- ಜಯಂತಿ ಕಾರ್ಯಕ್ರಮದಲ್ಲಿ ಮಾನವ ಬಂಧುತ್ವ ವೇದಿಕೆ ಪ್ರೊ.ರಾಮಚಂದ್ರಪ್ಪ ಸಲಹೆ - - -
ನಗರದ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್, ಬಸವೇಶ್ವರ, ಬಾಬು ಜಗಜೀವನ ರಾಮ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶೋಷಿತ ವರ್ಗಕ್ಕೆ ಇಂತಹ ಮಹಾತ್ಮರು, ಮಹನೀಯರೇ ಆಧುನಿಕ ದೇವರುಗಳು. ಹಾಗೆಂದು ಅಂತಹವರಿಗೆ ಗುಡಿಗಳ ಕಟ್ಟಿ ಪೂಜಿಸಬಾರದು. ಬದಲಿಗೆ ಅಂತಹವರ ವಿಚಾರ ತಿಳಿಸಿ, ನಮ್ಮ ಬದುಕನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಬೇಕು ಎಂದರು.
ಅಂಬೇಡ್ಕರ್, ಬಸವಣ್ಣನ ಅನುಯಾಯಿಗಳು ವ್ಯಕ್ತಿ ಪೂಜೆಯಲ್ಲಿ ತೊಡಗಬಾರದು. ಇಂತಹ ಮಹನೀಯರ ಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಉದ್ಘಾಟಿಸಬಾರದು. ಗಿಡಕ್ಕೆ ನೀರೆರೆದು ಆರಂಭಿಸಬೇಕು. ಮಹನೀಯರ ವಿಚಾರಗಳನ್ನು ನಮ್ಮ ಅರಿವಿನ ಭಾಗವಹಿಸಿಕೊಳ್ಳಬೇಕು. ನಮ್ಮ ನಿಜವಾದ ಸಾಂಸ್ಕೃತಿಕ ನಾಯಕರನ್ನು ಗುರುತಿಸಬೇಕು. ಅದೇ ನಾವು ಅಂಬೇಡ್ಕರ್, ಬಸವಣ್ಣ, ಬುದ್ಧನಂತಹ ಮಹನೀಯರಿಗೆ ನೀಡುವ ಗೌರವವಾಗಿದೆ ಎಂದು ಹೇಳಿದರು.ಸಂಘಟನೆ ಜಿಲ್ಲಾಧ್ಯಕ್ಷ ಎಸ್.ಎ. ಜಿಗಳಿ ಹಾಲೇಶ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹರಿಹರ ಅಧ್ಯಕ್ಷ ಕೆ.ಬಿ.ಮಂಜಪ್ಪ, ಎಸ್ಸಿ-ಎಸ್ಟಿ ನೌಕರರ ಸಂಘದ ಅಧ್ಯಕ್ಷ ಪಿ.ರುದ್ರೇಶ, ಡಿಎಸ್‌ಎಸ್ ರಾಜ್ಯ ಸಂಚಾಲಕ ಎಚ್.ಮಲ್ಲೇಶ, ರಾಜ್ಯ ಸಂಘಟನಾ ಕಾರ್ಯದರ್ಶಿ ಹೆಗ್ಗೆರೆ ರಂಗಪ್ಪ, ದಲಿತ ಸಂಘಟನೆಗಳ ಒಕ್ಕೂಟದ ಸಿ.ಬಸವರಾಜ, ಮುಖಂಡರಾದ ಎಸ್.ಆರ್. ಶಶಿಧರ, ಆರ್.ಆರ್. ಮಠದ್, ಗದಿಗೆಪ್ಪ, ದ್ವಾರಕೀಶ, ಮಹದೇವಮ್ಮ, ಅರುಣ ಕುಮಾರ ಇತರರು ಇದ್ದರು.
ಇದೇ ವೇಳೆ ಮಾಜಿ ಯೋಧರಾದ ಹರಿಹರದ ಗಂಗಾಧರ, ಹುಚ್ಚಂಗೆಪ್ಪ, ಆವರಗೆರೆಯ ಸಂತೋಷ್ ಹಾಗೂ ಹಿರಿಯ ದಲಿತ ಹೋರಾಟಗಾರರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ.90 ಅಂಕ ಗಳಿಸಿದವರು ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಗೌರವಿಸಲಾಯಿತು.- - -
-9ಕೆಡಿವಿಜಿ11.ಜೆಪಿಜಿ:ಡಾ.ಅಂಬೇಡ್ಕರ್, ಬಸವೇಶ್ವರ, ಬಾಬು ಜಗಜೀವನ ರಾಮ್ ಜಯಂತಿ ಕಾರ್ಯಕ್ರಮವನ್ನು ಪ್ರೊ. ಎ.ಬಿ. ರಾಮಚಂದ್ರಪ್ಪ ಉದ್ಘಾಟಿಸಿದರು.