ಉಡುಪಿಯ ರಕ್ಷಿತ್ ಕೋಟ್ಯಾನ್ ‘ಮಿಸ್ಟರ್ ಕರಾವಳಿ-2024’

KannadaprabhaNewsNetwork | Published : Mar 26, 2024 1:16 AM

ಸಾರಾಂಶ

ಫೆಡರೇಶನ್ ಕಪ್’ ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಪೂರ್ವಭಾವಿಯಾಗಿ ನಡೆದ ಸ್ಪರ್ಧೆಯಲ್ಲಿ ಧೀರಜ್ ಕುಮಾರ್ ಉಡುಪಿ ‘ರನ್ನರ್ ಅಪ್’ ಹಾಗೂ ಝಾಕಿರ್ ಹುಲ್ಲೂರ್ ಧಾರವಾಡ ‘ಬೆಸ್ಟ್ ಪೋಸರ್’ ಪ್ರಶಸ್ತಿಗಳನ್ನು ಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ಉಡುಪಿಗೋವಾದಲ್ಲಿ ಏ.6 ಮತ್ತು 7ರಂದು ನಡೆಯಲಿರುವ ‘ಫೆಡರೇಶನ್ ಕಪ್’ ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಪೂರ್ವಭಾವಿಯಾಗಿ ಉಡುಪಿಯಲ್ಲಿ ನಡೆದ ‘ಮಿಸ್ಟರ್ ಕರಾವಳಿ ಕ್ಲಾಸಿಕ್-2024’ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ರಕ್ಷಿತ್ ಕೋಟ್ಯಾನ್ ಉಡುಪಿ ‘ಮಿಸ್ಟರ್ ಕರಾವಳಿ ಕ್ಲಾಸಿಕ್-2024’ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.ಧೀರಜ್ ಕುಮಾರ್ ಉಡುಪಿ ‘ರನ್ನರ್ ಅಪ್’ ಹಾಗೂ ಝಾಕಿರ್ ಹುಲ್ಲೂರ್ ಧಾರವಾಡ ‘ಬೆಸ್ಟ್ ಪೋಸರ್’ ಪ್ರಶಸ್ತಿಗಳನ್ನು ಪಡೆದುಕೊಂಡರು.ಸ್ಪರ್ಧೆಯನ್ನು ಉಡುಪಿ ನಗರಸಭಾ ಸದಸ್ಯ ವಿಜಯ ಕೊಡವೂರು ಉದ್ಘಾಟಿಸಿದರು. ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಅಧ್ಯಕ್ಷ ಜೆ.ನೀಲಕಂಠ ಅಧ್ಯಕ್ಷತೆ ವಹಿಸಿದ್ದು, ಉಡುಪಿ ಡಿಸ್ಟ್ರಿಕ್ಟ್ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಅಧ್ಯಕ್ಷ ಜೇಸನ್ ಡಯಾಸ್ ಮತ್ತು ಬನ್ನಂಜೆ ಶ್ರೀ ನಾರಾಯಣಗುರು ಮಂದಿರದ ಪ್ರಧಾನ ಅರ್ಚಕ ದಯಾಕರ ಶಾಂತಿ ಉಪಸ್ಥಿತರಿದ್ದರು.

ಪ್ರಶಸ್ತಿಯನ್ನು ಉದ್ಯಮಿ ಶಶಿಧರ್ ಕುಂದರ್ ಮಲ್ಪೆ ವಿತರಿಸಿದರು. ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ ಅಧ್ಯಕ್ಷ ಜೆ. ನೀಲಕಂಠ, ಉಪಾಧ್ಯಕ್ಷ ಗಂಗಾಧರ್ ಎಂ., ಪ್ರ. ಕಾರ್ಯದರ್ಶಿ ಜಿ.ಡಿ. ಭಟ್, ಕೋಶಾಧಿಕಾರಿ ದಿಲೀಪ್ ಕುಮಾರ್, ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು ಲವೀನ್ ಕೆ. ಮಂಗಳೂರು, ಚಾಂಪಿಯನ್‌ಶಿಪ್ ಸಂಘಟನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಸಾಲ್ಯಾನ್, ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಉಡುಪಿ ಡಿಸ್ಟ್ರಿಕ್ಟ್ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ ಪ್ರ. ಕಾರ್ಯದರ್ಶಿ ವಿಶ್ವನಾಥ್ ಕಾಮತ್, ರಾಷ್ಟ್ರೀಯ ತೀರ್ಪುಗಾರ ಉಮಾ ಮಹೇಶ್, ರಾಜ್ಯ ತೀರ್ಪುಗಾರ ರತ್ನಾಕರ ಖಾರ್ವಿ ಮುಂತಾದವರು ಉಪಸ್ಥಿತರಿದ್ದರು.ವಿಜೇತರ ವಿವರದೇಹ ತೂಕದ ಒಟ್ಟು 8 ವಿಭಾಗಗಳಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯ ಮೊದಲ 5 ಸ್ಥಾನಗಳ ವಿಜೇತರ ವಿವರ ಹೀಗಿದೆ:

