ಉಡುಪಿ: ಎಸ್‌ಡಿಎಂಎ ಕಾಲೇಜು ಆಸ್ಪತ್ರೆಯಲ್ಲಿ ವಿಶ್ವ ಧ್ಯಾನ ದಿನಾಚರಣೆ

KannadaprabhaNewsNetwork |  
Published : Dec 27, 2024, 12:46 AM IST
26ಎಸ್‌ಡಿಎಂಎ | Kannada Prabha

ಸಾರಾಂಶ

ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಪ್ರಥಮ ವಿಶ್ವ ಧ್ಯಾನ ದಿನವನ್ನು ಪ್ರಾಂಶುಪಾಲರಾದ ಡಾ. ಮಮತಾ ಕೆ. ವಿ. ಇವರ ಮಾರ್ಗದರ್ಶನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಪ್ರಥಮ ವಿಶ್ವ ಧ್ಯಾನ ದಿನವನ್ನು ಪ್ರಾಂಶುಪಾಲರಾದ ಡಾ. ಮಮತಾ ಕೆ. ವಿ. ಇವರ ಮಾರ್ಗದರ್ಶನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.ಬೆಳಗ್ಗೆ ಆಸ್ಪತ್ರೆಯ ಆವರಣದಲ್ಲಿ ಆವರ್ತನ ಧ್ಯಾನವೆನ್ನುವ ವಿಶಿಷ್ಟ ಮಾದರಿಯನ್ನು ಡಾ. ಅರ್ಪಣಾ ರಾಧೇಶ್‌ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಾಮೂಹಿಕವಾಗಿ ಅಭ್ಯಸಿಸಿದರು.ತದನಂತರ ಆಸ್ಪತ್ರೆಯ ಪತಂಜಲಿ ಯೋಗ ಮಂದಿರದಲ್ಲಿ ವಿಶ್ವ ಧ್ಯಾನ ದಿನಾಚರಣೆಯನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವೀರಕುಮಾರ ಕೆ. ಅವರು, ಧ್ಯಾನ ಮತ್ತು ಯೋಗ ನಮ್ಮ ಆರೋಗ್ಯ ರಕ್ಷಣೆಗೆ ಬಹಳ ಪ್ರಾಮುಖ್ಯವಾಗಿದ್ದು ಪ್ರತಿನಿತ್ಯದ ಅಭ್ಯಾಸ ನಮ್ಮೆಲ್ಲರದ್ದಾಗಬೇಕು ಎಂದು ಆಶಿಸಿದರು.ಡಾ ವಿಜಯ್ ಬಿ. ನೆಗಳೂರು ಅವರು ವಿಶ್ವ ಧ್ಯಾನ ದಿನಾಚರಣೆಯ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ. ಶ್ರೀಲತಾ ಕಾಮತ್ (ಶೈಕ್ಷಣಿಕ ವಿಭಾಗ), ಡಾ. ಅಶೋಕ್ ಕುಮಾರ್ ಬಿ. ಎನ್. (ಸ್ನಾತಕೋತ್ತರ ಮತ್ತು ಸಂಶೋಧನಾ ವಿಭಾಗ), ಡಾ. ರಜನೀಶ್ ವಿ. ಗಿರಿ (ಸ್ನಾತಕ ವಿಭಾಗ) ಉಪಸ್ಥಿತರಿದ್ದರು.

ಸ್ವಸ್ಥವೃತ್ತ ವಿಭಾಗದ ಸ್ತಾತಕೋತ್ತರ ವಿದ್ಯಾರ್ಥಿಗಳಾದ ಡಾ. ಶ್ರೀರಕ್ಷ ಸ್ವಾಗತಿಸಿ ಡಾ ಸಹನ ಆಚಾರ್ಯ ವಂದಿಸಿದರು. ಡಾ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.

ದ್ವಿತೀಯ ವರ್ಷದ ಸ್ನಾತಕ ವಿದ್ಯಾರ್ಥಿಗಳು ಧ್ಯಾನದ ಬಗ್ಗೆ ಜಾಗೃತಿ ಮೂಡಿಸುವ ಕಿರುನಾಟಕವನ್ನು ಸಂಗೀತದೊಂದಿಗೆ ಪ್ರದರ್ಶಿಸಿದರು. ಡಾ. ಯೋಗೀಶ ಆಚಾರ್ಯ, ಡಾ. ಸಂದೇಶ್ ಕಮಾರ್, ಡಾ. ಸೌಮ್ಯ ಭಟ್ ಮತ್ತು ಸ್ವಸ್ಥವೃತ್ತ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!