ಉಡುಪಿ: ಎಲ್‌ವಿಟಿ ದೇವಳ ಶಾರದೋತ್ಸವ ಸಂಪನ್ನ

KannadaprabhaNewsNetwork |  
Published : Oct 26, 2026, 03:45 AM IST
ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದ ಶಾರದೋತ್ಸವದ ಭವ್ಯ ಶೋಭಾಯಾತ್ರೆ | Kannada Prabha

ಸಾರಾಂಶ

ಇಲ್ಲಿನ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ 24ನೇ ವರ್ಷದ ಶ್ರೀ ಶಾರದಾ ಮಹೋತ್ಸವದಲ್ಲಿ ಪೂಜಿಸಲ್ಪಟ್ಟ ಶಾರದಾ ಮಾತೆಯ ವಿಗ್ರಹದ ವಿಸರ್ಜನಾ ಶೋಭಾ ಯಾತ್ರೆ ಅದ್ದೂರಿಯಾಗಿ ನಡೆಯಿತು.

ಉಡುಪಿ : ಇಲ್ಲಿನ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ 24ನೇ ವರ್ಷದ ಶ್ರೀ ಶಾರದಾ ಮಹೋತ್ಸವದಲ್ಲಿ ಪೂಜಿಸಲ್ಪಟ್ಟ ಶಾರದಾ ಮಾತೆಯ ವಿಗ್ರಹದ ವಿಸರ್ಜನಾ ಶೋಭಾ ಯಾತ್ರೆ ಅದ್ದೂರಿಯಾಗಿ ನಡೆಯಿತು.

ಮೊದಲು ಲಕ್ಷ್ಮೀವೆಂಕಟೇಶ ದೇವರ ಸನ್ನಿಧಿಯಲ್ಲಿ ಶಾರದೋತ್ಸವ ಸಮಿತಿಯ ವತಿಯಿಂದ ಸಮೂಹಿಕ ಪ್ರಾರ್ಥನೆ ನಡೆಸಲಾಯಿತು. ದೇವಳದ ಮುಖ್ಯ ಅರ್ಚಕರಾದ ದಯಾಘನ್ ಭಟ್ ಆರತಿ ಬೆಳಗಿಸಿ ಶ್ರೀಶಾರದಾ ಮಾತೆಯ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಿದರು, ಸಹಅರ್ಚಕರಾದ ವಿನಾಯಕ ಭಟ್, ದೀಪಕ್ ಭಟ್, ಗಿರೀಶ್ ಭಟ್ ಸಹಕರಿಸಿದರು. ನಂತರ ಬೆಳ್ಳಿ ಮಂಟಪದಲ್ಲಿ ಭವ್ಯವಾಗಿ ಅಲಂಕೃತ ಶ್ರೀ ಶಾರದಾದೇವಿ ವಿಗ್ರಹವನ್ನು ಸ್ವಯಂಸೇವಕರು ಭುಜದ ಮೇಲೆ ಹೊತ್ತುಕೊಂಡು ಶೋಭಯಾತ್ರೆಯು ದೇವಳದಿಂದ ಹೊರಟು ಐಡಿಯಲ್ ವೃತ್ತ, ಹಳೇ ಡಯಾನ ವೃತ್ತ, ತ್ರಿವೇಣಿ ವೃತ್ತ, ಚಿತ್ತರಂಜನ್ ವೃತ್ತ, ತೆಂಕಪೇಟೆ ರಸ್ತೆಯಲ್ಲಿ ಸಾಗಿಬಂದು ಕೊಳದಪೇಟೆ ಮೂಲಕ ದೇವಳಕ್ಕೆ ಬಂದು, ಅಲ್ಲಿನ ಪದ್ಮ ಸರೋವರದಲ್ಲಿ ತೆಪ್ಪೋತ್ಸವ ನಡೆಸಿ ಜಲಸ್ತಂಭನಗೊಳಿಸಲಾಯಿತು.

ಶೋಭಯಾತ್ರೆಯಲ್ಲಿ ಹತ್ತಾರು ಸ್ತಬ್ಧಚಿತ್ರಗಳು, ಮಂಗಳವಾದ್ಯ, ಚಂಡೆ - ನಾಸಿಕ್ ಬ್ಯಾಂಡ್, ಯಕ್ಷಗಾನ, ಹುಲಿವೇಷಗಳೊಂದಿಗೆ ಸಾವಿರಾರು ಪಾಲ್ಗೊಂಡರು, ಕುಣಿತ ಭಜನೆ ಶೋಭಾಯಾತ್ರೆಯ ಶೋಭೆಯನ್ನು ಹೆಚ್ಚಿಸಿತ್ತು.

ಕಾರ್ಯಕ್ರಮದಲ್ಲಿ ದೇವಳದ ಆಡಳಿತ ಮೊಕ್ತೇಸರ ಗುಜ್ಜಾಡಿ ಪ್ರಭಾಕರ್ ನಾಯಕ್, ಆಡಳಿತ ಮಂಡಳಿಯ ಸದಸ್ಯರು, ಶ್ರೀ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ಪಿ. ಅಜಿತ್ ಕುಡ್ವ, ಕಾರ್ಯದರ್ಶಿ ಶ್ಯಾಮಪ್ರಸಾದ್ ಕುಡ್ವ, ಖಜಾಂಚಿ ನಾರಾಯಣ ಭಟ್ ಹಾಗೂ ಶಾಸಕ ಯಶಪಾಲ್ ಸುವರ್ಣ, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಭಜನಾ ಮಹೋತ್ಸವದ ಅಧ್ಯಕ್ಷ ಮಟ್ಟಾರ್ ಸತೀಶ್ ಕಿಣಿ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಶ್ಮಿ ಸಾಮಂತ್‌ಗೆ ಉಡುಪಿ ಬಿಜೆಪಿ ಅಭಿನಂದನೆ
ಮುದರಂಗಡಿ ಪ್ರಜಾಸೇವಾ ಸಭೆ: 44 ಅರ್ಜಿ ವಿಲೇ