ಕನ್ನಡಪ್ರಭ ವಾರ್ತೆ ಉಡುಪಿ
ಸಮಾರಂಭದಲ್ಲಿ ಕೆ.ಎಂ.ಸಿ. ನಿವೃತ್ತಿ ಉದ್ಯೋಗಿ ನರಹರಿ ಪೈ ಅವರನ್ನು ದೇವಳದ ವತಿಯಿಂದ ಮೊಕ್ತೇಸರ ಪಿ.ವಿ. ಶೆಣೈ, ಮುಖ್ಯ ಅತಿಥಿಯಾದ ಕೆ.ಎಂ.ಸಿ. ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ. ಅನಂತ ಪೈ ಗೌರವಿಸಿದರು.
ನರಹರಿ ಪೈ ಅವರು ಕಳೆದ 22 ವರ್ಷಗಳಿಂದ ಶ್ರೀ ಶಾರದಾ ಮಾತೆಗೆ ಸೀರೆ, ಬಂಗಾರ ತೊಡಿಸುವ ದೇವರ ಕಾರ್ಯ ಮಾಡುತ್ತಿದ್ದು, ಶ್ರೀ ಲಕ್ಷ್ಮೀ ವೆಂಕಟೇಶ ದೇವರ ಸನ್ನಿಧಿಯಲ್ಲಿ 1008 ಭಜನಾ ಪುಸ್ತಕ (ಮರಾಠಿ, ಕೊಂಕಣಿ, ಕನ್ನಡ), ಭಜನೆಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿದ್ದು, ಹಲವು ವರ್ಷಗಳಿಂದ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ರಕ್ತದ ವ್ಯವಸ್ಥೆ, ಇನ್ನಿತರ ಸಹಾಯ ಮಾಡುತ್ತಿರುವ ಅವರ ಸಮಾಜ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.ಈ ಸಮಾರಂಭದಲ್ಲಿ ಜಿ.ಎಸ್.ಬಿ. ಯುವಕ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.