* 55 ಕೆಜಿ ವಿಭಾಗ: ಕೃಷ್ಣಪ್ರಸಾದ್ ಉಡುಪಿ, ಸಲ್ಮಾನ್ ಖಾನ್ ಶಿವಮೊಗ್ಗ, ಕೃಷ್ಣ ಹರಿಕಾಂತ್ರ ಉ.ಕ., ಪ್ರಜ್ವಲ್ ಉಡುಪಿ, ಆಕಾಶ್ ಜೊಗಾನಿ ಬೆಳಗಾವಿ.

* 60 ಕೆಜಿ ವಿಭಾಗ: ಗಂಗಾಧರ ಸ್ವಾಮಿ ದಾವಣಗೆರೆ, ಝಾಕಿರ್ ಹುಲ್ಲೂರ್ ಧಾರವಾಡ, ರೊನಾಲ್ಡ್ ಡಿಸೋಜ ದ.ಕ., ರಾಕೇಶ್ ಬಳ್ಳಾರಿ, ವಿಕ್ಷಿತ್ ರಾಜ್ ಉಡುಪಿ.

* 65 ಕೆಜಿ ವಿಭಾಗ: ಧೀರಜ್ ಕುಮಾರ್ ಉಡುಪಿ, ಸೂರಜ್ ಆಚಾರ್ಯ ದ.ಕ., ಆಶಿಶ್ ಉಡುಪಿ, ಮುಕೇಶ್ ಉಡುಪಿ, ಓಂಕಾರ್ ಪಾಟೀಲ್ ಬೆಳಗಾವಿ.

* 70 ಕೆಜಿ ವಿಭಾಗ: ರಕ್ಷಿತ್ ಕೋಟ್ಯಾನ್ ಉಡುಪಿ, ಸುನಿಲ್ ಭಟ್ಕಂಡೆ ಬೆಳಗಾವಿ, ಗಣೇಶ್ ಪಾಟೀಲ್ ಬೆಳಗಾವಿ, ಮಯೂರ್ ಮೆನ್ಸೆ ಬೆಳಗಾವಿ, ಸೋಮಶೇಖರ್ ಖಾರ್ವಿ ಉಡುಪಿ.

* 75 ಕೆಜಿ ವಿಭಾಗ: ಪ್ರತಾಪ್ ಕಲ್ಕುಂಡ್ರಿಕರ್ ಬೆಳಗಾವಿ, ಸತ್ಯಾನಂದ ಭಟ್ ಮೈಸೂರು, ಚೇತನ್ ಕುಮಾರ್ ದ.ಕ., ಪವನ್ ರಾಜ್ ಉಡುಪಿ, ಸಾಹೇಬ್ ಲಾಲ್ ಬಿಜಾಪುರ್.

* 80 ಕೆಜಿ ವಿಭಾಗ: ಕುಮಾರ್ ಉ.ಕ., ಶೈಲೇಶ್ ದ.ಕ., ರಾಜೇಶ್ ಉಡುಪಿ, ಶಿವಪ್ರಸಾದ್ ದ.ಕ.

* 85 ಕೆಜಿ ವಿಭಾಗ: ಚರಣ್ ರಾಜ್ ಉಡುಪಿ, ಮಹೇಶ್ ಗವಾಲಿ ಬೆಳಗಾವಿ, ಪ್ರಸಾದ್ ಬಚೇಕರ್ ಬೆಳಗಾವಿ, ಸಂದೀಪ್ ಉಡುಪಿ.

* 85 ಪ್ಲಸ್ ಕೆಜಿ ವಿಭಾಗ: ಸ್ವರೂಪ್ ಬಂಗೇರ ಉಡುಪಿ, ಗೌತಮ್ ಉಡುಪಿ.

Share this article