ಇಂಡಿಯಾ ಒಕ್ಕೂಟ ಛಿದ್ರವಾಗುತ್ತದೆ: ಈಶ್ವರಪ್ಪ ಭವಿಷ್ಯ

KannadaprabhaNewsNetwork | Published : Jan 26, 2024 1:50 AM

ಸಾರಾಂಶ

ಜಗದೀಶ್‌ ಶೆಟ್ಟರ್‌ ಅವರ ಮೈಯಲ್ಲಿ ಹರಿಯುತ್ತಿರುವುದು ಅಪ್ಪಟ ಹಿಂದೂ ರಕ್ತ. ಅವರದು ಕಾಂಗ್ರೆಸ್‌ನ ಹಾಗೆ ಬೆರಕೆ ರಕ್ತವಲ್ಲ. ಅವರು ಮತ್ತೆ ವಾಪಸ್‌ ಬರುತ್ತಾರೆ ಎಂದು ಅವರು ಕಾಂಗ್ರೆಸ್‌ಗೆ ಹೋದ ದಿನವೇ ನಾನು ಹೇಳಿದ್ದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಇಂಡಿಯಾ ಒಕ್ಕೂಟದಲ್ಲಿ ಒಡಕು ಮೂಡಿದೆ. ಕಾಂಗ್ರೆಸ್ ಜೊತೆ ಹೋಗಲ್ಲ ಅಂತಾ ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇಂಡಿಯಾ ಒಕ್ಕೂಟ ಛಿದ್ರವಾಗಿ ಹೋಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.ಶಿವಮೊಗ್ಗದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಸುಳ್ಳು ಗ್ಯಾರಂಟಿ ಮೂಲಕ ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದು, ಬಿಜೆಪಿ ನಿರ್ನಾಮ ಮಾಡ್ತೀವಿ ಅಂತ ಹೇಳಿದ್ದರು. ಬಿಜೆಪಿಯಿಂದ ಕಾಂಗ್ರೆಸ್ ಗೆ ಶಾಸಕರು ಬರುತ್ತಾರೆ ಅಂತ ಹೇಳಿದ್ದರು. ಒಬ್ಬನೇ ಒಬ್ಬ ಶಾಸಕ ಇದುವರೆಗೆ ಹೋಗಲಿಲ್ಲ. ಕಾಂಗ್ರೆಸ್ ಪಕ್ಷವನ್ನು ಒಪ್ಪಲು ಯಾರೊಬ್ಬರೂ ಸಿದ್ದರಿಲ್ಲ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವಿಪಕ್ಷ ಸ್ಥಾನವು ಸಿಗಲಿಲ್ಲ. ಈ ಬಾರಿ ವಿಪಕ್ಷ ಸ್ಥಾನವನ್ನಾದರೂ ಕೊಡು ಅಂತಾ ರಾಮನನ್ನು ಬೇಡುವ ಪರಿಸ್ಥಿತಿ ಕಾಂಗ್ರೆಸ್‌ಗೆ ಬಂದಿದೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್‌ ಸರ್ಕಾರ ಪೂರ್ಣಾವಧಿ ಪೂರೈಸಲ್ಲ: ಇಂಡಿಯಾ ಒಕ್ಕೂಟದಲ್ಲಿ ಒಡಕು ಮೂಡಿದೆ. ಕಾಂಗ್ರೆಸ್ ಜೊತೆ ಹೋಗಲ್ಲ ಅಂತಾ ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇಂಡಿಯಾ ಒಕ್ಕೂಟ ಛಿದ್ರವಾಗಿ ಹೋಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರಲ್ಲ. ಸಿದ್ದರಾಮಯ್ಯ ಸರ್ಕಾರ ಪೂರ್ಣ ಅಧಿಕಾರ ಪೂರೈಸಲ್ಲ. ರಾಷ್ಟ್ರದಲ್ಲಿ ರಾಮಭಕ್ತರ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದರು.