ಹುಮನಾಬಾದ್ ಪಟ್ಟಣದ ಈದ್ಗಾ ಮೈದಾನದಲ್ಲಿರುವ ವಿದ್ಯಾನಿಕೇತನ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ವಿಶ್ವಭಾರತಿ ಹಾಗೂ ವಿಶ್ವೇಶ್ವರಯ್ಯ ಶಾಲಾ ವಾಷಿಕೋತ್ಸವ ಕಾರ್ಯಕ್ರಮ ಜರುಗಿತು.
ಕನ್ನಡಪ್ರಭ ವಾರ್ತೆ, ಹುಮನಾಬಾದ್
ನಾವು ವಿದ್ಯಾಭ್ಯಾಸವನ್ನು ಎಷ್ಟು ಮಾಡುತ್ತೇವೆ ಎನ್ನುವುದಕ್ಕಿಂತ ವಿದ್ಯೆಯನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ ಎಂದು ಮಾಣಿಕಪ್ರಭು ಸಂಸ್ಥಾನ ಕಾರ್ಯದರ್ಶಿ ಆನಂದರಾಜ ಪ್ರಭುಗಳು ಹೇಳಿದರು.ಪಟ್ಟಣದ ಈದ್ಗಾ ಮೈದಾನದಲ್ಲಿರುವ ವಿದ್ಯಾನಿಕೇತನ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ವಿಶ್ವಭಾರತಿ ಹಾಗೂ ವಿಶ್ವೇಶ್ವರಯ್ಯ ಶಾಲಾ ವಾಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಓದು ಎಂದರೆ ಕೇವಲ ಪಿಯುಸಿಯೋ, ಡಿಗ್ರಿಯೋ, ಇಂಜೀನೀಯರೋ ಮಾತ್ರವಲ್ಲ. ವಿದ್ಯೆಗೆ ಕೇವಲ ಹಣ ಸಂಪಾದಿಸಲು ಅಲ್ಲ. ವಿದ್ಯೆಗೂ ಬುದ್ಧಿಗೂ ತುಂಬಾ ವ್ಯತ್ಯಾಸವಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಹಾಗೂ ಮೌಲ್ಯಾಧಾರಿತ ಶಿಕ್ಷಣದ ಬಗ್ಗೆ ಮಾರ್ಗದರ್ಶನ ನೀಡಿದಾಗ ಹಾಗೂ ನಾವು ಶಿಕ್ಷಣದ ಮೂಲಕ ಮಕ್ಕಳಿಗೆ ಸಂಸ್ಕಾರಯುತ ಗುಣಮಟ್ಟದ ಜ್ಞಾನಾರ್ಜನೆ ಎಷ್ಟು ಖರ್ಚು ಮಾಡುತ್ತೇವೆ ನಮ್ಮ ಬುದ್ದಿ ಮಟ್ಟವು ಅಷ್ಟೆ ಹೆಚ್ಚಾಗಿ ಬೆಳೆಯುತ್ತದೆ. ವಿದ್ಯಾರ್ಥಿಗಳು ಉನ್ನತ ಹುದ್ದೆ ಗಿಟ್ಟಿಸಲು ಸಾಧ್ಯವಾಗುತ್ತದೆ ಎಂದ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಪಾಲಕರಿಗೆ ಕಲಿಕೆಯ ಕುರಿತು ಮಾಹಿತಿ ನೀಡಿದರು.ಮೆಥೋಡಿಸ್ಟ್ ಚರ್ಚ್ ಸಭಾಪಾಲಕರಾದ ವಿನ್ಸಂಟ್ ವಿನಯಕುಮಾರ ಮಾತನಾಡಿ. ಸತತ ಪರಿಶ್ರಮ ಮತ್ತು ಶ್ರಧ್ಧೆಯಿಂದ ತಮ್ಮ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ವಹಿಸಿದಲ್ಲಿ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರಿಶ್ರಮ ಪಡಬೇಕು ಎಂದರು.ಇದೇ ಸಂದರ್ಭದಲ್ಲಿ 10ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ರೀಡೆಗಳಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು. ಕಲ್ಲಪ್ಪಾ ಭೂರೇಶ ಅಧ್ಯಕ್ಷತೆ ವಹಿಸಿದರು. ಹುಮನಾಬಾದ ಪುರಸಭೆ ಉಪಾಧ್ಯಕ್ಷ ಮುಕರಂಜಾ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಾಳ, ಹಳ್ಳಿಖೇಡ (ಬಿ) ಪ್ರಥಮ ದರ್ಜೆ ಗುತ್ತಿಗೆದಾರ ರಫೀಕ್ ಪಟೇಲ್, ಗಡವಂತಿ ಶಿಕ್ಷಕ ವೀರಣ್ಣಾ ಕುಂಬಾರ, ವಿದ್ಯಾನಿಕೇತನ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜಕುಮಾರ ಭೂರೇಶ, ವಿಶ್ವೇಶ್ವರಯ್ಯ ಆಂಗ್ಲ ಮಾಧ್ಯಮ ಶಾಲೆ ಪ್ರಾಚಾರ್ಯ ಡೇನಿಯಾಲ ಭೂರೇಶ, ಚಿನಮ್ಮಾ ಪಾಟೀಲ್, ದೈಹಿಕ ಶಿಕ್ಷಕ ಬೆಂಜಮೀನ್ ಭೂರೇಶ, ಪ್ರೋ. ಸುಮಂತ ಪಿ, ಬಾಬುರಾವ ಹಿರೋಳೆ ಸೇರಿದಂತೆ ಅನೇಕರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.