ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ಅಪಘಾತದಲ್ಲಿ ಗಾಯಗೊಂಡಿದ್ದ ಚಿರತೆ ಕೆಲಹೊತ್ತು ರಸ್ತೆಯಲ್ಲೇ ಮಲಗಿತ್ತು. ಇದನ್ನು ನೋಡಿ ವಾಹನ ಸವಾರರು ಗಾಬರಿಗೊಂಡಿದ್ದರು. ಸಾಕಷ್ಟು ವಾಹನಗಳು ಅಕ್ಕಪಕ್ಕದಲ್ಲೇ ಸಂಚರಿಸಿದರೂ ಅದು ಮೇಲಕ್ಕೆ ಏಳಲಿಲ್ಲ, ನಂತರದಲ್ಲಿ ಸಾರ್ವಜನಿಕರು ಕೂಗಾಡಿ ಕಲ್ಲುಗಳಿಂದ ಹೊಡೆದಾಗ ಚಿರತೆ ಸೇತುವೆ ಕೆಳ ಭಾಗಕ್ಕೆ ತೆರಳಿ ಅವಿತುಕೊಂಡಿತ್ತು.
ನಿಶಕ್ತವಾದ ಚಿರತೆ ಸೇತುವೆಯ ಕೆಳ ಭಾಗದಲ್ಲಿಯೇ ಭಯದಿಂದ ಅಡಗಿ ಕುಳಿತಿರುವ ಸಂದರ್ಭದಲ್ಲಿ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಆಗಮಿಸಿ ಪರಿಶೀಲನೆ ಮಾಡಿದ್ದಾರೆ.ಅರಣ್ಯ ಇಲಾಖೆ ಅಧಿಕಾರಿಗಳು ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಾಹಲಯದ ಅಧಿಕಾರಿಗಳನ್ನು ಸಂಪರ್ಕಿಸಿ, ಬಳಿಕ ವೈದ್ಯರು ಅರವಳಿಕೆ ಮದ್ದು ನೀಡಿ ನಂತರದಲ್ಲಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಗಾಯಗೊಂಡಿದ್ದ ಹೆಣ್ಣು ಚಿರತೆಯನ್ನು ಪ್ರಾಣಿ ಸಂಗ್ರಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ.ನಾಯಿ ದಾಳಿಗೆ 24 ಕುರಿಮರಿಗಳ ಸಾವು
ಕನ್ನಡಪ್ರಭ ವಾರ್ತೆ ಹೂವಿನಹಡಗಲಿತಾಲೂಕಿನ ಹೊಳಲು ಗ್ರಾಮದ ಹೊರ ವಲಯದಲ್ಲಿ ಕುರಿ ಹಟ್ಟಿಯಲ್ಲಿದ್ದ ಕುರಿಮರಿಗಳ ಮೇಲೆ, ಬೀದಿನಾಯಿಗಳು ದಾಳಿ ಮಾಡಿರುವ ಪರಿಣಾಮ 24 ಕುರಿಮರಿಗಳು ಸಾವನ್ನಪ್ಪಿವೆ. ಹೊಳಲು ಗ್ರಾಮದ ಹಡಗಲಿ ಚಂದ್ರಪ್ಪ, ಹಡಗಲಿ ಸೊರೆಪ್ಪ ಅವರಿಗೆ ಸೇರಿದ್ದ 32 ಕುರಿಮರಿಗಳು, ನಾಗಪ್ಪ ಅವರಿಗೆ ಸೇರಿದ್ದ 10 ಕುರಿಮರಿಗಳ ಸಾವನ್ನಪ್ಪಿವೆ. ಒಟ್ಟಾರೆ 24 ಕುರಿಮರಿಗಳು ಸಾವನ್ನಪ್ಪಿದ್ದು, 7 ಕುರಿಮರಿಗಳು ಗಾಯಗೊಂಡಿವೆ. 12 ಕುರಿಮರಿಗಳು ಕಾಣೆಯಾಗಿವೆ. ಕುರಿಹಟ್ಟಿಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಬೀದಿ ನಾಯಿಗಳು ದಾಳಿ ಮಾಡಿದ್ದು, 24 ಕುರಿಮರಿಗಳನ್ನು ಅರೆಬರೆಯಾಗಿ ತಿಂದು ಹಾಕಿವೆ. ಸ್ಥಳಕ್ಕೆ ಉಪ ಅರಣ್ಯಾಧಿಕಾರಿ ರಾಮು ಹಾಗೂ ಪಶು ಸಂಗೋಪನಾ ಇಲಾಖೆ ವೈದ್ಯ ಡಾ.ನಾರಾಯಣ ಬಣಕಾರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