ಉಡುಪಿ: ಮಲಬಾರ್‌ ವಿಶ್ವ ಸಾಹಿತ್ಯ ಪುರಸ್ಕಾರ ಪ್ರದಾನ

KannadaprabhaNewsNetwork |  
Published : Nov 24, 2025, 03:15 AM IST
23ವಿಶ್ವಮೂವರು ಸಾಹಿತಿಗಳಿಗೆ ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ ಪ್ರದಾನ ಮಾಡಲಾಯಿತು | Kannada Prabha

ಸಾರಾಂಶ

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ, ಕರ್ನಾಟಕ ರಾಜ್ಯೋತ್ಸವ ಸಡಗರದಂಗವಾಗಿ ಸಾಹಿತಿ ದಿ.ಮೇಟಿ ಮುದಿಯಪ್ಪ ನೆನಪಿನ ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ 2025 ಕಾರ್ಯಕ್ರಮ ಮಲಬಾರ್‌ನಲ್ಲಿ ನಡೆಯಿತು.

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ, ಕರ್ನಾಟಕ ರಾಜ್ಯೋತ್ಸವ ಸಡಗರದಂಗವಾಗಿ ಸಾಹಿತಿ ದಿ.ಮೇಟಿ ಮುದಿಯಪ್ಪ ನೆನಪಿನ ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ 2025 ಕಾರ್ಯಕ್ರಮ ಮಲಬಾರ್‌ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ. ಮಾಧವಿ ಭಂಡಾರಿ, ಭಾವನೆಗಳನ್ನು ಅಕ್ಷರರೂಪಕ್ಕಿಳಿಸಿ, ಅದನ್ನು ಮತ್ತೊಬ್ಬರಿಗೆ ಹಂಚುವ ಶ್ರೇಷ್ಠ ಕಾರ್ಯ ನಮ್ಮ ಸಾಹಿತಿಗಳಿಂದ ನಡೆಯುತ್ತಿದೆ. ಇಂತಹ ಸಾಹಿತಿಗಳನ್ನು ಗುರುತಿಸಿ ಗೌರವಿಸುವ ಮತ್ತಷ್ಟು ಸಾಧನೆಗೆ ಪ್ರೋತ್ಸಾಹಿಸುವ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಕಾಯಕ ಅಭಿನಂದನೀಯ ಎಂದರು.

ಮುಖ್ಯ ಅತಿಥಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಈ ಸಂಸ್ಥೆಯು ಕಳೆದ ಐದು ವರ್ಷಗಳಿಂದ ನಿರಂತರವಾಗಿ ನಡೆಸುತ್ತಿರುವ ತನ್ನ ವೈಶಿಷ್ಟ ಪೂರ್ಣವಾದ ಕಾರ್ಯಕ್ರಮಗಳಿಂದ ಮನೆ ಮಾತಾಗಿದೆ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ಉಡುಪಿ ವಿಶ್ವನಾಥ್, ಶೆಣೈ, ಅಧ್ಯಕ್ಷ ಪ್ರೊ.ಶಂಕರ್, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ವ್ಯವಸ್ಥಾಪಕ ಪುರಂದರ ತಿಂಗಳಾಯ ಮುಂತಾದವರು ಉಪಸ್ಥಿತರಿದ್ದರು.

ಮಲಬಾರ್ ವಿಶ್ವ ಸಾಹಿತಿ ಪುರಸ್ಕಾರವನ್ನು ಚೆನ್ನಪ್ಪ ಅಂಗಡಿ (ಸಮಗ್ರ ಸಾಹಿತ್ಯ), ಡಾ. ನಿಕೇತನ (ಸಂಶೋಧನೆ ಮತ್ತು ವಿಮರ್ಶೆ), ಮುದಲ್ ವಿಜಯ್ (ಕಾವ್ಯ) ಅವರಿಗೆ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತರು ಅಭಿಪ್ರಾಯ ವ್ಯಕ್ತಪಡಿಸಿದರು.ಪ್ರತಿಷ್ಠಾನದ ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ ನಿರೂಪಿಸಿದರು. ಸಂಚಾಲಕ ರವಿರಾಜ್ ಎಚ್.ಪಿ. ಸ್ವಾಗತಿಸಿದರು. ಕಾರ್ಯಕ್ರಮ ಸಂಚಾಲಕಿ ಸಂಧ್ಯಾ ಶೆಣೈ ವಂದಿಸಿದರು. ಸಿದ್ದ ಬಸಯ್ಯಸ್ವಾಮಿ ಚಿಕ್ಕಮಠ, ವಿದ್ಯಾ ಸರಸ್ವತಿ, ವಿದ್ಯಾ ಶ್ಯಾಮ್ ಸುಂದರ್ ಪರಿಚಯಿಸಿದರು. ದಿ.ಮೇಟಿ ಮುದಿಯಪ್ಪ ಕುಟುಂಬಸ್ಥರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿನೇದಿನೇ ಏರುತ್ತಿರುವ ಚಿನ್ನದ ದರ ಇಳಿಯಲಿ ಎಂದು ಭಕ್ತನ ಹರಕೆ !
₹70 ಲಕ್ಷ ವಿದ್ಯುತ್‌ ಬಿಲ್‌ ಬಾಕಿ: ಸಿದ್ಧಗಂಗಾ ಮಠಕ್ಕೆ ನೀರು ಬಂದ್‌!