ಉಡುಪಿ: ಜು. 14, 16ರಂದು ವಿದ್ಯುತ್‌ ವ್ಯತ್ಯಯ

KannadaprabhaNewsNetwork | Updated : Jul 13 2024, 10:30 AM IST

ಸಾರಾಂಶ

ಮಾರ್ಗನಿರ್ವಹಣಾ ಕಾಮಗಾರಿ, ಟ್ರೀಕಟ್ಟಿಂಗ್‌ ಮತ್ತು ತುರ್ತು ನಿರ್ವಹಣೆ ಕಾಮಗಾರಿ ಹಿನ್ನೆಲೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಕಾರ್ಕಳ: ಹೆಬ್ರಿ ಉಪವಿದ್ಯುತ್‌ ಸ್ಥಾವರದಿಂದ ಹೊರಡುವ ಅಜೆಕಾರು ಫೀಡರ್‌ನಲ್ಲಿ ಜು. 14ರಂದು ಮಾರ್ಗನಿರ್ವಹಣಾ ಕಾಮಗಾರಿ ನಡೆಯಲಿದೆ. ಆದ್ದರಿಂದ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಅಜೆಕಾರು ಪೇಟೆ, ಕಾಡುಹೊಳೆ, ನಂದಾರು, ಸುಕುಡಿಬೆಟ್ಟು, ಗುಡ್ಡೆಯಂಗಡಿ ಮತ್ತು ಸುತ್ತಮುತ್ತ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.

ಮಣಿಪಾಲ: ಮಣಿಪಾಲ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಮೂಡುಬೆಳ್ಳೆ, ಉದ್ಯಾವರ-2, ಇಂದ್ರಾಳಿ ಮತ್ತು ಪ್ರಗತಿನಗರ ಫೀಡರ್‌ ಮಾರ್ಗದಲ್ಲಿ ಜು.16ರಂದು ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಮಣಿಪುರ, ಮೂಡುಬೆಳ್ಳೆ, ಮರ್ಣೆ, ಕಟ್ಟಿಂಗೇರಿ, ಕೆಮ್ತೂರು, ಕೊರಂಗ್ರಪಾಡಿ, ಮಾರ್ಪಳ್ಳಿ, ಕುಕ್ಕಿಕಟ್ಟೆ, ಉದ್ಯಾವರ, ಕಟಪಾಡಿ, ಹಯಗ್ರೀವನಗರ, ಲಕ್ಮೀಂದ್ರನಗರ, ಇಂದ್ರಾಳಿ ರೈಲ್ವೆನಿಲ್ದಾಣ, ಪ್ರಗತಿನಗರ, ಶಾಂತಿನಗರ, ರಾಜೀವನಗರ, 80 ಬಡಗುಬೆಟ್ಟು ಮತ್ತು ಸುತ್ತಮುತ್ತ ವಿದ್ಯುತ್‌ ವ್ಯತ್ಯಯವಾಗುತ್ತದೆ.ಉಡುಪಿ: ಹೆಗ್ಗುಂಜೆ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಹೆಗ್ಗುಂಜೆ ಮತ್ತು ನಂಚಾರು ಫೀಡರ್‌ ಮಾರ್ಗದಲ್ಲಿ ಹಾಗೂ ಬ್ರಹ್ಮಾವರ ಉಪವಿದ್ಯುತ್‌ ಕೇಂದ್ರದಿಂದ ಹೊರಡುವ ಚೇರ್ಕಾಡಿ ಫೀಡರ್‌ ಮಾರ್ಗದಲ್ಲಿ ಎಚ್.ಟಿ. ಮಾರ್ಗ ನಿರ್ವಹಣೆ, ಟ್ರೀಕಟ್ಟಿಂಗ್‌ ಮತ್ತು ತುರ್ತು ನಿರ್ವಹಣೆ ಕಾಮಗಾರಿ ಜು.16ರಂದು ನಡೆಯಲಿದೆ. ಆದ್ದರಿಂದ ಕಾಡೂರು, ಮೊಗವೀರಪೇಟೆ, ಕೊಕ್ಕರ್ಣೆ, ಕೆಂಜೂರು, ಶಿರೂರು, ಹಿಲಿಯಾಣ, ನಂಚಾರು, ಮುದ್ದೂರು, ಕಜ್ಕೆ, ಹೇರೂರು, ಚಾಂತಾರು, ಕುಂಜಾಲು, ಆರೂರು, ಚೇರ್ಕಾಡಿ, ಹಲುವಳ್ಳಿ ಮತ್ತು ಸುತ್ತಮುತ್ತ ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30ರ ವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಕಾರ್ಕಳ: ಕೇಮಾರ್ ವಿದ್ಯುತ್‌ ಕೇಂದ್ರದಿಂದ ಹೊರಡುವ ಅಜೆಕಾರು, ಬಂಡೀಮಠ, ಹಿರ್ಗಾನ, ದುರ್ಗಾ, ಜಾರ್ಕಳ, ನಿಟ್ಟೆ, ಕಲ್ಯಾ, ಲೆಮಿನಾ, ಮಿಯ್ಯಾರು, ಸಾಣೂರು, ಇರ್ವತ್ತೂರು, ನಿಟ್ಟೆವಾಟರ್‌ ಸಫ್ಲೈ ಫೀಡರ್‌ಗಳಲ್ಲಿ, ಬೆಳ್ಮಣ್‌ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಫೀಡರ್‌ಗಳಾದ ಬೋಳ, ಬೆಳ್ಮಣ್, ನಂದಳಿಕೆ, ಮುಂಡ್ಕೂರು ಫೀಡರ್‌ಗಳಲ್ಲಿ ಹಾಗೂ ಹೆಬ್ರಿ ಉಪವಿದ್ಯುತ್‌ ಸ್ಥಾವರದಿಂದ ಹೊರಡುವ ಹೆಬ್ರಿ ಫೀಡರ್‌ಗಳಲ್ಲಿ ಕಂಡಕ್ಟರಿಂಗ್ / ಮಾರ್ಗ ನಿರ್ವಹಣಾ ಕಾಮಗಾರಿ ಕಾರ್ಯ ಜು.16ರಂದು ನಡೆಯಲಿದೆ.

