ಉಡುಪಿ: ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ

KannadaprabhaNewsNetwork |  
Published : Jun 28, 2026, 03:45 AM IST
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣಗೊಳಿಸಲಾಯಿತು | Kannada Prabha

ಸಾರಾಂಶ

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ ನೂತನ ವಜ್ರಾಭರಣ ‘ನುವಾ’ವನ್ನು ಶನಿವಾರ ಅನಾವರಣಗೊಳಿಸಲಾಯಿತು.

ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ ನೂತನ ವಜ್ರಾಭರಣ ‘ನುವಾ’ವನ್ನು ಶನಿವಾರ ಅನಾವರಣಗೊಳಿಸಲಾಯಿತು.

ರೂಪದರ್ಶಿಗಳಾದ ನಿಧಿ ಸುವರ್ಣ, ಅನುಷಾ ಉಲ್ಲಾಳ್, ನಿಹಾರಿಕಾ ಶೆಟ್ಟಿ, ಶ್ರಾವ್ಯ ಪ್ರವೀಣ್ ಈ ವಿನೂತನ ವಜ್ರಾಭರಣ ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಅನುಷಾ ಎಸ್.ಉಲ್ಲಾಳ್, ಮಲಬಾರ್ ಗೋಲ್ಡ್‌ನಲ್ಲಿ ವಜ್ರಾಭರಣಗಳ ಸಂಗ್ರಹ ವೈವಿಧ್ಯಮಯ ಹಾಗೂ ಆಕರ್ಷಣೀಯವಾಗಿದೆ. ಇಲ್ಲಿನ ಸಿಬ್ಬಂದಿ ಸೇವೆ ಕೂಡ ಅತ್ಯುತ್ತಮವಾಗಿದೆ. ಇಲ್ಲಿನ ಆಭರಣಗಳು ಕಲಾತ್ಮಕವಾಗಿ ಎಲ್ಲರ ಮನ ಮುಟ್ಟುತ್ತದೆ ಎಂದು ಹೇಳಿದರು.ಸಿಬ್ಬಂದಿ ಹರೀಶ್ ನುವಾ ಬಗ್ಗೆ ಮಾಹಿತಿ ನೀಡಿ, ನುವಾ ನ್ಯಾಚುರಲ್ ಡೈಮಂಡ್ಸ್ ಆಭರಣ ಆಗಿದ್ದು, ಇದರಲ್ಲಿ ವೈವಿಧ್ಯಮಯ ಡಿಸೈನ್‌ಗಳಿವೆ. ಕಳೆದ ಮೂರು ವರ್ಷಗಳಿಂದ ಈ ಬ್ರಾಂಡಿನ ಹೊಸ ಹೊಸ ಡಿಸೈನಿನ ವಜ್ರಾಭರಣಗಳನ್ನು ಅನಾವರಣ ಮಾಡುತ್ತಿದ್ದೇವೆ. ಸಾಕಷ್ಟು ಆಕರ್ಷಕ ರೀತಿಯ ಈ ವಜ್ರಾಭರಣವ 50 ಸಾವಿರ ರು.ನಿಂದ ಆರಂಭವಾಗುತ್ತದೆ ಎಂದರು. ಉಡುಪಿ ಶಾಖಾ ವ್ಯವಸ್ಥಾಪಕ ಪುರಂದರ ತಿಂಗಳಾಯ ಮತ್ತು ಸಂದೀಪ್ ಸಫಲ್ಯ, ಮಾರುಕಟ್ಟೆ ವ್ಯವಸ್ಥಾಪಕ ತಂಝೀಮ್ ಶಿರ್ವ ಮತ್ತಿತರರಿದ್ದರು. ವಿಘ್ನೇಶ್ ಸ್ವಾಗತಿಸಿ, ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವ ಜನತೆಯಲ್ಲಿ ಯೋಗದ ಬಗ್ಗೆ ರೆಡ್‌ಕ್ರಾಸ್‌ ಅರಿವು: ಸಿಎ ಶಾಂತಾರಾಮ ಶೆಟ್ಟಿ
ಸ್ತ್ರೀ ಪರಿಪೂರ್ಣತೆಯ ಸಂಕೇತ: ಡಾ. ಮೋಹನ್ ಆಳ್ವ