ಕಾಸರಗೋಡು, ಉಡುಪಿ, ದ.ಕ., ಉ.ಕ. ಜಿಲ್ಲೆಗಳ ಭಜನಾ ಮಂಡಳಿಗಳ ಸಮಾವೇಶ
ಈ ಬಗ್ಗೆ ಸಂತ ಕವಿ ಕನಕದಾಸ ಅಧ್ಯಯನ ಕೇಂದ್ರ ಸದಸ್ಯ ಸಂಚಾಲಕಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಸಮಾವೇಶದಲ್ಲಿ ಮಹಾಲಕ್ಷ್ಮೀ ಮೊಗವೀರ ಭಜನಾ ಮಂಡಳಿ ಕೊಡವೂರು, ರಾಗ ರಂಜಿನಿ ತಂಡ ಕುಂಜಿಬೆಟ್ಟು ಉಡುಪಿ, ಶ್ರೀ ಮಹಾಗಣಪತಿ ಭಜನಾ ಮಂಡಳಿ ಹೆಂಗವಳ್ಳಿ ಕುಂದಾಪುರ, ಜಿ.ಎಸ್.ಬಿ. ಮಹಿಳಾ ಮಂಡಳಿ ಎಸ್. ಎಲ್. ವಿ . ಟಿ . ಉಡುಪಿ, ಶ್ರೀ ಮಾರಿಕಾಂಬ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕಿರಾಡಿ ಬ್ರಹ್ಮಾವರ, ದುರ್ಗಾಪರಮೇಶ್ವರಿ ಭಜನಾ ಮಂಡಳಿ ಬಾಳೆ ತೋಟ ಮೂಡು ಅಂಜಾರು ಹಿರಿಯಡ್ಕ, ಯಕ್ಷಿ ಕಲ್ಲುಕುಟಿಗ ಭಜನಾ ಮಂಡಳಿ ಕೋಟೇಶ್ವರ, ಸ್ವರಚಿನ್ನಾರಿ ಭಜನಾ ಮಂಡಳಿ ಕಾಸರಗೋಡು, ಸರ್ವೇಶ್ವರೀ ಭಜನಾ ಮಂಡಳಿ ಹೊನ್ನಾವರ, ಬಾಲ ವಿಕಾಸ ಭಜನಾ ಮಂಡಳಿ ಹೊಸಬೆಟ್ಟು ಮಂಗಳೂರು, ಶ್ರೀ ವೀರಭದ್ರ ಗುರು ಮಾಚಿದೇವ ಭಜನಾ ಮಂಡಳಿ ಕಾರ್ಕಳ, ಶ್ರೀ ಬಾಲಾಜಿ ಕಲಾ ಭಜನಾ ಮಂಡಳಿ ಮೂಡಹಡು ಸಾಸ್ತಾನ ಮತ್ತು ಶ್ರೀ ಬ್ರಹ್ಮಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಕರಂದಾಡಿ ಕಾಪು ತಂಡ ಸೇರಿ ಒಟ್ಟು 13 ಭಜನಾ ತಂಡಗಳು ಭಜನೆಗಳನ್ನು ಹಾಡಲಿದ್ದಾರೆ. ರಮೇಶ್ ಕಲ್ಯಾಡಿ ಮತ್ತು ಜ್ಯೋತಿ ದೇವಾಡಿಗ ಇವರು ಭಜನಾ ಗಾಯನದ ಪರಿಚಯ ಮಾಡಿಕೊಡಲಿದ್ದಾರೆ.6ರಂದು ಬೆಳಗ್ಗೆ 10ಕ್ಕೆ ವಿಶ್ರಾಂತ ಕುಲಪತಿ ಡಾ. ಬಿ. ಎ ವಿವೇಕ ರೈ ಸಮಾವೇಶ ಉದ್ಘಾಟಿಸಲಿದ್ದಾರೆ. ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅದ್ಯಕ್ಷ ಕಾ ತ ಚಿಕ್ಕಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಹೆಯ ಸಹಕುಲಪತಿ ಡಾ. ನಾರಾಯಣ ಸಭಾಹಿತ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ, ಸಂಧ್ಯಾಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯ್ಕ್, ಉಪಪ್ರಾಂಶುಪಾಲ ಡಾ. ಎಂ. ವಿಶ್ವನಾಥ ಪೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 7ರಂದು ಸಾಂಸ್ಕೃತಿಕ ಚಿಂತಕಿ ಪ್ರತಿಭಾ ಎಂ.ಎಲ್. ಸಾಮಗ, ಸಂಗೀತ ಸಮಾರೋಪದ ನುಡಿ ಆಡಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತ ಅಧಿಕಾರಿ ಡಾ. ಜಗದೀಶ್ ಶೆಟ್ಟಿ, ಸಹ ಸಂಶೋಧಕ ಡಾ. ಅರುಣ್ ಕುಮಾರ್ ಹಾಗೂ ಭಜನಾ ಸಮಾವೇಶದ ಸಂಯೋಜಕ ರವಿರಾಜ್ ಎಚ್. ಪಿ. ಇದ್ದರು.