- ಪರೀಕ್ಷೆ ನಡೆಸುವ ಬಗ್ಗೆ ಕಾಲೇಜಿಗೆ ಸಂಪೂರ್ಣ ನಿಯಂತ್ರಣ: ಪ್ರಾಚಾರ್ಯ ಡಾ.ಅರವಿಂದ ಮಾಹಿತಿ - - - - ಬೆಳಗಾವಿ ವಿಟಿಯು ಮುಖಾಂತರ ನವದೆಹಲಿಯ ಯುಜಿಸಿಗೆ 3.3.2023ರಂದು ಮನವಿ ಸಲ್ಲಿಸಲಾಗಿತ್ತು - ಸಂಯೋಜಿತ ಕಾಲೇಜು ಆಗಿ 26 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಬಿಐಇಟಿ ಕಾಲೇಜು
- ಅನುಮೋದನೆ ಸಿಕ್ಕ ಕಾರಣ ಪಠ್ಯಕ್ರಮದಲ್ಲಿ ಬಿಐಇಟಿ ಕಾಲೇಜಿಗೆ ಶೇ.30ರಷ್ಟು ರಿಯಾಯಿತಿ ಇರುತ್ತದೆ - - -
ಕನ್ನಡಪ್ರಭ ವಾರ್ತೆ, ದಾವಣಗೆರೆ ದಾವಣಗೆರೆಯ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯಕ್ಕೆ 2024- 2025ನೇ ಶೈಕ್ಷಣಿಕ ಸಾಲಿನಿಂದ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ವಿಶ್ವವಿದ್ಯಾನಿಲಯಗಳ ಧನಸಹಾಯ ಆಯೋಗ (ಯುಜಿಸಿ)ದ ಅನುಮತಿ ದೊರೆತಿದೆ ಎಂದು ಕಾಲೇಜು ಪ್ರಾಚಾರ್ಯ ಡಾ. ಎಚ್.ಬಿ. ಅರವಿಂದ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಸಂಯೋಜಿತ ಕಾಲೇಜು ಆಗಿ 26 ವರ್ಷದಿಂದ ಕಾಲೇಜು ಕಾರ್ಯನಿರ್ವಹಿಸುತ್ತಿದೆ. ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಬೆಳಗಾವಿಯ ವಿಟಿಯು ಮುಖಾಂತರ ನವದೆಹಲಿಯ ಯುಜಿಸಿಗೆ 3.3.2023ರಂದು ಮನವಿ ಸಲ್ಲಿಸಲಾಗಿತ್ತು ಎಂದರು.
ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಗುಣವಾದ ಪಠ್ಯ ಸೇರ್ಪಡೆಗೊಳಿಸಲು ಕಾಲೇಜಿಗೆ ಅವಕಾಶ ಇದೆ. ಪರೀಕ್ಷೆ ನಡೆಸುವುದರ ಮೇಲೆ ಸಂಪೂರ್ಣ ನಿಯಂತ್ರಣ ಕಾಲೇಜಿಗೆ ಇರುತ್ತದೆ. ಇದು ಆದಷ್ಟು ಬೇಗನೆ ಪರೀಕ್ಷೆ ನಡೆಸಿ, ಫಲಿತಾಂಶ ನೀಡಲು ಅನುಕೂಲವಾಗಲಿದೆ. ಸ್ವಾಯತ್ತ ಸಂಸ್ಥೆಯಾದ ನಂತರ ಆಯಾ ವರ್ಷ ಸರ್ಕಾರ ನಿಗದಿಪಡಿಸಿದ ಶುಲ್ಕ ಮತ್ತು ಪ್ರವೇಶ ನಿಯಮ ಪಾಲಿಸಬೇಕಾಗುತ್ತದೆ ಎಂದು ತಿಳಿಸಿದರು.
ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಡಾ.ನಿರ್ಮಲ ಮಾತನಾಡಿ, ತಮ್ಮ ಕಾಲೇಜಿನ ಶೇ.60 ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸೆಲೆಕ್ಷನ್ ಆಗಿ, ಉದ್ಯೋಗ ಸಿಕ್ಕಿದೆ. ಒಳ್ಳೆಯ ವೇತನ ನೀಡುವ ಕಂಪನಿಗಳು ಕಾಲೇಜಿನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಿವೆ. ಜುಲೈ-2024ರಲ್ಲಿ ಮತ್ತೆ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಹೇಳಿದರು.
- - - -17ಕೆಡಿವಿಜಿ1: