5ನೇ ದಿನದಂದು ಕಾಂಗ್ರೆಸ್ , ಬಿಜೆಪಿ ಅಭ್ಯರ್ಥಿಗಳ ಉಮೇದುವಾರಿಕೆ । ಸ್ಪರ್ಧಾ ಕಣದಲ್ಲಿ ಈವರೆಗೂ ಒಟ್ಟು 7 ಮಂದಿ
ಕನ್ನಡಪ್ರಭ ವಾರ್ತೆ, ಉಡುಪಿನಾಮಪತ್ರ ಸಲ್ಲಿಕೆಯ ಐದನೇ ದಿನವಾದ ಬುಧವಾರ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಇಬ್ಬರು ನಾಮಪತ್ರ ಸಲ್ಲಿಕೆಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಬುಧವಾರ ಬಿಜೆಪಿ ಅಭ್ಯರ್ಥಿಯಾಗಿ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಪ್ರಕಾಶ್ ಹೆಗ್ಡೆ ನಾಮಪತ್ರ ಸಲ್ಲಿಸಿದರು.ಜಿಲ್ಲೆಯಲ್ಲಿ ಇದಕ್ಕೂ ಮೊದಲು ವಿವಿಧ ಪಕ್ಷಗಳ ಐವರು ಉಮೇದುದಾರರು ನಾಮಪತ್ರ ಸಲ್ಲಿಸಿದ್ದರು. ಇಲ್ಲಿವರೆಗೆ ಒಟ್ಟು ಏಳು ಮಂದಿ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದಂತಾಗಿದೆ.-- ಬಾಕ್ಸ್--
ಉಡುಪಿ ಅಭ್ಯರ್ಥಿಗಳ ಆಸ್ತಿ ವಿವರ---ಕೋಟಾರ ಪತ್ನಿ ಕೋಟ್ಯಧಿಪತಿಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರು 31,95,082 ರು.ಗಳಷ್ಟು ಚರಾಸ್ತಿಯನ್ನೂ, 48,00,000 ರು.ಗಳಷ್ಟು ಸ್ಥಿರಾಸ್ತಿಯನ್ನೂ ಸೇರಿ ಒಟ್ಟು 79,95,082 ರು. ಮೌಲ್ಯದ ಆಸ್ತಿಪಾಸ್ತಿಯನ್ನು ಹೊಂದಿದ್ದಾರೆ. ಜೊತೆಗೆ 40,64,920 ರು. ಸಾಲವನ್ನೂ ಪಡೆದಿದ್ದಾರೆ.ಅವರ ಪತ್ನಿಯ ಬಳಿ 55,00,000 ರು.ಗಳ ಚರಾಸ್ತಿ, 97,00,000 ರು.ಗಳ ಸ್ಥಿರಾಸ್ತಿ ಮತ್ತು 80,00,000 ರು.ಗಳ ಕಟ್ಟಡ ಸೇರಿ 1,62,79,027 ರು, ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಅವರ ಹೆಸರಿನಲ್ಲಿ 35,43,757 ರು. ಸಾಲವೂ ಇದೆ.--ಹೆಗ್ಡೆ ಅವರೂ ಕೋಟಿಪತಿಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು 35,34,326 ರು.ಗಳ ಚರಾಸ್ತಿ ಮತ್ತು 13,13,61,587 ರು.ಗಳ ಸ್ಥಿರಾಸ್ತಿ ಸೇರಿ ಒಟ್ಟು 13,48,95,913 ರು. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಹಾಗೆಯೇ 15,00,000 ರು.ಗಳ ಸಾಲ ಇದೆ. ಬೆಂಗಳೂರಿನಲ್ಲಿ ಮನೆ ಮತ್ತು ಭೂಮಿಯನ್ನು ಹೊಂದಿದ್ದಾರೆ. ಅವರ ಪತ್ನಿ 81,46,544 ರು. ಮೌಲ್ಯದ ಚರಾಸ್ತಿ, 1,05,00,180 ರು. ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಅವರ ಬಳಿ 64 ಲಕ್ಷ ರು. ಮೌಲ್ಯದ ಚಿನ್ನಾಭರಣಗಳಿವೆ.