ಉಡುಪಿ ರಾಜಾಂಗಣ: ನಾಳೆ ‘ಮೋಹನಾಮೃತ 75’

KannadaprabhaNewsNetwork |  
Published : Oct 24, 2026, 03:00 AM IST
ಆರ್ಗೋಡು ಮೋಹನದಾಸ್ ಶೆಣೈ | Kannada Prabha

ಸಾರಾಂಶ

ಪರ್ಯಾಯ ಶಿರೂರು ಮಠ, ಶ್ರೀಕೃಷ್ಣಮಠದ ಆಶ್ರಯದಲ್ಲಿ ಯಕ್ಷಗಾನದ ಖ್ಯಾತ ಗುರು ಆರ್ಗೋಡು ಮೋಹನದಾಸ್ ಶೆಣೈ ಅವರಿಗೆ 75 ಸಂವತ್ಸರ ಪೂರ್ಣಗೊಂಡ ಹಿನ್ನೆಲೆಯಲ್ಲಿ 24ರಂದು ಶನಿವಾರ ಮೋಹನಾಮೃತ 75 - ಯಕ್ಷಗಾನ, ಸನ್ಮಾನ, ಅಭಿವಂದನ ಕಾರ್ಯಕ್ರಮ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರಾತ್ರಿ 9.30 ರಿಂದ ಮರುದಿನ ಬೆಳಗ್ಗೆ 5.30 ರ ತನಕ ನಡೆಯಲಿದೆ.

ಉಡುಪಿ: ಪರ್ಯಾಯ ಶಿರೂರು ಮಠ, ಶ್ರೀಕೃಷ್ಣಮಠದ ಆಶ್ರಯದಲ್ಲಿ ಯಕ್ಷಗಾನದ ಖ್ಯಾತ ಗುರು ಆರ್ಗೋಡು ಮೋಹನದಾಸ್ ಶೆಣೈ ಅವರಿಗೆ 75 ಸಂವತ್ಸರ ಪೂರ್ಣಗೊಂಡ ಹಿನ್ನೆಲೆಯಲ್ಲಿ 24ರಂದು ಶನಿವಾರ ಮೋಹನಾಮೃತ 75 - ಯಕ್ಷಗಾನ, ಸನ್ಮಾನ, ಅಭಿವಂದನ ಕಾರ್ಯಕ್ರಮ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರಾತ್ರಿ 9.30 ರಿಂದ ಮರುದಿನ ಬೆಳಗ್ಗೆ 5.30 ರ ತನಕ ನಡೆಯಲಿದೆ.ರಾತ್ರಿ 9.30 ಕ್ಕೆ ನಡೆಯುವ ಸಮಾರಂಭದಲ್ಲಿ ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಆಶೀರ್ವಚನ ನೀಡುವರು. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ. ಜಿ. ಶಂಕರ್ ಅಧ್ಯಕ್ಷತೆ ವಹಿಸುವರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್, ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಹೈದರಾಬಾದಿನ ಉದ್ಯಮಿ ಕೃಷ್ಣಮೂರ್ತಿ ಮಂಜ, ಶ್ರೀಕ್ಷೇತ್ರ ಸೌಕೂರು ಧರ್ಮದರ್ಶಿ ಕಿಶನ್ ಕುಮಾರ್ ಹೆಗ್ಡೆ, ಮಂಗಳೂರಿನ ಕೆನರಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಾಸುದೇವ ಕಾಮತ್, ಉದ್ಯಮಿ ಗೋಪಿನಾಥ್ ಕಾಮತ್, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಅನಾಮಯ ಚಿಕಿತ್ಸಾಲಯದ ಡಾ. ಚಂದ್ರಶೇಖರ ರಾವ್, ಬೆಳ್ವೆಯ ಉದ್ಯಮಿ ಬೆಳ್ವೆ ಗಣೇಶ್ ಕಿಣಿ, ನ್ಯಾಯವಾದಿ ಪ್ರವೀಣ ಎಂ. ಪೂಜಾರಿ, ಉದ್ಯಮಿ ಮಂಜುನಾಥ , ಉದ್ಯಮಿ ಶ್ರೀ ಹರಿಪ್ರಸಾದ್ ರೈ ಮುಖ್ಯ ಅತಿಥಿಗಳಾಗಿದ್ದಾರೆ. ಸಿದ್ಧಾಪುರದ ಡಾ. ಜಗದೀಶ್ ಶೆಟ್ಟಿ ಅಭಿನಂದನಾ ಭಾಷಣ ಮಾಡುವರು.ಹಿರಿಯರಿಗೆ ಗೌರವಾರ್ಪಣೆ: ಈ ಸಂದರ್ಭ ಒಡನಾಡಿ ಹಿರಿಯ ಕಲಾವಿದ ಹಾಗೂ ಭಾಗವತ ಕುರಿಯ ಗಣಪತಿ ಶಾಸ್ತ್ರಿ, ಹಿರಿಯ ಹಾಸ್ಯ ಕಲಾವಿದ ಮಹಾಬಲ ದೇವಾಡಿಗ ಕಮಲಶಿಲೆ, ಹಿರಿಯ ಸ್ತ್ರೀ ವೇಷಧಾರಿ ಸಂಜೀವ ಬಳೆಗಾರ, ಹಿರಿಯ ಕಲಾವಿದ ಗಾವಳಿ ಶೀನ ಕುಲಾಲ್ ಅವರನ್ನು ಗೌರವಿಸಲಾಗುವುದು.

ರಾತ್ರಿ 10.15 ರಿಂದ ಬೆಳಗ್ಗೆ 5.30ರ ತನಕ ತೆಂಕು ಬಡಗಿನ ದಿಗ್ಗಜ ಕಲಾವಿದರಿಂದ ಶ್ರೀಮನ್ಮಹಾಭಾರತ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಆರ್ಗೋಡು: 42 ವರ್ಷಗಳ ವೃತ್ತಿ ಜೀವನ: ಕಮಲಶಿಲೆಯ ಆರ‍್ಗೋಡು ಮೋಹನದಾಸ್ ಶೆಣೈ 42 ವರ್ಷಗಳ ವೃತ್ತಿ ಜೀವನದಲ್ಲಿ ಹಿರಿಯಡಕ, ಪೆರ್ಡೂರು, ಸಾಲಿಗ್ರಾಮ, ಶಿರಸಿ, ಕುಮಟಾ, ಅಮೃತೇಶ್ವರಿ, ಕಮಲಶಿಲೆ ಮೇಳಗಳಲ್ಲಿ ಸುಧನ್ವ, ದಶರಥ, ಭೀಷ್ಮ, ಶ್ರೀರಾಮ, ಪರಶುರಾಮ ಸಹಿತ ಅನೇಕಾನೇಕ ಪಾತ್ರ ಮಾಡಿದ್ದಾರೆ. ಐದು ಯಕ್ಷಗಾನ ಪ್ರಸಂಗ, ಇನ್ನೂ ಕೆಲ ಪ್ರಸಂಗಗಳಿಗೆ ಅರ್ಥ ಬರೆದಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿ ಸಾವಿರಾರು ಸನ್ಮಾನ ಪುರಸ್ಕಾರ ಪ್ರಶಸ್ತಿಗಳನ್ನು ಪಡೆದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈ ಹಂಗಾಮಿನಲ್ಲಿ ಕಬ್ಬಿನ ಇಳುವರಿ ಕಡಿಮೆ
ಚನ್ನಮ್ಮಳ ಶೌರ್ಯ, ದೇಶಪ್ರೇಮ ಮಹಿಳೆಯರಿಗೆ ಸ್ಫೂರ್ತಿ