ಅಂದು ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಕಾರ್ಕಳ ತಾಲೂಕಿನ ಅಜೆಕಾರು ಟೌನ್, ಎಣ್ಣೆಹೊಳೆ, ಮಂಗಿಲಾರು, ಚಿಕ್ಕಾಲ್ಬೆಟ್ಟು, ಕುಕ್ಕುಜೆ, ಹೆರ್ಮುಂಡೆ, ಅಂಡಾರು, ಶಿರ್ಲಾಲು, ಕಾಡುಹೊಳೆ, ಕಡ್ತಲ, ಗುಡ್ಡೆಯಂಗಡಿ, ಅಜೆಕಾರು, ಗುಂಡೆಗುಮೇರಿ, ಹಿರ್ಗಾನ, ಕಾನಂಗಿ, ಕಡಂಬಳ, ನಾರ್ಕಟ್ಟ, ಮಲೆಬೆಟ್ಟು, ಪೊಲ್ಲಾರು, ಕುಕ್ಕುಂದೂರು, ಅಯ್ಯಪ್ಪನಗರ, ಮಂಗಳಕಲ್ಲು, ಪಿಲಿಚಂಡಿಸ್ಥಾನ, ಗಣಿತನಗರ, ಜಾರ್ಕಳ, ಬಂಡೀಮಠ ಫೀಡರಿನ ಜೋಡುರಸ್ತೆ, ಬಂಗ್ಲೆಗುಡ್ಡೆ, ನಿಟ್ಟೆ, ನಿಟ್ಟೆ ಕಾಲೇಜು, ನಿಟ್ಟೆ ವಾಟರ್‌ ಸಫ್ಲೈ, ಬೊರ್ಗಲ್ಗುಡ್ಡೆ, ಹಾಮಾಜೆ, ಕುಂಟಾಡಿ, ಕೈರಬೆಟ್ಟು, ನಿಟ್ಟೆ ಪಂಚಾಯಿತಿ, ನಿಟ್ಟೆ ಮಸೀದಿ, ಲೆಮಿನಾ ಇಂಡಸ್ಟ್ರಿಸ್, ದೂಪದಕಟ್ಟೆ, ಕೆಮ್ಮಣ್ಣು, ನೆಲ್ಲಿಗುಡ್ಡೆ, ಬಾರಾಡಿ, ಬೇಲಾಡಿ, ಕಾಂತಾವರ, ಕಲ್ಯಾ, ಮಿಯ್ಯಾರು, ಕುಂಟಿಬೈಲು, ರೆಂಜಾಳ, ರಾಮೇರಗುತ್ತು, ಬೊರ್ಕಟ್ಟೆ, ಕಳತ್ರಪಾದೆ, ಬೈಪಾಸ್, ಮುರತ್ತಂಗಡಿ, ಇರ್ವತ್ತೂರು, ಸಾಣೂರು, ಕುಂಟಲ್ಪಾಡಿ, ದೇಂದಬೆಟ್ಟು, ಪರ್ಪಲೆ, ಪಡ್ಡಾಯಿಗುಡ್ಡೆ, ಮುದ್ದಣ್ಣನಗರ, ಬಾವಗುತ್ತು, ಶುಂಠಿಗುಡ್ಡೆ, ಚಿಲಿಂಬಿ, ಬೋಳ ಪಂಚಾಯಿತಿ, ಪಿಲಿಯೂರು, ಕೆರೆಕೋಡಿ, ಒಂಜಾರೆಕಟ್ಟೆ, ಬಾರೆಬೈಲು, ಕೆಂಪುಜೋರ, ಪೂಕಲ್ಲು, ಬೆಳ್ಮಣ್, ಗೋಳಿಕಟ್ಟೆ, ಜಂತ್ರ, ನೀಚಾಲು, ಬೆಳ್ಮಣ್‌ ದೇವಸ್ಥಾನ, ನಂದಳಿಕೆ, ಕೆದಿಂಜೆ, ಇಟ್ಟಮೇರಿ ಮಾವಿನಕಟ್ಟೆ, ದೇಂದೊಟ್ಟುಪದವು, ಮುಂಡ್ಕೂರು, ಮುಲ್ಲಡ್ಕ, ಕೊಡಿಮಾರ್, ನಾನಿಲ್ತಾರ್, ಜಾರಿಗೆಕಟ್ಟೆ, ಸಂಕಲಕರಿಯ, ಸಚ್ಚರಿಪೇಟೆ, ಹೆಬ್ರಿ ತಾಲೂಕಿನ ಮಠದಬೆಟ್ಟು, ಗುಳಿಬೆಟ್ಟು, ಹೆಬ್ರಿ ಪೇಟೆ ಮತ್ತು ಸುತ್ತಮುತ್ತ ವಿದ್ಯುತ್‌ ವ್ಯತ್ಯವಾಗಲಿದೆ.

Share this article