ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರಾ-2026 ಇದರ ಶ್ರೀಶಾರದೆ ಮತ್ತು ನವದುರ್ಗೆಯರ ವಿಸರ್ಜನಾ ಮೆರವಣಿಗೆ ಕಾಪು ದೀಪಸ್ತಂಭದವರೆಗೆ ಬೃಹತ್ ಶೋಭಾಯಾತ್ರೆ ಅ. 21ರಂದು ಸಂಜೆ ನಡೆಯಲಿದೆ.
ಉಚ್ಚಿಲ: ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರಾ-2026 ಇದರ ಶ್ರೀಶಾರದೆ ಮತ್ತು ನವದುರ್ಗೆಯರ ವಿಸರ್ಜನಾ ಮೆರವಣಿಗೆ ಕಾಪು ದೀಪಸ್ತಂಭದವರೆಗೆ ಬೃಹತ್ ಶೋಭಾಯಾತ್ರೆ ಅ. 21ರಂದು ಸಂಜೆ ನಡೆಯಲಿದೆ.
ಈ ಸಂದರ್ಭದಲ್ಲಿ ರಾಹೆ 66ರಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಪೂರಕವಾಗಿ ಜಿಲ್ಲಾಡಳಿತವು ಸಂಚಾರ ಮಾರ್ಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಆದೇಶ ಹೊರಡಿಸಿದೆ.ಉಡುಪಿ-ಮಂಗಳೂರು ಮಾರ್ಗದಲ್ಲಿ ಘನ ವಾಹನಗಳಿಗೆ ಮಧ್ಯಾಹ್ನ 3ರಿಂದ ರಾತ್ರಿ 11ರವರೆಗೆ ನಿರ್ಬಂಧ ವಿಧಿಸಲಾಗಿದೆ. ಈ ವಾಹನಗಳು ಪರ್ಯಾಯ ಮಾರ್ಗವಾಗಿ ಕಟಪಾಡಿ-ಶಿರ್ವ-ಬೆಳ್ಳಣ್-ಪಡುಬಿದ್ರಿ ಮಾರ್ಗವನ್ನು ಬಳಸಬೇಕು. ಉಡುಪಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳು ಕಟಪಾಡಿ-ಶಿರ್ವ-ಬೆಳ್ಳಣ್-ಮುಂಡೂರು ಮಾರ್ಗವಾಗಿ ಸಂಚರಿಸಬೇಕು.ಟ್ರಕ್, ಲಾರಿ, ಟ್ಯಾಂಕರ್ ಸೇರಿದಂತೆ ಘನ ವಾಹನಗಳು ರಾತ್ರಿ 9 ಗಂಟೆಯವರೆಗೆ ಕುಂದಾಪುರ ಮತ್ತು ಉಡುಪಿ ಭಾಗಗಳಲ್ಲಿರುವ ಟ್ರಕ್ ಬೇಗಳಲ್ಲಿ ನಿಲುಗಡೆ ಮಾಡಬೇಕು. ಬಳಿಕ ತಮ್ಮ ಪ್ರಯಾಣವನ್ನು ಮುಂದುವರಿಸಬೇಕು.ಉಡುಪಿಯಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುವ ರಾತ್ರಿ ಪ್ರಯಾಣಿಕರ ಬಸ್ಸುಗಳು ರಾತ್ರಿ 9 ಗಂಟೆಯ ನಂತರ ಸಂಚಾರ ನಡೆಸಬೇಕು. ಈ ಸಂಚಾರ ನಿಯಂತ್ರಣ ಕ್ರಮಗಳು ವಿವಿಐಪಿ ವಾಹನಗಳು, ಸರ್ಕಾರಿ ವಾಹನಗಳು ಹಾಗೂ ತುರ್ತು ಸೇವಾ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸ್ವರೂಪ ಟಿ.ಕೆ. ಅವರು ಆದೇಶ ಹೊರಡಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.