ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ
ಇಲ್ಲಿನ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಶರಣ ಹಡಪದ ಅಪ್ಪಣ್ಣ 891ನೇ ಜಯಂತಿ ಸಮಾರಂಭದಲ್ಲಿ ಮಾತನಾಡಿದರು. ವಚನಗಳು ಅಂದಿನ ಹಾಗೂ ಇಂದಿನ ಕಾಲಕ್ಕೂ ಪ್ರಸ್ತುತ, ಅವುಗಳನ್ನು ಅರ್ಥೈಸಿಕೊಂಡರೆ ಬದುಕು ಸಾರ್ಥಕತೆ ಕಾಣಲಿದೆ. ಶರಣ ಹಡಪದ ಅಪ್ಪಣ್ಣ ಮಹಾನ್ ಶ್ರೇಷ್ಟರಾಗಿದ್ದರು, ಅವರ ವಚನಗಳಲ್ಲಿ ಅನುಭಾವದ ಪಾಂಡಿತ್ಯವಿದೆ, ಗಂಬೀರವಾದ ನೆಲೆ ಇದೆ. ಷಟ್ ಸ್ಥಲಗಳನ್ನು ಕುರಿತು ಸಾಕಷ್ಟು ವಿವರಿಸಿದ್ದಾರೆ. ಅವರ ಜಯಂತಿ ಆಚರಣೆ ಜೊತೆ ಸವಿತಾ ಸಮಾಜದ ಬಂಧುಗಳು ತಮ್ಮ ಮಕ್ಕಳಿಗೆ ಮೌಲ್ಯಯುತ ಬದುಕು ಕಟ್ಟಿಕೊಡುವಲ್ಲಿ ಮುಂದಾಗಬೇಕು. ಇಂದು ಮೊಬೈಲ್ ಎಷ್ಟು ಉಪಯೋಗವೋ ಅಷ್ಟೆ ಅಪಾಯಕಾರಿಯಾಗಿದ್ದು, ಪೋಷಕರು ಮಕ್ಕಳಿಗೆ ಹೆಚ್ಚಿನ ರೀತಿ ಮೊಬೈಲ್ ನೀಡುವ ಬದಲು ಅವರಿಗೆ ಜೀವನ ಮೌಲ್ಯ ಹೇಳಿಕೊಡಿ, ಗುರು ಹಿರಿಯರನ್ನು ಗೌರವಿಸುವ ಹಾಗೂ ನಮ್ಮ ಸಂಸ್ಕೖತಿ ಕಲಿಸಿಕೊಡಿ ಎಂದರು.
12ನೇ ಶತಮಾನ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒಂದು ವಿಶೇಷವಾದ ಕಾಲವಾಗಿತ್ತು, ಅದೊಂದು ಭಕ್ತಿಯ ಬೆಳೆಸಿದ ಸುವರ್ಣ ಯುಗ, ಸಾಂಸ್ಕೖತಿಕ, ಸಾಮಾಜಿಕ, ಸಾಹಿತ್ಯಿಕವಾಗಿ ಹಾಗೂ ಧಾಮಿ೯ಕ, ಆದ್ಯಾತ್ಮಿಕವಾಗಿ ಅದು ಸುವರ್ಣ ಕಾಲವಾಗಿತ್ತು, ಕೈಯಲ್ಲಿ ಕಾಯಕ, ಮನಸ್ಸಿನಲ್ಲಿ ಭಕ್ತಿ, ಮಾತಿನಲ್ಲಿ ಲಿಂಗಕಳೆ, ನಡೆಯೇ ನುಡಿಯಾಗಿ , ನುಡಿಯೆ ನಡೆಯಾಗಿ ಇದ್ದ ಅದ್ಬುತ ಕಾಲವಾಗಿತ್ತು, ಶೋಷಿತರನ್ನು ಮೇಲೆತ್ತಬೇಕು ಎಂಬ ಸುವರ್ಣ ಕಾಲವಾಗಿತ್ತು ಎಂದು ವ್ಯಾಖ್ಯಾನಿಸಿದರು. ತಾಲೂಕು ಪಂಚಾಯ್ತಿ ಇಓ ಗುರುಶಾಂತಪ್ಪ ಬೆಳ್ಳುಂಡಗಿ ಮಾತನಾಡಿ, ಸವಿತಾ ಸಮಾಜದ ಬಂಧುಗಳು ತಮ್ಮ ಮಕ್ಕಳನ್ನು ಉನ್ನತ ಹುದ್ದೆಗೆ ಕಳುಹಿಸುವಲ್ಲಿ ಜವಾಬ್ದಾರಿ ಅರಿಯಿರಿ. ನಿಮ್ಮ ಮಕ್ಕಳು ಐಎಎಸ್, ಐಪಿಎಸ್ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ತೆರಳುವ ನಿಟ್ಟಿನಲ್ಲಿ ಸಜ್ಜುಗೊಳಿಸಬೇಕು. ಇದೊಂದು ಸ್ಪರ್ಧಾತ್ಮಕಯುಗವಾಗಿದ್ದು ಈಯುಗದಲ್ಲಿ ನಿಮ್ಮ ಮಕ್ಕಳಿಗ ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರೆ ಶರಣ ಅಪ್ಪಣ್ಣ ಜಯಂತಿ ಆಚರಣೆಗೆ ನಿಜ ಅರ್ಥ ಬರಲಿದೆ ಎಂದರು.ಈವೇಳೆಎಸ್ ಎಸ್ ಎಲ್ ಸಿ ಮತ್ತು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಈಸಂರರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಎ.ಪಿ.ಶಂಕರ್, ತಹಶಿಲ್ದಾರ್ ಬಸವರಾಜು, ಗ್ರೇಡ್ 2 ತಹಶೀಲ್ದಾರ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಸವಿತಾ ಸಮಾಜ ಅಧ್ಯಕ್ಷ ರಾಚಶೆಟ್ಟಿ(ತಮ್ಮಯ್ಯ), ಕಾರ್ಯದರ್ಶಿ ನವೀನ್, ಖಜಾಂಚಿ ಮಹೇಶ್, ಸಂಘಟನಾ ಕಾರ್ಯದರ್ಶಿಗಳು ಮಹೇಶ್, ಮುತ್ತುರಾಜ್, ಸುರೇಶ್, ಪುಟ್ಟಲಿಂಗಶೆಟ್ಟಿ, .ನಾಗಣ್ಣ, ಟೈಲರ್ ಮಹೇಶ್, ಮಾಜಿ ಅಧ್ಯಕ್ಷ ಸೋಮಣ್ಣ, ಉಪಾಧ್ಯಕ್ಷ ರಾಚಪ್ಪ, ಮಾಜಿ ಅಧ್ಯಕ್ಷ ಮಹದೇವು,ತೇಜು, ಸವಿತಾ ಸಮಾಜದ ಮಹಿಳಾ ಸಂಘದ ಅಧ್ಯಕ್ಷೆ ದೊಡ್ಡತಾಯಮ್ಮ ಇನ್ನಿತರಿದ್ದರು.