ಸಿದ್ದರಾಮಯ್ಯ ಇದೀಗ ಜೈ ಶ್ರೀರಾಮ್ ಅಂತಿದ್ದಾರೆ. ರಾಮ ಎಲ್ಲಾ ಹಿಂದೂಗಳನ್ನು ಒಟ್ಟು ಮಾಡಿದರೆ ಕಾಂಗ್ರೆಸ್ ಅಡ್ರೆಸ್ ಇಲ್ಲದಾಗೆ ಹೋಗುತ್ತದೆ. ಅದಕ್ಕೆ ನನ್ನ ಹೆಸರಿನಲ್ಲಿ ರಾಮ ಇದ್ದಾನೆ ಅಂತಿದ್ದಾರೆ. ರಾಮನ ಬಗ್ಗೆ ಈಗ ಭಕ್ತಿ ಬರುತ್ತಿದೆ. ಡಿ.ಕೆ.ಶಿವಕುಮಾರ್‌ ಅವರು ನನ್ನ ಹೆಸರಿನಲ್ಲಿ ಶಿವ ಇದ್ದಾನೆ ಅಂತಾರೆ. ರಾಮ ಬಜೆಪಿಯವರ ಮನೆ ಆಸ್ತಿನಾ? ಅಂತ ಹೇಳುತ್ತಿದ್ದಾರೆ. ರಾಮ ಯಾರ ಮನೆ ಆಸ್ತಿಯಲ್ಲ ಎಂದು ತಿರುಗೇಟು ನೀಡಿದರು. ಸಿದ್ದರಾಮಯ್ಯ ಬಹಳ ದೊಡ್ಡ ವಿಜ್ಞಾನಿ. ಅಯೋಧ್ಯೆಯಲ್ಲಿ ಸೀತಾ, ಲಕ್ಷಣ, ಆಂಜನೇಯನ ವಿಗ್ರಹ ಹಾಕಿಲ್ಲ ಎಂದಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕಣ್ಣು ಏನು ಕುರುಡಾಗಿರಬೇಕು. ಅಲ್ಲಿರೋದು ಬಾಲರಾಮ, ಬಾಲರಾಮ ಬಾಲನಿಗೆ ಮದುವೆ ಮಾಡಲು ಆಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ಮಾನ ಮರ್ಯಾದೆ ಇಟ್ಟುಕೊಂಡು ಟೀಕೆ ಮಾಡಲಿ. ರಾಷ್ಟ್ರ ಭಕ್ತಿ, ರಾಮನನ್ನು ಇಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ. ಯಾರು ಗೆಲ್ತಾರೆ ನೋಡೋಣ ಎಂದು ಸವಾಲು ಹಾಕಿದರು.ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಕ್ಕೆ ದ್ರೋಹ ಮಾಡುತ್ತಿದೆ. ಸಿದ್ದರಾಮಯ್ಯ ತಾವು ಹಿಂದುಳಿದ ವರ್ಗದ ನಾಯಕ, ದಲಿತ ನಾಯಕರು ಎನ್ನುತ್ತಾರೆ.ಜಾತಿ ಜನಗಣತಿ ವರದಿ ರೆಡಿ ಇದ್ದರೂ ಬಿಡುಗಡೆ ಮಾಡಿಲ್ಲ. ನಾಳೆ ಕೊಡ್ತೀವಿ, ನಾಡಿದ್ದು ಕೊಡ್ತೀವಿ ಅಂತಾ ಹೇಳುತ್ತಾ ಬಂದಿದ್ರು, ಜಯಪ್ರಕಾಶ್ ಹೆಗ್ಡೆ ಅವರು ಸಿಎಂ ಹೇಳಿದಾಗ ಕೊಡುತ್ತೇವೆ ಎಂದಿ ದ್ದಾರೆ. ವರದಿ ರೆಡಿ ಇದ್ದರೂ ಸರ್ಕಾರ ವಿಳಂಬ ಮಾಡುತ್ತಿದೆ. ಹಿಂದುಳಿದ ವರ್ಗಕ್ಕೆ ಸರ್ಕಾರ ದ್ರೋಹ ಮಾಡುತ್ತಿದೆ ಎಂದು ಆಪಾದಿಸಿದರು. ಸಿದ್ದರಾಮಯ್ಯ ಹಿಂದೂಗಳನ್ನು ಒಡೆಯುವ ಕೆಲಸ ಮಾಡ್ತಿದ್ದಾರೆ. ಈ ನಡುವೆ ಚಿತ್ರದುರ್ಗದಲ್ಲಿ ಅಹಿಂದ ಸಮಾವೇಶ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ಚೇಲಾಗಳನ್ನು ಬಿಟ್ಟು ಈ ಬಗ್ಗೆ ಹೇಳಿಕೆ ಕೊಡಿಸುತ್ತಿದ್ದಾರೆ. 9 ವರ್ಷದಿಂದ ಜಾತಿ ಜನಗಣತಿ ವರದಿ ಬಿಡುಗಡೆ ಮಾಡಲು ವಿಳಂಬ ಯಾಕೆ ಎಂದು ಪ್ರಶ್ನಿಸಿದರು.

ದೇಶದ ಹಿಂದುಳಿದ ವರ್ಗದ ನಾಯಕ ಕರ್ಪೂರಿ ಠಾಕುರ್ ಅವರಿಗೆ ಭಾರತ ಸರ್ಕಾರ ಭಾರತ ರತ್ನ ಪ್ರಶಸ್ತಿ ಘೋಷಿಸಿದೆ. ಕರ್ಪೂರಿ ಅವರು ತುರ್ತು ಪರಿಸ್ಥಿತಿಯಲ್ಲಿ ಸರ್ವಾಧಿಕಾರಿ ಧೋರಣೆ ವಿರೋಧಿಸಿ ಜೈಲುವಾಸ ಅನುಭವಿಸಿದ್ದರು. ಕರ್ಪೂರಿ ಅವರಿಗೆ ಪ್ರಶಸ್ತಿ ಘೋಷಿಸಿದ ಕೇಂದ್ರ ಸರ್ಕಾರಕ್ಕೆ ಅಭಿನಂದಿಸುತ್ತೇನೆ ಎಂದರು.ನನ್ನ ಭವಿಷ್ಯ ನಿಜವಾಗಿದೆ: ಈಶ್ಚರಪ್ಪ ಜಗದೀಶ್‌ ಶೆಟ್ಟರ್‌ ಅವರ ಮೈಯಲ್ಲಿ ಹರಿಯುತ್ತಿರುವುದು ಹಿಂದೂ ರಕ್ತ. ಅವರದು ಕಾಂಗ್ರೆಸ್‌ನ ಬೆರಕೆ ರಕ್ತ ಅಲ್ಲ. ಅವರು ಮತ್ತೆ ವಾಪಸ್‌ ಬರುತ್ತಾರೆ ಎಂದು ಅವರು ಕಾಂಗ್ರೆಸ್‌ಗೆ ಹೋದ ದಿನವೇ ನಾನು ಹೇಳಿದ್ದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.ಜಗದೀಶ್ ಶೆಟ್ಟರ್ ಯಾವಾಗ ಬಿಜೆಪಿಗೆ ರಾಜೀನಾಮೆ ಕೊಟ್ಟಿರೋ ಅವತ್ತು ಹೇಳಿದ್ದಿಷ್ಟೇ, ಅವರು ಕಾಂಗ್ರೆಸ್‌ ಸಿದ್ಧಾಂತವನ್ನು ಒಪ್ಪುವುದಿಲ್ಲ. ಅವರು ಇಲ್ಲ ಬಹಳ ದಿನ ಇರು ವುದಿಲ್ಲ. ಇಂದಲ್ಲ, ನಾಳೆ ಜಗದೀಶ್ ಶೆಟ್ಟರ್ ಬಿಜೆಪಿಗೆ ಬರುತ್ತಾರೆ ಎಂದು ಹೇಳಿದ್ದೆ. ಅದೇ ರೀತಿ ಅವರು ಬಿಜೆಪಿಗೆ ವಾಪಸ್‌ ಬರುತ್ತಿದ್ದಾರೆ. ಬಿಜೆಪಿಯಿಂದ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಬಿಜೆಪಿಯಿಂದ ಒಂದು ಹುಳ ಬಂದಿರುವುದನ್ನು ಅವರು ತೋರಿಸಲಿ ಎಂದು ಕುಟುಕಿದರು.ಜಗದೀಶ್‌ ಶೆಟ್ಟರ್‌ ಹುಟ್ಟಿನಿಂದಲೇ ಆರ್‌ಎಸ್‌ಎಸ್‌ ಕಟ್ಟಾಳು: ಆರಗ ತೀರ್ಥಹಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿಗೆ ಪುನರ್ ಸೇರ್ಪಡೆಗೊಂಡಿರುವುದರಿಂದ ಪಕ್ಷಕ್ಕೆ ವಿಶೇಷ ಬಲ ಬಂದಿದ್ದು ಅವರನ್ನು ತುಂಬು ಹೃದಯದಿಂದ ಸ್ವಾಗತಿಸುವುದಾಗಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಹುಟ್ಟಿನಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಟ್ಟಾಳುವಾಗಿದ್ದ ಜಗದೀಶ್ ಶೆಟ್ಟರ್‍ವರಿಗೆ ಕಾಂಗ್ರೆಸ್ ಸಂಸ್ಕøತಿಗೆ ಒಗ್ಗಿಕೊಳ್ಳಲು ಸಾಧ್ಯವೇ ಇರಲಿಲ್ಲಾ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರಿಗಾಗಿದ್ದ ಅಸಮಾಧಾನದಿಂದಾಗಿ ಪಕ್ಷವನ್ನು ತ್ಯಜಿಸಿದ್ದರು. ಇದೀಗ ರಾಷ್ಟ್ರೀಯ ಮುಖಂಡರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಪಕ್ಷದ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಿದೆ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಸ್ಥಾನ ಸೇರಿದಂತೆ ಬಿಜೆಪಿಯಲ್ಲಿ ಎಲ್ಲ ರೀತಿಯ ಸ್ಥಾನಮಾನಗಳನ್ನೂ ಅನುಭವಿಸಿದವರು. ಮಾಜಿ ಸಿಎಂ ಯಡ್ಯೂರಪ್ಪನವರು ಹಾಗೂ ಬಿ.ವೈ.ವಿಜಯೇಂದ್ರರವರ ನೇತೃತ್ವದಲ್ಲಿ ಪಕ್ಷಕ್ಕೆ ಶಕ್ತಿ ತುಂಬುವುದರಲ್ಲಿ ಶೆಟ್ಟರ್ ಅವರ ನೆರವು ಸಹಕಾರಿಯಾಗಲಿದೆ ಎಂದು ಆರಗ ಜ್ಞಾನೇಂದ್ರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Share this article