ಉಡುಪಿ: ನೇಜಿ ನೆಟ್ಟು ಸಂಭ್ರಮಿಸಿದ ವಿದ್ಯಾರ್ಥಿಗಳು

KannadaprabhaNewsNetwork |  
Published : Jul 26, 2026, 03:00 AM IST
25ನೇಜಿ | Kannada Prabha

ಸಾರಾಂಶ

ಉಡುಪಿ: ಇಲ್ಲಿನ ನಿಟ್ಟೂರು ಪ್ರೌಢಶಾಲೆಯ 10 ನೇ ತರಗತಿಯ 54 ವಿದ್ಯಾರ್ಥಿಗಳು ಕಕ್ಕುಂಜೆಯ ಚಂದ್ರಶೇಖರ್ ನಾಯ್ಕ್ ಅವರ 2 ಗದ್ದೆಗಳಲ್ಲಿ ಭತ್ತದ ನೇಜಿ ನೆಟ್ಟು ಸಂಭ್ರಮಿಸಿದರು.

ಉಡುಪಿ: ಇಲ್ಲಿನ ನಿಟ್ಟೂರು ಪ್ರೌಢಶಾಲೆಯ 10 ನೇ ತರಗತಿಯ 54 ವಿದ್ಯಾರ್ಥಿಗಳು ಕಕ್ಕುಂಜೆಯ ಚಂದ್ರಶೇಖರ್ ನಾಯ್ಕ್ ಅವರ 2 ಗದ್ದೆಗಳಲ್ಲಿ ಭತ್ತದ ನೇಜಿ ನೆಟ್ಟು ಸಂಭ್ರಮಿಸಿದರು.

ಕಳೆದ 11 ವರ್ಷಗಳಿಂದ, ಶಾಲೆಯ ಮುಖ್ಯಶಿಕ್ಷಕರಾಗಿದ್ದ ಮುರಲಿ ಕಡೆಕಾರ್ ಅವರ ವಿಶೇಷ ಆಸಕ್ತಿಯಿಂದ ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆಯ ಪ್ರತ್ಯಕ್ಷ ಅನುಭವ ದೊರೆಯುತ್ತಿದ್ದು, ಈ ಬಾರಿಯು ಕೂಡ ವಿದ್ಯಾರ್ಥಿಗಳು ಸುರಿಯುವ ಮಳೆಯೊಂದಿಗೆ ಕೆಸರು ತುಂಬಿದ ಗದ್ದೆಗೆ ಇಳಿದು ನೇಜಿ ನೆಟ್ಟು ಸಂಭ್ರಮಿಸಿದರು. ಈ ಶಾಲೆಯಲ್ಲಿ ಹೊರ ಜಿಲ್ಲೆಯ ವಿದ್ಯಾರ್ಥಿಗಳೇ ಅಧಿಕವಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಗದ್ದೆಗಿಳಿದು ನಾಟಿ ಮಾಡುವ ಮೂಲಕ ಕೃಷಿ ಜೀವನ ಶೈಲಿಯನ್ನು ಪರಿಚಯಿಸಿಕೊಂಡರು.

ವಿದ್ಯಾರ್ಥಿಗಳೊಂದಿಗೆ ಮುಖ್ಯಶಿಕ್ಷಕರಾದ ರಾಮದಾಸ್ ಹಾಗೂ ಶಿಕ್ಷಕರಾದ ದೇವದಾಸ್ ಶೆಟ್ಟಿ, ನಮಿತಾಶ್ರೀ, ಸೀಮಾ, ಚಿನ್ನಮ್ಮ, ಕವಿತಾ, ಲಕ್ಷ್ಮೀಸರಸ್ವತಿ ಪಾಲ್ಗೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುದ್ದೀಪಾಲಂಕಾರದಿಂದ ಝಗಮಗಿಸುತ್ತಿರುವ ತಾಳಿಕೋಟೆ
ಕಾರ್ಯಕರ್ತರ ಅಭಿಪ್ರಾಯಕ್ಕೆ ಹೆಚ್ಚಿನ ಆದ್ಯತೆ