ಉಡುಪಿ: ‘ದ ಒರಿಜಿನಲ್ ಆಭರಣ ಜುವೆಲ್ಲರ್ಸ್’ ನವೀಕೃತ ಶೋರೂಂ ಕಾರ್ಯಾರಂಭ

KannadaprabhaNewsNetwork |  
Published : Oct 23, 2026, 02:30 AM IST
21ಆಭರಣ | Kannada Prabha

ಸಾರಾಂಶ

ನಗರದ ಹೃದಯ ಭಾಗದ ಕಾರ್ಪೋರೇಶನ್ ಬ್ಯಾಂಕ್ ರಸ್ತೆಯಲ್ಲಿ 1935 ರಲ್ಲಿ ಆರಂಭಗೊಂಡಿದ್ದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ದ ಒರಿಜಿನಲ್ ಆಭರಣ ಜುವೆಲ್ಲರ್ಸ್ ಉಡುಪಿಯ ಮೂಲ ಮಳಿಗೆಯನ್ನು ಅತ್ಯಾಧುನಿಕ ಶೈಲಿಯಲ್ಲಿ ನವೀಕೃತಗೊಳಿಸಿದ್ದು, ಈ ನವೀಕೃತ ಶೋರೂಂ ಪುನಾರಂಭಗೊಂಡಿದೆ. ಬುಧವಾರ ಈ ಶೋರೂಂನ್ನು ಗ್ರಾಹಕರ ಸಮ್ಮುಖದಲ್ಲಿ ದೀಪ ಪ್ರಜ್ವಲಿಸಿ ಲೋಕಾರ್ಪಣೆಗೊಳಿಸಲಾಯಿತು.

ಉಡುಪಿ: ನಗರದ ಹೃದಯ ಭಾಗದ ಕಾರ್ಪೋರೇಶನ್ ಬ್ಯಾಂಕ್ ರಸ್ತೆಯಲ್ಲಿ 1935 ರಲ್ಲಿ ಆರಂಭಗೊಂಡಿದ್ದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ದ ಒರಿಜಿನಲ್ ಆಭರಣ ಜುವೆಲ್ಲರ್ಸ್ ಉಡುಪಿಯ ಮೂಲ ಮಳಿಗೆಯನ್ನು ಅತ್ಯಾಧುನಿಕ ಶೈಲಿಯಲ್ಲಿ ನವೀಕೃತಗೊಳಿಸಿದ್ದು, ಈ ನವೀಕೃತ ಶೋರೂಂ ಪುನಾರಂಭಗೊಂಡಿದೆ. ಬುಧವಾರ ಈ ಶೋರೂಂನ್ನು ಗ್ರಾಹಕರ ಸಮ್ಮುಖದಲ್ಲಿ ದೀಪ ಪ್ರಜ್ವಲಿಸಿ ಲೋಕಾರ್ಪಣೆಗೊಳಿಸಲಾಯಿತು.

ಆಭರಣ ಜುವೆಲ್ಲರ್ಸ್ ಪ್ರೈ.ಲಿ. ಸಂಸ್ಥೆಯ ಮೊದಲ ಮಳಿಗೆಯಾಗಿರುವ ಈ ಕಟ್ಟಡವು ಸುಮಾರು 9 ದಶಕಗಳಿಗೂ ಹೆಚ್ಚು ಕಾಲ ಸಂಸ್ಥೆಯ ಇತಿಹಾಸ ಹಾಗೂ ಗುರುತಿನೊಂದಿಗೆ ಬೆಸೆದುಕೊಂಡಿದೆ. ಈ ಶೋರೂಂ ಸಂಸ್ಥೆಯ ಪ್ರಧಾನ ಕಚೇರಿಯಾಗಿ ಕಾರ್ಯ ನಿರ್ವಹಿಸುತ್ತಿದೆ.ನವೀಕೃತ ಮಳಿಗೆಯನ್ನು ಖ್ಯಾತ ಮಹಿಳಾ ಸಾಧಕಿಯರಾದ ಗೀತಾ ಪೈ, ಸುಮನಾ ಪ್ರಭು, ಶಾಲಿನಿ ಜಿ. ಶಂಕರ್, ಸಂಧ್ಯಾ ಎಸ್. ಪೈ, ರೋಹಿಣಿ ಶೆಣೈ, ನಟಿ ಅಂಕಿತಾ ಅಮರ್, ಲತಾ ಹೆಗ್ಡೆ, ಗೀತಾ ಹೆಗ್ಡೆ ಹಾಗೂ ಆಭರಣ ಜುವೆಲ್ಲರ್ಸ್ ಸಂಸ್ಥೆಯ ಅಧ್ಯಕ್ಷ ಮಧುಕರ್ ಎಸ್. ಕಾಮತ್ ಅವರು ದೀಪ ಬೆಳಗಿಸಿ ಉದ್ಘಾಟಿದರು. ಮುಖ್ಯ ಅತಿಥಿಗಳು, ಗಣ್ಯರು, ಗ್ರಾಹಕರು ಸಂಸ್ಥೆ ಇನ್ನಷ್ಟು ಏಳಿಗೆಯನ್ನು ಕಾಣಲಿ ಎಂದು ಶುಭ ಹಾರೈಸಿದರು.

