ಮೂರ್ನಾಡು ಗೌಡ ಮಹಿಳಾ ಒಕ್ಕೂಟ ಯುಗಾದಿ ಆಚರಣೆ

KannadaprabhaNewsNetwork |  
Published : Mar 22, 2026, 03:00 AM IST
ಯುಗಾದಿ | Kannada Prabha

ಸಾರಾಂಶ

ಮೂರ್ನಾಡು ಗೌಡ ಮಹಿಳಾ ಒಕ್ಕೂಟದ ವತಿಯಿಂದ ಮೂರ್ನಾಡ್ ಗೌಡ ಸಮಾಜದ ಸಭಾಂಗಣದಲ್ಲಿ ಯುಗಾದಿ ಆಚರಿಸಲಾಯಿತು

ಕನ್ನಡಪ್ರಭ ವಾರ್ತೆ ನಾಪೋಕ್ಲು

ಮೂರ್ನಾಡು ಗೌಡ ಮಹಿಳಾ ಒಕ್ಕೂಟದ ವತಿಯಿಂದ ಮೂರ್ನಾಡ್ ಗೌಡ ಸಮಾಜದ ಸಭಾಂಗಣದಲ್ಲಿ ಯುಗಾದಿ ಆಚರಿಸಲಾಯಿತು. ಬೇವು ಬೆಲ್ಲ ಹಂಚುವ ಮೂಲಕ ಉದ್ಘಾಟಿಸಲಾಯಿತು. ಉಳುವಾರನ ಕುಮುದಿನಿ ಅವರು ಯುಗಾದಿ ಹಬ್ಬದ ಬಗ್ಗೆ ಮಾತನಾಡಿ, ಈ ದಿನ ಪಂಚಾಂಗ ಶ್ರವಣವೂ ನಡೆಯುತ್ತದೆ. ಪಂಚಾಂಗದ ಮೂಲಕ ಹೊಸ ವರ್ಷದ ಭವಿಷ್ಯ, ಶುಭ ದಿನಗಳು, ಹಬ್ಬಗಳು ಮತ್ತು ಗ್ರಹಗಳ ಸ್ಥಿತಿಯನ್ನು ತಿಳಿಸಲಾಗುತ್ತದೆ ಎಂದರು.ಅಂಚೆ ಮನೆ ದಮಯಂತಿ ಮಾತನಾಡಿ, ಈ ಹಬ್ಬವು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಒಗ್ಗಟ್ಟನ್ನು ಪ್ರತಿಬಿಂಬಿಸುತ್ತದೆ ಎಂದರು. ಗೌಡ ಮಹಿಳಾ ಒಕ್ಕೂಟ ಅಧ್ಯಕ್ಷೆ ಕಲ್ಲುಮುಟ್ಲು ಜಶ್ಮಿ ಹಾಜರಿದ್ದರು.ಬಿಳಿಯಾರ ಮಮತ ಪ್ರಾರ್ಥಿಸಿದರು. ತೆಕ್ಕಡೆ ಭವ್ಯ ಸ್ವಾಗತಿಸಿದರು. ಬೈಲೋಳಿ ಮೇನಕಾ ನಿರೂಪಿಸಿದರು. ಮೆರ್ಕಜ್ಜೆ ಸುಷ್ಮಾ ವಂದಿಸಿದರು. ತೆಕ್ಕಡೆ ಆಶಾ, ಮೆರ್ಕಜ್ಜೆ ಕೃತಿಕಾ, ಪಾಡಿಚೆಟ್ಟಿರಾ ಹರ್ಷಿತ, ಕಲ್ಲುಮುಟ್ಲು ಲತಾ, ಜಮುನಾ, ಕುವೆಂಡ್ರಾ ಸುನಂದಿನಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಯಿ ಕಟ್ಟಿ ಜಾತ್ರೆಗೆ ಚಾಲನೆ
ಇಸ್ಲಾಂ ಅಥ೯ ಮಾಡಿಕೊಂಡರೆ ಶ್ರೇಷ್ಠ ಮಾನವ