಸುಜಾತ ಕೃಷ್ಣೇಗೌಡ ಮಾತನಾಡಿ, ಮಹಿಳೆಯರನ್ನು ಸಶಕ್ತರನ್ನಾಗಿ ಸಮಾಜದ ಮುಖ್ಯ ವಾಹಿನಿಗೆ ತರಲು ಮಹಿಳಾ ಸಂಘಟನೆಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ ಎಂದು ಶ್ಲಾಘಿಸಿದರು.

ಭಾರತದಲ್ಲಿ ಮಹಿಳೆಯರಿಗೆ ಇರುವ ಗೌರವ, ಜಗತ್ತಿನ ಬೇರೆ ಯವುದೇ ದೇಶದಲ್ಲಿ ಇಲ್ಲ. ಆದರೂ ನಮ್ಮ ದೇಶದಲ್ಲಿ ಕೆಲ ದುಷ್ಕರ್ಮಿಗಳು ಮಹಿಳೆಯರ ಮೇಲೆ ನಡೆಸುವ ಕುಕೃತ್ಯಗಳು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡುತ್ತದೆ. ಎಲ್ಲರೂ ಇದನ್ನು ತಡೆಗಟ್ಟಲು ಶ್ರಮೀಸಬೇಕಿದೆ ಎಂದರು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್, ಉಪನ್ಯಾಸಕ ಬಲ್ಲೆನಹಳ್ಳಿ ಮಂಜುನಾಥ್, ಬಳ್ಳೆಕೆರೆ ಮಂಜುನಾಥ್, ವಿಜಯಕುಮಾರಿ, ಶ್ರವಣಹಳ್ಳಿ ನಾಗಮ್ಮ, ಶಿವರಾಮೇಗೌಡ, ಅರುಣ್ ಕುಮಾರಿ, ಶಿವರಾಮ್ ಸಾಧಕ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ನಾಟನಹಳ್ಳಿ ಗಂಗಾಧರ, ಅಖಿಲ ಕರ್ನಾಟಕ ಒಕ್ಕಲಿಗರ ಮಹಿಳಾ ತಾಲೂಕು ಅಧ್ಯಕ್ಷ ಪ್ರೇಮ ನಾಗರಾಜು, ಕರವೇ ಜಿಲ್ಲಾ ಅಧ್ಯಕ್ಷ ಡಿ.ಎಸ್ ವೇಣು, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಹೊನ್ನೇನಹಳ್ಳಿ ಸೋಮಶೇಖರ್, ಅಪ್ಪು ಸೇವಾ ಟ್ರಸ್ಟ್ ಅಧ್ಯಕ್ಷ ಕಾಮನಹಳ್ಳಿ ಮಹೇಶ್, ಚಿಕ್ಕೋನಹಳ್ಳಿ ಚೇತನ್, ರೇಣುಕಾ ಚಂದ್ರು, ಶಿವಮ್ಮ, ನೇತ್ರಾವತಿ ಉಮೇಶ್, ವಿಮಲಾ, ಸುಧಾ, ಆಶಾ, ಶೃತಿ, ಮಾಣಿಕನಹಳ್ಳಿ ಸೋಮಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದಿ ಕುರಿತು ರಾಜ್ಯಪಾಲರ ಪತ್ರಕ್ಕೆ ಕರವೇ ಕಾವು: ಹೋರಾಟದ ಬಿಸಿ
ಗೊಲ್ಲರಹಳ್ಳಿ ಕಾಳಮ್ಮದೇವಿ ಜಾತ್ರಾ ಮಹೋತ್ಸವ ಸಂಪನ್ನ..!