ನವದೆಹಲಿಯಲ್ಲಿ ಯುಎಫ್‌ಬಿಯು ಧರಣಿ, ಮತ ಪ್ರದರ್ಶನ

KannadaprabhaNewsNetwork |  
Published : Mar 06, 2025, 12:31 AM IST
ಕ್ಯಾಪ್ಷನ3ಕೆಡಿವಿಜಿ35 ನವದೆಹಲಿಯಲ್ಲಿಂದು ಯುಎಫ್‌ಬಿಯು ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಮತ ಪ್ರದರ್ಶನ ನಡೆಸಿದರು. | Kannada Prabha

ಸಾರಾಂಶ

ಬ್ಯಾಂಕುಗಳಲ್ಲಿ ಅಗತ್ಯ ನೇಮಕಾತಿ ಮಾಡಬೇಕು, ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರಬೇಕು, ಬ್ಯಾಂಕಿಂಗ್ ಕೆಲಸ ಹೊರಗುತ್ತಿಗೆ ನೀಡಬಾರದು ಎಂಬುದು ಹಲವಾರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ (ಯುಎಫ್‌ಬಿಯು)ಯ ನೇತೃತ್ವದಲ್ಲಿ ಸಾವಿರಾರು ನೌಕರರು ಹಾಗೂ ಅಧಿಕಾರಿಗಳು ನವದೆಹಲಿಯ ಸಂಸತ್ ರಸ್ತೆಯಲ್ಲಿ ಧರಣಿ ನಡೆಸಲಾಯಿತು ಎಂದು ಯುಎಫ್‌ಬಿಯು ದಾವಣಗೆರೆ ಜಿಲ್ಲಾ ಸಮಿತಿ ಸಂಚಾಲಕ ಕೆ.ರಾಘವೇಂದ್ರ ನಾಯರಿ ತಿಳಿಸಿದ್ದಾರೆ.

ದಾವಣಗೆರೆ: ಬ್ಯಾಂಕುಗಳಲ್ಲಿ ಅಗತ್ಯ ನೇಮಕಾತಿ ಮಾಡಬೇಕು, ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರಬೇಕು, ಬ್ಯಾಂಕಿಂಗ್ ಕೆಲಸ ಹೊರಗುತ್ತಿಗೆ ನೀಡಬಾರದು ಎಂಬುದು ಹಲವಾರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ (ಯುಎಫ್‌ಬಿಯು)ಯ ನೇತೃತ್ವದಲ್ಲಿ ಸಾವಿರಾರು ನೌಕರರು ಹಾಗೂ ಅಧಿಕಾರಿಗಳು ನವದೆಹಲಿಯ ಸಂಸತ್ ರಸ್ತೆಯಲ್ಲಿ ಧರಣಿ ನಡೆಸಲಾಯಿತು ಎಂದು ಯುಎಫ್‌ಬಿಯು ದಾವಣಗೆರೆ ಜಿಲ್ಲಾ ಸಮಿತಿ ಸಂಚಾಲಕ ಕೆ.ರಾಘವೇಂದ್ರ ನಾಯರಿ ತಿಳಿಸಿದ್ದಾರೆ.

ಮಾ.24 ಮತ್ತು 25 ರಂದು ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ಕರೆ ನೀಡಿದೆ. ಇದರ ಪೂರ್ವಭಾವಿ ಮುಷ್ಕರದ ಅನೇಕ ಪ್ರತಿಭಟನಾ ಕಾರ್ಯಕ್ರಮಗಳಲ್ಲಿ ಪಾರ್ಲಿಮೆಂಟ್ ಧರಣಿಯೂ ಒಂದಾಗಿದೆ. ಸರ್ಕಾರದ ಧೋರಣೆ ವಿರುದ್ಧ ಪ್ರತಿಭಟನೆಯಲ್ಲಿ ನೌಕರರು ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಂಕುಗಳ ತಾತ್ಕಾಲಿಕ ನೌಕರರನ್ನು ಕಾಯಂಗೊಳಿಸಬೇಕು, ನೌಕರರ ಉದ್ಯೋಗ ಭದ್ರತೆ ರಕ್ಷಿಸಬೇಕು, ಬ್ಯಾಂಕ್ ಉದ್ಯೋಗಿಗಳ ಮೇಲಾಗುತ್ತಿರುವ ದಾಳಿಯಿಂದ ರಕ್ಷಿಸಬೇಕು, ಐಡಿಬಿಐ ಬ್ಯಾಂಕಿನಲ್ಲಿ ಸರ್ಕಾರಿ ಬಂಡವಾಳವು ಶೇ.51 ಕ್ಕಿಂತ ಹೆಚ್ಚಿರುವಂತೆ ನೋಡಿಕೊಳ್ಳಬೇಕು ಹಾಗೂ ಇನ್ನಿತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವೇದಿಕೆಯ ಎಲ್ಲ 9 ಸಂಘಟನೆಗಳು ಧರಣಿಯಲ್ಲಿ ಒತ್ತಾಯಿಸಿ, ಸಂಪೂರ್ಣ ಬೆಂಬಲ ನೀಡಿದವು.

ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯಿಸ್ ಫೆಡರೇಷನ್‌ ಅಧ್ಯಕ್ಷ ಎಂ.ಎಸ್.ಶ್ರೀನಿವಾಸನ್, ಪ್ರಧಾನ ಕಾರ್ಯದರ್ಶಿ ಎಂ.ಜಯನಾಥ್, ಉಪ ಪ್ರಧಾನ ಕಾರ್ಯದರ್ಶಿ ಕೆ.ಜಿ. ಫಣೀಂದ್ರ, ಇತರ ಪದಾಧಿಕಾರಿಗಳಾದ ವಿನ್ಸೆಂಟ್ ಡಿಸೋಜ, ಶ್ರೀಲತಾ ಕುಲಕರ್ಣಿ, ಶಿವಕುಮಾರ್, ಎಂ.ಪದ್ಮನಾಭನ್, ಸ್ಟೀಫನ್ ಜಯಚಂದ್ರ, ಕೆ.ನಾಗರಾಜ್, ಎಂ.ಸಿ. ಮಲ್ಲೇಶ್, ಆರ್.ಕೆ.ಬಲ್ಲಾಳ್, ವಿಕ್ಟರ್ ಮೆನೆಂಜಿಸ್ ಸೇರಿದಂತೆ ವಿವಿಧ ರಾಜ್ಯಗಳ ನೌಕರರು, ಅಧಿಕಾರಿಗಳು ಭಾಗವಹಿಸಿದ್ದರು.

- - - -3ಕೆಡಿವಿಜಿ35:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''