ಕುಮಟಾ: ಇಲ್ಲಿನ ಸರಸ್ವತಿ ಪಿಯು ಕಾಲೇಜಿನಲ್ಲಿ ವಿಧಾತ್ರಿ ಅಕಾಡೆಮಿಯ ಸಹಯೋಗದಲ್ಲಿ ರೋಟರಿ ಕ್ಲಬ್‌ನವರು ಜಿಲ್ಲೆಯ ಪಿಯು ಕಾಲೇಜು ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕಿನ ಸಹಯೋಗದಲ್ಲಿ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ ಇತ್ತೀಚೆಗೆ ಆಯೋಜಿಸಿದ್ದು, ವಿಜೇತರು ಬಹುಮಾನ ಪಡೆದರು. ರೋಟರಿ ಅಧ್ಯಕ್ಷ ಅತುಲ ಕಾಮತ ಬಹುಮಾನ ವಿತರಿಸಿ ಮಾತನಾಡಿ, ನಮ್ಮ ಜಿಲ್ಲೆ ಪ್ರತಿಭೆಗಳ ಆಗರವಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಪ್ರತಿಭಾನ್ವೇಷಣೆಯ ಜತೆ ಪ್ರತಿಭೆಗೆ ಪ್ರೋತ್ಸಾಹವನ್ನೂ ಮಾಡಲಾಗುತ್ತಿದೆ. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಉತ್ಸಾಹ ಖುಷಿ ತಂದಿದೆ ಎಂದರು. ಬೆಳಗಾವಿಯ ನರಸಿಂಹ ಜೋಶಿ, ಮುಖ್ಯ ಸಂಯೋಜಕ ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ಎಚ್‌ಡಿಎಫ್‌ಸಿ ಬ್ಯಾಂಕಿನ ಅಧಿಕಾರಿ ಸತೀಶ ಹೆಗಡೆ ಮಾತನಾಡಿದರು. ಸಂಚಾಲಕ ಹರೀಶ್ಚಂದ್ರ ಗುನಗಾ ಸ್ಪರ್ಧೆಯ ಉದ್ದೇಶ ವಿವರಿಸಿದರು. ರೋಟರಿ ಝೋನಲ್ ಸಂಯೋಜಕಿ ಜಯಶ್ರೀ ಕಾಮತ, ಖಜಾಂಚಿ ಪವನ ಶೆಟ್ಟಿ, ಚಿದಾನಂದ ಭಂಡಾರಿ, ಕಾರ್ಯದರ್ಶಿ ವಿನಾಯಕ ಹೆಗಡೆ ನಿರ್ವಹಿಸಿದರು. ಭಾಷಣ ಸ್ಪರ್ಧೆಯ ನಿರ್ಣಾಯಕರಾಗಿ ಸಂದೀಪ ಭಟ್, ಡಿ.ಜಿ. ಪಂಡಿತ, ಕೇಶವ ನಾಯ್ಕ, ಚಿತ್ರಕಲಾ ಸ್ಪರ್ಧೆಯ ನಿರ್ಣಾಯಕರಾಗಿ ರವಿ ಗುನಗಾ, ಉದಯ ನಾಯ್ಕ, ಪ್ರೇಮಾ ರಾಯ್ಕರ ಕಾರ್ಯನಿರ್ವಹಿಸಿದರು. ಭಾಷಣ ಸ್ಪರ್ಧೆಯಲ್ಲಿ ಸರಸ್ವತಿ ಪಿಯು ಕಾಲೇಜಿನ ವೃಂದಾ ಶಾನಭಾಗ ಪ್ರಥಮ ಸ್ಥಾನ, ಯಲ್ಲಾಪುರ ವಿಶ್ವದರ್ಶನ ಕಾಲೇಜಿನ ದಿಗಂತ ದ್ವಿತೀಯ ಸ್ಥಾನ, ಬಾಡ ಪಿಯು ಕಾಲೇಜಿನ ಮೇಘನಾ ತೃತೀಯ ಸ್ಥಾನದೊಂದಿಗೆ ಬಹುಮಾನ ಪಡೆದರು.
ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯ ಪ್ರಾಥಮಿಕ ವಿಭಾಗದಲ್ಲಿ ಮಿರ್ಜಾನ ಬಿಜಿಎಸ್ ನ ಸೃಷ್ಟಿ ಪಟಗಾರ ಪ್ರಥಮ, ನಿರ್ಮಲಾ ಕಾನ್ವೆಂಟ್‌ನ ಜೋಹನ್ ಎಂ. ದ್ವಿತೀಯ, ಮಿರ್ಜಾನ ಬಿಜಿಎಸ್‌ನ ಸೃಜನ ಪಟಗಾರ ತೃತೀಯ ಸ್ಥಾನ ಪಡೆದರು.ಪ್ರೌಢಶಾಲಾ ವಿಭಾಗದಲ್ಲಿ ಧಾರೇಶ್ವರ ಜನತಾ ವಿದ್ಯಾಲಯದ ನಾಗಶ್ರೀ ಮುಕ್ರಿ ಪ್ರಥಮ, ಬಾಳಿಗಾ ಪ್ರೌಢಶಾಲೆಯ ಸಂಚಿತ್ ರಾಯ್ಕರ ದ್ವಿತೀಯ ಹಾಗೂ ಹರ್ಷಿತ ಭಟ್ ತೃತೀಯ ಸ್ಥಾನ ಪಡೆದರು.