ಆಭರಣ ಜುವೆಲ್ಲರ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಭಾಸ್ ಎಂ. ಕಾಮತ್, ನಿರ್ದೇಶಕರಾದ ಮಹೇಶ್ ಎಂ. ಕಾಮತ್, ಸಂಧ್ಯಾ ಎಸ್. ಕಾಮತ್, ವೀಣಾ ಎಂ. ಕಾಮತ್‌, ಡಾ. ಅರುಣ್ ಕುಡ್ಡ, ಕ್ಷಮಾ ಕುಡ್ಡ, ಸಾತ್ವಿಕ್ ಎಸ್. ಕಾಮತ್, ಆಕರ್ಷ್ ಎಂ. ಕಾಮತ್, ಶ್ಲೋಕಾ ಕಾಮತ್, ಅದಿತ್ರಿ ಕಾಮತ್, ಮಾಯಾ ಮತ್ತು ಗಿರಿಧರ್ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.ಚಿನ್ನಾಭರಣಗಳ ವಿಪುಲ ಸಂಗ್ರಹ: ಆಭರಣ ಜುವೆಲ್ಲರ್ಸ್ ನ ಈ ಮೂಲ ಮಳಿಗೆಯನ್ನು ಅತ್ಯಾಧುನಿಕ ಶೈಲಿಯಲ್ಲಿ ನವೀಕೃತಗೊಳಿಸಿದ್ದು, ಎರಡು ಮಹಡಿಗಳಲ್ಲಿ ಗ್ರಾಹಕರಿಗೆ ಅತ್ಯುತ್ತಮ ಶಾಪಿಂಗ್ ಅನುಭವವನ್ನು ನೀಡಲಿದೆ. ನೆಲ ಮಹಡಿಯಲ್ಲಿ ವೆಡ್ಡಿಂಗ್ ಕಲೆಕ್ಷನ್, ಹೆರಿಟೇಜ್ ಹಾಗೂ ಜೆಮ್‌ ಸ್ಟೋನ್ ವಿಭಾಗಗಳಿವೆ. ಚಿನ್ನಾಭರಣಗಳ ವಿಫುಲ ಸಂಗ್ರಹವಿದ್ದು, ತಮ್ಮ ನೆಚ್ಚಿನ ಆಭರಣಗಳನ್ನು ಖರೀದಿಸಬಹುದಾಗಿದೆ. ಮೊದಲ ಮಹಡಿಯಲ್ಲಿ ನಿಯೋಲೈಟ್ ಮತ್ತು ಕಂಟೆಂಪರರಿ (ಸಮಕಾಲೀನ) ಕಲೆಕ್ಷನ್‌ಗಳಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧರ್ಮದ ನಾಶ ಧರ್ಮದ ವಿಜಯವೇ ವಿಜಯದಶಮಿ: ರಂಭಾಪುರಿ ಜಗದ್ಗುರು
ಇಳಕಲ್ಲದಲ್ಲಿ ಆರೆಸ್ಸೆಸ್‌ ಆಕರ್ಷಕ ಪಥಸಂಚಲನ