ಕನ್ನಡಪ್ರಭವಾರ್ತೆ ವಿರಾಜಪೇಟೆ
ಬ್ಲೂಬ್ಯಾಂಡ್ ಎಫ್.ಎಂ.ಎಸ್.ಸಿ.ಐ. ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್ 2024 ಮತ್ತು ಕರ್ನಾಟಕ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರು, ತುಮಕೂರು ನಲ್ಲಿ 2024ರ ರ‍್ಯಾಲಿಯ ಅಂತಿಮ 06 ನೇ ಸುತ್ತಿನ ರ‍್ಯಾಲಿ ನಡೆಯಿತು. 06ನೇ ಸುತ್ತಿನ ರ‍್ಯಾಲಿಯಲ್ಲಿ ಕೊಡಗು ಜಿಲ್ಲೆಯ ಅಮ್ಮತ್ತಿಯಲ್ಲಿ ನಡೆದ ರ‍್ಯಾಲಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದ ಜೋಡಿ ಗೌರವ್ ಗಿಲ್, ಮತ್ತು ಅನಿರುದ್ ಜೋಡಿಯು ಪ್ರಥಮ ಸ್ಥಾನಗಳಿಸಿದರು. ಜೈಸನ್ ಸಲ್ಡಾನಾ ಮತ್ತು ಉದ್ದಪಂಡ ತಿಮ್ಮು ದ್ವಿತೀಯ, ಹಾಗೂ ಅರ್ಜುನ್ ರಾವ್ ಮತ್ತು ಸತೀಶ್ ರಾಜ್ ಗೋಪಾಲ್ ತೃತೀಯ ಸ್ಥಾನ ಪಡೆದುಕೊಂಡರು.
ಐ.ಎನ್.ಆರ್.ಸಿ 2 ವಿಭಾಗದಲ್ಲಿ: ಜೈಸನ್ ಸಲ್ಡಾನಾ ಮತ್ತು ಉದ್ದಪಂಡ ತಿಮ್ಮು ಜೋಡಿಯು ಪ್ರಥಮ, ಠಾಕೂರ್ ಆದಿತ್ಯ ಸಿಂಗ್ ಮತ್ತು ವಿರೇಂದ್ರ ಕಶೈಪ್ ದ್ವಿತೀಯ, ಹಾಗೂ ಡೀನ್ ಮಸ್ಕರೇನಿಯಸ್ಸ್ ಮತ್ತು ಕೊಂಗಂಡ ಗಗನ್ ತೃತೀಯ ಸ್ಥಾನ ಪಡೆದುಕೊಂಡರು.ಜೆ.ಐ.ಎನ್.ಆರ್.ಸಿ ವಿಭಾಗದಲ್ಲಿ: ಕೊಡಗಿನ ಅಭಿನ್ ರೈ ಮತ್ತು ಅರವೀಂದ್ ಧೀರೇಂದ್ರ ದ್ವಿತೀಯ ಸ್ಥಾನ ಪಡೆದುಕೊಂಡರು. ಜಿಪ್ಸಿ ವಿಭಾಗದಲ್ಲಿ: ಕೊಡಗಿನ ಕೊಂಗಂಡ ಕವನ್ ಕಾರ್ಯಪ್ಪ ಮತ್ತು ಮನೆಯಪಂಡ ಗೌರವ್ ಅಯ್ಯಪ್ಪ, ಪ್ರಥಮ ಸ್ಥಾನ ಪಡೆದುಕೊಂಡರು. ಐ.ಎನ್.ಆರ್.ಸಿ ಯ ವಿವಿಧ ಭಾಗಗಳಲ್ಲಿ ಕೊಡಗಿನ ಅಜ್ಜಿನಿಕಂಡ ಆನಂದ್ ಸೋಮಯ್ಯ ಮೇಕೆರೀರ ಕಾರ್ಯಪ್ಪ, ನೆಲ್ಲಮಕ್ಕಡ ಸಚೀನ್ ಬೋಪಣ್ಣ ಪ್ರತಿನಿಧಿಸಿದರು. 2024 ನೇ ವರ್ಷದ ಸಮಗ್ರ ಚಾಂಪಿಯನ್ ಆಗಿ ಕರ್ಣ ಕಡೂರು ಮತ್ತು ಮೂಸಾ ಶರೀಫ್ ತಾರ ಜೋಡಿಯು ಪ್ರಥಮ ಸ್ಥಾನ ಪಡೆದುಕೊಂಡರು, ಸಹ ಚಾಲಕ ವಿಭಾಗದಲ್ಲಿ ಉದ್ದಪಂಡ ತಿಮ್ಮು ದ್ವಿತೀಯ ಸ್ಥಾನ.