ಕೆರೆಯಲ್ಲಿ ಈಜಲು ಹೋದ ಇಬ್ಬರು ಯುವಕರ ಸಾವು

KannadaprabhaNewsNetwork |  
Published : May 10, 2026, 01:15 AM IST
೯ಕೆಎಲ್‌ಆರ್-೭ಕೆರೆಯಲ್ಲಿ ಈಜಾಡಲು ಹೋದ ಇಬ್ಬರು ಯುವಕರ ಚಿತ್ರ. | Kannada Prabha

ಸಾರಾಂಶ

ಮಧ್ಯಾಹ್ನದ ಸುಡು ಬಿಸಿಲಿನ ತಾಪ ತಾಳಲಾಗದೆ ಗ್ರಾಮದ ಹೊರವಲಯದಲ್ಲಿನ ಕೆರೆಯಲ್ಲಿ ಈಜಾಡಲು ಹೋಗಿದ್ದಾರೆ. ಕೆರೆಯಲ್ಲಿನ ಆಳವನ್ನು ಅಂದಾಜಿಸಲಾಗದೆ ಊಳಿನಲ್ಲಿ ಸಿಲುಕಿಕೊಂಡ ಇಬ್ಬರು ಯುವಕರು ನೀರಿನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಶ್ರೀನಿವಾಸಪುರ: ಕೆರೆಯಲ್ಲಿ ಈಜಾಡಲು ಹೋದ ಇಬ್ಬರು ಯುವಕರು ನೀರಿನ ಊಳಿನಲ್ಲಿ ಸಿಲುಕಿ ಕೊಂಡು ಹೊರಬರಲಾಗದೆ ಮೃತಪಟ್ಟಿರುವ ಘಟನೆ ತಾಲೂಕಿನ ಲಕ್ಷ್ಮೀಪುರ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಪಚ್ಚರಮಾಕಲಹಳ್ಳಿಯ ಹೊರವಲಯದಲ್ಲಿ ನಡೆದಿದೆ. ಮೃತರನ್ನು ರೂಣೂರು ಹೋಬಳಿಯ ಚಾಂಪಲ್ಲಿ ಗಾರೆ ಕೆಲಸ ಮಾಡುತ್ತಿದ್ದ ನರೇಂದ್ರ(೨೫) ಹಾಗೂ ಚಂದನ್ (೨೫) ಎಂದು ಗುರುತಿಸಲಾಗಿದೆ. ಮಧ್ಯಾಹ್ನದ ಸುಡು ಬಿಸಿಲಿನ ತಾಪ ತಾಳಲಾಗದೆ ಗ್ರಾಮದ ಹೊರವಲಯದಲ್ಲಿನ ಕೆರೆಯಲ್ಲಿ ಈಜಾಡಲು ಹೋಗಿದ್ದಾರೆ. ಕೆರೆಯಲ್ಲಿನ ಆಳವನ್ನು ಅಂದಾಜಿಸಲಾಗದೆ ಊಳಿನಲ್ಲಿ ಸಿಲುಕಿಕೊಂಡ ಇಬ್ಬರು ಯುವಕರು ನೀರಿನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ತಾಲೂಕಿನ ರಾಯಲ್ಪಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೆಟ್ರೋಲ್‌ ಆಯ್ತು, ಈಗ ಜನೌಷಧಿ ಅಂಗಡಿಗಳ ಔಷಧವೂ ಕಳಪೆ: ರಾಜ್ಯ
ಪುಸ್ತಕ ಜಪ್ತಿ ಮಾಡಿದರೆ ಸರ್ಕಾರದ ವಿರುದ್ಧ ಕೇಸ್‌ ಹಾಕ್ತೀನಿ : ರವಿ ಹಂಜ್‌