ಕನ್ನಡಪ್ರಭ ವಾರ್ತೆ ಕಮಲನಗರ
ಪಟ್ಟಣದ ವಿವಿಧ ಕಡೆಗಳಲ್ಲಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೇಗೆ, ಮಕ್ಕಳಿಗೆ ತರಬೇತಿ ನೀಡುವ ಕೋಚಿಂಗ್ ಸೆಂಟರಗಳು ಅನಧಿಕೃತವಾಗಿ ತಲೆ ಎತ್ತಿ, ಪಾಲಕರಿಂದ ಹಣ ವಸೂಲಿಗಿಳಿದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ತರಬೇತಿ ಕೇಂದ್ರ ಮುಚ್ಚುವಂತೆ ಎಚ್ಚರಿಕೆ ನೀಡಿದ್ದಾರೆ.ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್ ದೊಡ್ಡೆ ನೇತೃತ್ವದ ತಂಡವು ದಿಢೀರ್ ದಾಳಿ ನಡೆಸಿ ತರಬೇತಿ ನೆಪದಲ್ಲಿ ನಡೆಸುತ್ತಿರುವ ನವೋದಯ ಕೇಂದ್ರಗಳ ಮಾಲೀಕರ ಹಾಗೂ ಅನಧಿಕೃತ ಶಾಲೆ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಾಮಿ ವಿವೇಕಾನಂದ ಕೋಚಿಂಗ್ ಸೆಂಟರ್, ಹಾಗೂ ಅಕ್ಷರ ನವೋದಯ ಕೋಚಿಂಗ್ ಸೆಂಟರ್‌ಗೆ ನೋಟಿಸ್ ನೀಡಲಾಗಿದೆ. ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಪಡೆದು ಶಾಲೆಗೆ ಬಾರದೆ ಕೋಚಿಂಗ್ ಸೆಂಟರ ತರಬೇತಿಗೆ ತೆರಳುತಿದ್ದರು ಹಾಗೂ ಹಾಜರಾತಿ ಹಾಕುತ್ತಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಇಒ ಎಚ್ಚರಿಕೆ ನೀಡಿದ್ದಾರೆ.ಸಿಆರ್‌ಪಿಗಳಿಗೆ ನೋಟಿಸ್:ಕಮಲನಗರ ಪಟ್ಟಣದ ಅನಧಿಕೃತ ಕೋಚಿಂಗ್ ಸೆಂಟರ್ ಹಾಗೂ ಶಾಲೆಗಳು ನಡೆಯುತಿದ್ದರೂ ಸಿಆರ್‌ಪಿಗಳು ಇಲಾಖೆ ಗಮನಕ್ಕೆ ತಂದಿಲ್ಲಾ. ಇದರ ಬಗ್ಗೆ ಕಾರಣ ಕೇಳಿ ನೊಟಿಸ್ ಕೊಡುವುದಾಗಿ ಹೇಳಿದ್ದಾರೆ.
ಮುಖ್ಯಗುರುಗಳಿಗೆ ನೋಟಿಸ್:ಶಾಲೆಯಲ್ಲಿ ದಾಖಲಾತಿ ಪಡೆದು ಶಾಲೆಗೆ ಬಾರದೆ ಕೋಚಿಂಗ್ ಸೆಂಟರ ತರಬೇತಿಗೆ ತೆರಳುತಿದ್ದರು ಶಾಲೆ ಮುಖ್ಯ ಗುರುಗಳು ಹಾಜರಾತಿ ಹಾಕುತ್ತಿರುವುದು ಕಂಡು ಬಂದಿದೆ. ಆದ್ದರಿಂದ ಇವರಿಗೂ ಸಹ ನೋಟಿಸ್ ಕೊಡುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕಿನ ಸಆರ್‌ಪಿ, ಬಿಆರ್‌ಪಿ ಹಾಜರಿದ್ದರು. ನಾಗೇಶ, ಶೇಷಿಕಾಂತ ಬಿಡವೆ, ಪ್ರಕಾಶ ರಾಠೋಡ, ಮಹಾದೇವ ಮಡಿವಾಳ, ರಮಾಕಾಂತ ಕಾಳೆ, ರೋಹಿದಾಸ, ಶಿವಕುಮಾರ ವೇಂಕಟ್ ಬಾಲಾಜಿ ನವನಾಥ ಇದ್ದರು.